ಈ ತಿಂಗಳಲ್ಲಿ ಜನಿಸಿದವರಿಗೆ ಬೊಜ್ಜಿನ ಸಮಸ್ಯೆ ಬರೋದು ಸಾಮಾನ್ಯ? ಇದು ಜ್ಯೋತಿಷ್ಯವಲ್ಲ; ವಿಜ್ಞಾನಿಗಳೇ ಖಚಿತಪಡಿಸಿದ್ದಾರೆ| Health

baby birth

Health| ಕೆಲವರು ಬೇಸಿಗೆಯಲ್ಲಿ ಜನಿಸಿದರೆ ಇನ್ನೂ ಕೆಲವರು ಚಳಿಗಾಲದಲ್ಲಿ ಜನಿಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಜನಿಸುವುದರಿಂದ ಅದು ಆರೋಗ್ಯದ ಮೇಲೆ ಏನಾದರೂ ಪರಿಣಾಮ ಬೀರುತ್ತಾ? ನಿರ್ದಿಷ್ಟ ದಿನಾಂಕದಂದು ಜನಿಸಿದರೆ ಅವರ ಆರೋಗ್ಯ ಹೇಗಿರುತ್ತದೆ ಎಂಬುದರ ಕುರಿತು ಜನರು ಸಾಮಾನ್ಯವಾಗಿ ಜ್ಯೋತಿಷ್ಯ ತಜ್ಞರಿಂದ ಮಾಹಿತಿಯನ್ನು ಪಡೆಯುತ್ತಾರೆ. ಆದರೆ ಮೊದಲ ಬಾರಿಗೆ ಒಬ್ಬರ ಬೊಜ್ಜು ಜನನ ಸಮಯಕ್ಕೆ ಸಂಬಂಧಿಸಿರಬಹುದು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.

blank

ಇದನ್ನೂ ಓದಿ:ಅರ್ಜುನ್​ ಸರ್ಜಾ ಕಿರಿಯ ಮಗಳ ನಿಶ್ಚಿತಾರ್ಥ; ಎಂಗೇಜ್ಮೆಂಟ್​ ಫೋಟೋ ಹಂಚಿಕೊಂಡ ಅಂಜನಾ| Arjun sarja

ಜಪಾನ್‌ನ ತೋಹುಕು ವಿಶ್ವವಿದ್ಯಾಲಯದ ಹೊಸ ಅಧ್ಯಯನ ನಡೆಸಿದ್ದು, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಜನಿಸಿದ ಜನರು ಕಂದು ಅಡಿಪೋಸ್ ಅಂಗಾಂಶ ಚಟುವಟಿಕೆಯನ್ನು ಬಹಳ ಕಡಿಮೆ ಹೊಂದಿರುತ್ತಾರೆ ಎಂದು ಕಂಡುಹಿಡಿದಿದೆ. ಕಂದು ಅಡಿಪೋಸ್ ಅಂಗಾಂಶವು ದೇಹದಲ್ಲಿ ಸಂಗ್ರಹವಾಗಿರುವ ಒಂದು ರೀತಿಯ ಕೊಬ್ಬಿನ ಅಂಗಾಂಶವಾಗಿದೆ. ಅದು ಜೀರ್ಣವಾಗದಿದ್ದರೆ, ಅದು ಕೊಬ್ಬಿನಂತೆ ಸಂಗ್ರಹವಾಗುತ್ತದೆ ಮತ್ತು ಬೊಜ್ಜು ಹೆಚ್ಚಾಗುತ್ತದೆ ಹೇಳಿದೆ.

Belly Fat

ಸಂಶೋಧಕರ ಪ್ರಕಾರ ಕಂದು ಅಡಿಪೋಸ್ ಅಂಗಾಂಶ ಹೆಚ್ಚಾದರೆ, ಅದು ದೇಹದ ಆಂತರಿಕ ಅಂಗಗಳ ಸುತ್ತಲೂ ಸಂಗ್ರಹವಾಗಲು ಪ್ರಾರಂಭಿಸುತ್ತದೆ ಮತ್ತು ದೇಹದ ಶಕ್ತಿಯ ಬಳಕೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ. ಇದೇ ಕಾರಣದಿಂದ ಬೊಜ್ಜು ಹೆಚ್ಚಾಗಲು ಆರಂಭವಾಗುತ್ತದೆ.
ಆದರೆ ಸೆಪ್ಟೆಂಬರ್-ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಜನಿಸಿದ ವ್ಯಕ್ತಿ ತುಲನಾತ್ಮಕವಾಗಿ ಸ್ಲಿಮ್ ಆಗಿರುತ್ತಾನೆ. ಅಂತಹ ವ್ಯಕ್ತಿಗಳ ಕಂದು ಅಡಿಪೋಸ್ ಅಂಗಾಂಶವು ತುಂಬಾ ಸಕ್ರಿಯವಾಗಿರುತ್ತದೆ ಮತ್ತು ಶಕ್ತಿಯು ವೇಗವಾಗಿ ಉತ್ಪತ್ತಿಯಾಗುತ್ತದೆ. ಅಂದಹಾಗೆ ಸುತ್ತಮುತ್ತಲಿನ ಪರಿಸರ ಮತ್ತು ಹವಾಮಾನವು ಮಾನವ ರಚನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನವು ಹೇಳಿದೆ.

