More

    VIDEO| ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಹಾಕಿ ಕೊಂದ ಬಳಿಕ ಅತ್ಯಾಚಾರ​: ಸಿಸಿಟಿವಿಯಲ್ಲಿ ಭೀಕರ ಕೃತ್ಯ ಸೆರೆ!

    ಹಾಸನ: ಮಂಗಳವಾರ ಬೆಳ್ಳಂಬೆಳಗ್ಗೆ ಹಾಸದ ಬಿಎಮ್ ರಸ್ತೆಯ ಖಾಸಗಿ ಬ್ಯಾಂಕ್ ಒಂದರ ಮಳಿಗೆ ಮುಂಭಾಗ ಅನಾಥ ಮಹಿಳೆ ಶವ ಪತ್ತೆಯಾಗಿತ್ತು. ಆಕೆಯದ್ದು ಕೊಲೆಯಂತ ಖಾತರಿಯಾದ್ರೂ ಆಕೆಯ ಕೊಲೆಯ ಭೀಕರತೆ ಎಷ್ಟಿತ್ತು ಎಂಬುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೆರೆದಿಟ್ಟಿವೆ.

    ಹಾಸನ ನಗರ ಠಾಣಾ ವ್ಯಾಪ್ತಿಯಲ್ಲಿ ಹತ್ಯೆಗೀಡಾದ ಮಹಿಳೆಯ ಅಂದಾಜು ಸುಮಾರು 35-40. ಆದರೆ, ಮಹಿಳೆ ಯಾರು ಅನ್ನೋ ಗುರುತು ಸಿಕ್ಕಿರಲಿಲ್ಲ. ಹಾಗೆ ಹಾಸನ ನಗರ ಠಾಣೆ ಪೊಲೀಸ್ ಈ ಪ್ರಕರಣ ದಾಖಲಿಸಿಕೊಂಡು ಮಹಿಳೆ ಸಾವಿನ ಕೊಲೆ ಜಾಡು ಹಿಡಿದಿದರು.

    ಇದನ್ನೂ ಓದಿ: ಜಾಮೀನು ನೀಡಬೇಕಾದರೆ ನನ್ನೊಂದಿಗೆ ಮಲಗು ಎಂದ ಎಸ್​ಐಗೆ ಮಹಿಳೆ ಮಾಡಿದ್ದೇನು?

    ಕೊಲೆ ಪ್ರಕರಣ ಸಂಬಂಧ ಮಹಿಳೆ ಸತ್ತುಬಿದ್ದಿದ್ದ ಸಮೀಪದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ನಿಜಕ್ಕೂ ಎದೆ ನಡುಗುವ ದೃಶ್ಯಗಳು ಸಾಕ್ಷಿಗಳನ್ನು ತೆರೆದಿಟ್ಟಿವೆ. ಕಾಮುಕ ಕ್ರೂರಿಯೊಬ್ಬ ಮಹಿಳೆ ಕೈ ಮುಗಿದರು ಎಳೆದಾಡಿ ಹಲ್ಲೆ ಮಾಡಿ ನಂತರ ಮಲಗಿದಾಗ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಹಾಕಿ ಸಾಯಿಸಿದ್ದಾನೆ. ನಂತರ ತನ್ನ ಕ್ರೂರ ಕಾಮಮೆರೆದು ಮನುಕುಲವೇ ತಲೆ ತಗ್ಗಿಸೋ ಕೃತ್ಯವೆಸಗಿದ್ದಾನೆ.

    ಈ ಪ್ರಕರಣದ ಬಗ್ಗೆ ಹಾಸನ ಡಿಸಿ ಆರ್ ಗಿರೀಶ್ ಪ್ರತಿಕ್ರಿಯೆ ನೀಡಿದ್ದು ಆದಷ್ಟು ಬೇಗ ಆರೋಪಿ ಪತ್ತೆ ಹಚ್ಚಲು ಸೂಚನೆ ನೀಡಿರುವುದಾಗಿ ದಿಗ್ವಿಜಯ ನ್ಯೂಸ್​​ಗೆ ತಿಳಿಸಿದರು. ಜತೆಗೆ ಹಾಸನ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಕೂಡ ಈ ಸಂಬಂಧ ಮಾಹಿತಿ ಪಡೆದಿದ್ದಾರೆಂದು ಹೇಳಿಕೆ ನೀಡಿದರು.

    ಹಾಸನ ಎಸ್​ಪಿ ಶ್ರೀನಿವಾಸ್ ಗೌಡ ಕೂಡ ಪ್ರಕರಣದ ಬಗ್ಗೆ ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯೆ ನೀಡಿದ್ದು, ಈ ಹೀನ ವ್ಯಕ್ತಿಯನ್ನು ಪತ್ತೆ ಹಚ್ಚುವ ಭರವಸೆ ನೀಡಿದ್ದಾರೆ. ಆದರೆ ಈತ ಹಾಸನದವನ ಅಥವಾ ಹೊರ ಜಿಲ್ಲೆ ಅಥವಾ ಹೊರ ರಾಜ್ಯದವನ ಅನ್ನೊದು ಪೊಲಿಸ್ ತನಿಖೆಯಲ್ಲಿ ಬಯಲಾಗಲಿದೆ.

    ಹಾಸನ ಶಾಸಕ ಪ್ರೀತಮ್ ಗೌಡ ಮಾತನಾಡಿ, ಈ ಪ್ರಕರಣದಲ್ಲಿ ಕೊಲೆಯಾದ ಮಹಿಳೆ ನಿರ್ಗತಿಕಳೆಂದು ಯಾವುದೇ ಕಾರಣಕ್ಕೂ ಅಸಡ್ಡೆ ಮಾಡಲಾಗುವುದಿಲ್ಲ. ಈ ಪ್ರಕರಣದ ಆರೋಪಿಗೆ ಶಿಕ್ಷಯಾಗುವ ನಿಟ್ಟಿನಲ್ಲಿ ಆತನ ಪತ್ತೆಯಾಗಲೇಬೇಕೆಂದು ಪೊಲೀಸರಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.

    ಇದನ್ನೂ ಓದಿ: ದೇವರ ಕೋಣೆಯಲ್ಲಿತ್ತು ಮಗುವಿನ ಶವ: ತಂದೆ-ತಾಯಿಯಿಂದಲೇ ಕೃತ್ಯ, ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

    ನಿರ್ಗತಿಕ ಮಹಿಳೆಯ ಕೊಲೆ ಇಡಿ ಹಾಸನದ ಜನತೆಗೆ ಆತಂಕ ಉಂಟು ಮಾಡಿದೆ. ಇನ್ನು ಈ ಹೇಯ ರಾಕ್ಷಸಿ ಕೃತ್ಯ ಮಾಡಿದ ವ್ಯಕ್ತಿ ಎಲ್ಲಿಯವನು ಅನ್ನೊದು ಗುರುತಿಸೋ ಪ್ರಕ್ರಿಯೆ ನಿರಂತರವಾಗಿ ಹಾಸನ ಪೊಲೀಸ್ ಮಾಡುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಯಾರಾದ್ರು ಈ ಕೊಲೆ ಮಾಡಿರುವ ವ್ಯಕ್ತಿ ಗುರುತು ಸಿಕ್ಕಲ್ಲಿ ಹಾಸನ ಪೊಲೀಸರಿಗೆ ಮಾಹಿತಿ ನೀಡಿದಲ್ಲಿ ಆರೋಪಿ ಬಂಧಿಸುವಲ್ಲಿ ಸಹಾಯ ಆಗಲಿದೆ ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts