ಪಾತ್ರಕ್ಕಾಗಿ ಪಲ್ಲಂಗ: ಅನುಷ್ಕಾ ಶೆಟ್ಟಿ ಪಾರಾಗಿದ್ಹೇಗೆ? ಕಾಲಿವುಡ್​ ಬಗ್ಗೆ ಕನ್ನಡತಿ ಹೇಳಿದ್ದೇನು?

Anushka
Published on

ಹೈದರಾಬಾದ್​: ಕಾಸ್ಟಿಂಗ್​ ಕೌಚ್​ ಎಂಬುದು ಸಿನಿರಂಗದ ಒಂದು ಪೆಡಂಭೂತ. ಸ್ಟಾರ್​ ನಟಿಯರೇ ಇದರ ಬಲೆಗೆ ಸಿಲುಕಿದ್ದಾಗಿ ಸಂದರ್ಶನಗಳಲ್ಲಿ ಮುಕ್ತವಾಗೇ ಹೇಳಿಕೊಂಡಿದ್ದಾರೆ. ಅನೇಕರು ಕಹಿ ಅನುಭವವನ್ನು ಎದರಿಸಿಯೂ ಇದ್ದಾರೆ. ಇದೇ ಕಾಸ್ಟಿಂಗ್​ ಕೌಚ್​ ಬಾಹುಬಲಿ ಬೆಡಗಿ ಹಾಗೂ ಕನ್ನಡತಿ ಅನುಷ್ಕಾ ಶೆಟ್ಟಿಯವರನ್ನು ಕಾಡಿತ್ತು ಎಂಬುದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅನುಷ್ಕಾ, ಕಾಸ್ಟಿಂಗ್​ ಕೌಚ್ ಎಂಬುದು​ ಟಾಲಿವುಡ್​ನಲ್ಲೂ ಇದೆ. ನಾನು ದಿಟ್ಟ ಹಾಗೂ ನೇರ ಸ್ವಭಾವದವಳಾಗಿರುವುದರಿಂದ ಕಾಸ್ಟಿಂಗ್​ ಕೌಚ್​ನಿಂದ ಒಮ್ಮೆ ಪಾರಾದೆ ಎನ್ನುವ ಮೂಲಕ ಆ ಬಗ್ಗೆ ಹೆಚ್ಚಿನ ವಿವರಣೆ ನೀಡಲು ನಿರಾಕರಿಸಿದರು. ಅಂದಿನಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನನ್ನು ಯಾರೂ ಸಹ ಕೆಟ್ಟದಾಗಿ ನಡೆಸಿಕೊಂಡಿಲ್ಲ. ಸಿನಿಮಾ ರಂಗಕ್ಕೆ ಯಾರು ಹೊಸದಾಗಿ ಬರುತ್ತಾರೋ ಅವರಿಗೆ ಕಾಸ್ಟಿಂಗ್​ ಕೌಚ್​ ಎದುರಾಗುವುದು ಸಾಮಾನ್ಯವಾಗಿ ಬಿಟ್ಟಿದೆ ಎಂದರು.

ನನ್ನ ನೇರ ನುಡಿಯಿಂದಾಗಿ ಎಂದಿಗೂ ನಾನು ಕಾಸ್ಟಿಂಗ್​ ಕೌಚ್​ ಪರಿಸ್ಥಿತಿಯನ್ನು ಎದುರಿಸಿಲ್ಲ ಮತ್ತೆ ಪುನರುಚ್ಛರಿಸಿದ ಅನುಷ್ಕಾ, ಇಂತಹ ವಿಷಮ ಪರಿಸ್ಥಿತಿ ಯಾರಿಗಾದರೂ ಎದುರಾಗುತ್ತದೋ ಅದನ್ನು ಹೇಗೆ ನಿಭಾಯಿಸುತ್ತೀರಿ ಎಂಬುದು ನಿಮ್ಮ ಆಯ್ಕೆ ಬಿಟ್ಟಿದ್ದು ಎಂದು ಮಹಿಳಾ ಕಲಾವಿದೆಯರಿಗೆ ಅನುಷ್ಕಾ ಸಲಹೆ ನೀಡಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಸಸ್ಪೆನ್ಸ್​ ಥ್ರಿಲ್ಲರ್​ ನಿಶಬ್ಧಂ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅನುಷ್ಕಾ ನಟಿಸಿದ್ದಾರೆ. ಚಿತ್ರವನ್ನು ಕೊನಾ ವೆಂಕಟ್​ ನಿರ್ದೇಶಿಸಿದ್ದು, ಬಿಡುಗಡೆಗೆ ಸಿದ್ಧವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net