ಇದನ್ನೂ ಓದಿ: ಕೊನೆಗೂ ಬಿಗ್​ಬಾಸ್​ ರಜತ್​ಗೆ ಜಾಮೀನು ಮಂಜೂರು | Biggboss

ಸಂಶೋಧಕರು ಈ ಅಧ್ಯಯನದಲ್ಲಿ 3 ರಿಂದ 78 ವರ್ಷ ವಯಸ್ಸಿನ 683 ಜನರನ್ನು ಒಟ್ಟುಗೂಡಿಸಿ, ಅವರನ್ನು ತಿಂಗಳಿಗೆ ಅನುಗುಣವಾಗಿ ವಿವಿಧ ಗುಂಪುಗಳಾಗಿ ವಿಂಗಡಿಸಲಾಗಿದೆ. ಇದರಿಂದ ಬೇಸಿಗೆಯಲ್ಲಿ ಜನಿಸಿದ ಜನರು ಸಾಮಾನ್ಯವಾಗಿ ಕಂದು ಅಡಿಪೋಸ್ ಅಂಗಾಂಶದ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಮತ್ತು ಚಳಿಗಾಲದಲ್ಲಿ ಜನಿಸಿದವರು ಕಡಿಮೆ ಅಪಾಯವನ್ನು ಹೊಂದಿರುತ್ತಾರೆ ಎಂಬುದು ಸಾಬೀತಾಗಿದೆ.

ಕಂದು ಅಡಿಪೋಸ್ ಅಂಗಾಂಶವು ವಾತಾವರಣ ಮತ್ತು ಹವಾಮಾನಕ್ಕೆ ಸಂಬಂಧಿಸಿದೆ ಎಂದು ಈ ಅಧ್ಯಯನವು ಕಂಡುಹಿಡಿದಿದೆ ಎಂದು ಸಂಶೋಧನೆಯ ಲೇಖಕರು ತಿಳಿಸಿದ್ದಾರೆ. ಗರ್ಭಧಾರಣೆಯ ಸಮಯದಲ್ಲಿ ಚಳಿಗಾಲದ ಹವಾಮಾನವು ಭ್ರೂಣದ ಬೆಳವಣಿಗೆಯನ್ನು ಹೆಚ್ಚಿಸಲು ವೀರ್ಯವನ್ನು ಉತ್ತೇಜಿಸುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಎಂದು ಹಿಂದಿನ ಅಧ್ಯಯನವು ಕಂಡುಹಿಡಿದಿದೆ. ಅದೇ ಸಮಯದಲ್ಲಿ ಈ ರೀತಿಯಲ್ಲಿ ಅಭಿವೃದ್ಧಿಪಡಿಸಿದ ಭ್ರೂಣದ ಶೀತ ತಾಪಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯವೂ ಹೆಚ್ಚಾಗುತ್ತದೆ. ಈ ಅಧ್ಯಯನವು ಭ್ರೂಣದ ಬೆಳವಣಿಗೆ ಮತ್ತು ನಂತರದ ಸಮಸ್ಯೆಗಳಿಗೆ ಹವಾಮಾನ ಮತ್ತು ಪರಿಸರವನ್ನು ಸಹ ಸಂಬಂಧಿಸಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

(ಏಜೆನ್ಸೀಸ್)

ಅರ್ಜುನ್​ ಸರ್ಜಾ ಕಿರಿಯ ಮಗಳ ನಿಶ್ಚಿತಾರ್ಥ; ಎಂಗೇಜ್ಮೆಂಟ್​ ಫೋಟೋ ಹಂಚಿಕೊಂಡ ಅಂಜನಾ| Arjun sarja

Share This Article

ಅಧಿಕ ನೀರು ಕುಡಿಯುವುದರಿಂದ ಈ 6 ದೊಡ್ಡ ಸಮಸ್ಯೆಗಳು ಕಾಡಬಹುದಂತೆ! | Drinking water

Drinking water:ಸಾಮಾನ್ಯವಾಗಿ ನೀರು ಕುಡಿಯವುದರಿಂದ ಅನೇಕ ರೋಗದ ಸಮಸ್ಯೆಗಳು ದೂರುವಾಗುತ್ತದೆ. ಅಲ್ಲದೆ, ಆರೋಗ್ಯಕ್ಕೆ ಊಟ ಎಷ್ಟು…

ಪದೇಪದೆ ವಿವಾಹದ ಪ್ರಸ್ತಾಪಗಳು ಮುರಿದು ಬೀಳುತ್ತಿದೆಯೇ? ಈ ಕ್ರಮಗಳು ಅನುಸರಿಸಿ; ಮದುವೆಯ ಅಡೆತಡೆಗಳನ್ನು ನಿವಾರಿಸಿ | Marriage Proposals

Marriage Proposals : ಜೀವನದ ಅತಿದೊಡ್ಡ ತಿರುವು ಎಂದ್ರೆ ಅದು ಮದುವೆ. ಮದುವೆ ಎಂದ್ರೆ ಎಲ್ಲರಿಗೂ…

ಸ್ನಾಕ್ಸ್​ ತಿನ್ನುವುದರಿಂದಲೂ ತೂಕ ಇಳಿಸಿಕೊಳ್ಳಬಹುದು!: ಈ ಸಿಂಪಲ್​ ಹೆಲ್ತ್​​ ಟಿಪ್ಸ್​ ಫಾಲೋ ಮಾಡಿ.. | Weight Lose

Weight Lose: ಸರಿಯಾದ ಆಯ್ಕೆಗಳೊಂದಿಗೆ ಸ್ನಾಕ್ಸ್ ತಿನ್ನುವುದರಿಂದಲೂ ಕೂಡ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ…