ಅರ್ಜುನ್​ ಸರ್ಜಾ ಕಿರಿಯ ಮಗಳ ನಿಶ್ಚಿತಾರ್ಥ; ಎಂಗೇಜ್ಮೆಂಟ್​ ಫೋಟೋ ಹಂಚಿಕೊಂಡ ಅಂಜನಾ| Arjun sarja

arjun sarja daughter
Published on

Arjun sarja | ಕನ್ನಡದ ಆಕ್ಷನ್ ಹೀರೋ ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ ಶೀಘ್ರದಲ್ಲೇ ಮದುವೆ ಆಗಲಿದ್ದಾರೆ. ಇತ್ತೀಚೆಗೆ ಅವರು ತನ್ನ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಂಜನಾ ತಮ್ಮ ಎಂಗೇಜ್ಮೆಂಟ್​ ಪೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಂಜನಾ ತನ್ನ 13 ವರ್ಷದ ಲವ್ ಸ್ಟೋರಿಯನ್ನ ಇದೀಗ ಮನೆಯವರಿಗೆ ತಿಳಿಸಿದ್ದು, ವಿದೇಶಿ ಹುಡುಗನ ಜೊತೆ ಅಂಜನಾ ಪ್ರೀತಿಗೆ ಮನೆಯವರು ಒಪ್ಪಿಗೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಅರ್ಜುನ್ ಸರ್ಜಾ ಅವರ ಮೊದಲ ಪುತ್ರಿ ಐಶ್ವರ್ಯಾ ಅವರ ವಿವಾಹವನ್ನು ಬಹಳ ಜೋರಾಗಿ ನೆರವೇರಿಸಲಾಗಿತ್ತು. ಇದೀಗ ಗೆಳಯನ ಜೊತೆ ಅಂಜನಾ ಅರ್ಜುನ್‌ ಫೋಟೋ ಶೂಟ್‌ ಮಾಡಿಸಿಕೊಂಡು ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net