ಅವರೇನಾ ಇವರು? ಅಪ್ಪು ಜತೆ ನಟಿಸಿದ್ದ ಸೌತ್​ ಬ್ಯೂಟಿಯ ಹೊಸ ಅವತಾರ ಕಂಡು ಹುಬ್ಬೇರಿಸಿದ ಫ್ಯಾನ್ಸ್​! South Actress

South Actress
Published on

South Actress : ಮಲಯಾಳಂ ಬ್ಯೂಟಿ ಪಾರ್ವತಿ ಥಿರುವೊತ್ತು ಅವರನ್ನು ಕನ್ನಡಿಗರಿಗೆ ವಿಶೇಷವಾಗಿ ಪರಿಚಯಿಸಬೇಕಿಲ್ಲ. ದಿವಂಗತ ನಟ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ಮಿಲನ ಹಾಗೂ ಪೃಥ್ವಿ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿಯೂ ಪಾರ್ವತಿ ನಟಿಸಿದ್ದು, ತಮ್ಮ ನಟನೆಯಿಂದಲೇ ಒಳ್ಳೆಯ ಹೆಸರು ಮಾಡಿದ್ದಾರೆ.

ಕೇವಲ ನಟನೆ ಮಾತ್ರವಲ್ಲದೆ, ಸಮಾಜದಲ್ಲಿ ನಡೆಯುವ ಅನ್ಯಾಯ ಹಾಗೂ ಮಹಿಳೆಯ ಮೇಲಿನ ದೌರ್ಜನ್ಯದ ವಿರುದ್ಧ ಪಾರ್ವತಿ ಅವರು ಸದಾ ಧ್ವನಿ ಎತ್ತುತ್ತಾರೆ. ಹೀಗಾಗಿ, ಪಾರ್ವತಿ ಅವರನ್ನು ಸಾಕಷ್ಟು ಮಂದಿ ಇಷ್ಟಪಡುತ್ತಾರೆ.

ತಾಜಾ ಸಂಗತಿ ಏನೆಂದರೆ, ಪ್ರಸ್ತುತ ಪಾರ್ವತಿ ಅವರು ಹಂಚಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಬಹಳ ವಿಚಿತ್ರವಾಗಿ ಮೇಕಪ್​ ಮಾಡಿಕೊಂಡು ಅರೆಬರೆ ಬಟ್ಟೆ ಧರಿಸಿ, ಕ್ಯಾಮೆರಾಗೆ ಮಾದಕವಾಗಿ ಪೋಸ್​ ನೀಡಿದ್ದಾರೆ. ವಿವಿಧ ಭಂಗಿಗಳಲ್ಲಿ ತುಂಬಾ ಬೋಲ್ಡ್​ ಆಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಪಾರ್ವತಿ ಅಚ್ಚರಿ ಮೂಡಿಸಿದ್ದಾರೆ.

ಫೋಟೋ ಕುರಿತು "ಮತ್ತು ಅಲ್ಲಿ... ಅವಳು ಉದಯಿಸುತ್ತಾಳೆ" ಎಂದು ಶೀರ್ಷಿಕೆ ನೀಡಿದ್ದಾರೆ. ಅಲ್ಲದೆ, ತುಂಬಾ ಕೊಳಕು ಹ್ಯಾಲೋವೀನ್​ಗಾಗಿ ಇದನ್ನು ಮಾಡಿದ್ದಕ್ಕಾಗಿ ದಿ ಡರ್ಟಿ ಮ್ಯಾಗಜಿನ್​ಗೆ ಧನ್ಯವಾದಗಳು ಎಂದು ಪಾರ್ವತಿ ಹೇಳಿದ್ದಾರೆ.

ಇನ್ನು ಪಾರ್ವತಿ ಅವರ ಫೋಟೋ ನೋಡಿದವರು ಮೊದಲ ನೋಟದಲ್ಲಿ ಪಾರ್ವತಿ ಎಂದು ಗುರುತಿಸುವುದು ತುಂಬಾ ಕಷ್ಟ. ಏಕೆಂದರೆ, ಪಾರ್ವತಿ ಅವರು ಕಂಪ್ಲೀಟ್​ ಡಿಫರೆಂಟ್ ಆಗಿ ಕಾಣಿಸುತ್ತಿದ್ದಾರೆ. ಸದ್ಯ​ ಈ ಫೋಟೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋ ನೋಡಿದ ಅನೇಕ ಮಂದಿ ಸೂಪರ್, ಎಂಥಾ ನೋಟ, ಇದು ಹ್ಯಾಲೋವೀನ್ ವೇಷಭೂಷಣವೇ ಎಂದೆಲ್ಲ ಕಾಮೆಂಟ್​ ಮಾಡುತ್ತಿದ್ದಾರೆ. ಅಲ್ಲದೆ, ನಮ್ಮ ಅಪ್ಪು ಜತೆ ಮಿಲನ ಹಾಗೂ ಪೃಥ್ವಿ ಸಿನಿಮಾದಲ್ಲಿ ನಟಿಸಿದ ನಟಿ ಇವರೇನಾ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಏನಿದು ಹ್ಯಾಲೋವಿನ್​?

ಹ್ಯಾಲೋವೀನ್ ಆಚರಣೆಯು ಅಕ್ಟೋಬರ್ 31ರಂದು ಆಚರಿಸುವ ಪಾಶ್ಚಾತ್ಯ ಸಂಸ್ಕೃತಿಯ ಒಂದು ಉತ್ಸವವಾಗಿದೆ. ಇದು ಪುರಾತನ ಕೆಲ್ಟಿಕ್ ಹಬ್ಬಗಳು ಮತ್ತು ಕ್ರಿಶ್ಚಿಯನ್ ಎಲ್ಲ್ ಸೇಂಟ್ಸ್ ಡೇಯಿಂದ ಪ್ರೇರಣೆ ಪಡೆದಿದೆ. ಭೂತ-ಪ್ರೇತಗಳು, ಭಯಾನಕ ಕಥೆಗಳು ಮತ್ತು ಮರಣದ ನೆನಪಿನ ಥೀಮ್‌ಗಳನ್ನು ಈ ಆಚರಣೆ ಒಳಗೊಂಡಿದೆ. ಇದರಲ್ಲಿ ಮಕ್ಕಳು ವಿಚಿತ್ರ ವೇಷಭೂಷಣಗಳೊಂದಿಗೆ ಮನೆಮನೆಗೆ ತಿರುಗಿ 'ಟ್ರಿಕ್ ಅಥವಾ ಟ್ರೀಟ್' ಎಂದು ಕೇಳಿ ಸಿಹಿ ತಿನಿಸುಗಳನ್ನು ಸಂಗ್ರಹಿಸುತ್ತಾರೆ. ಪಾರ್ಟಿಗಳು, ಹಾರರ್ ಮೂವಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಚರಣೆ ಮಾಡಲಾಗುತ್ತದೆ. ಇದರಲ್ಲಿ ಬಾಲಿವುಡ್​, ಹಾಲಿವುಡ್​ ಕಲಾವಿದರು ಕೂಡ ಚಿತ್ರ ವಿಚಿತ್ರ ವೇಷಭೂಷಣಗಳಲ್ಲಿ ಭಾಗವಹಿಸಿ ಸಂಭ್ರಮಾಚರಣೆ ಮಾಡುತ್ತಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net