ಬಾಲಿವುಡ್​ನ ಸ್ಟಾರ್​ ನಟರ ಚಿತ್ರ ಹಣ ಗಳಿಸದಿರಲು ಕಾರಣವೇನು?; ಖ್ಯಾತ ನಟ ನೀಡಿದ ವಿವರಣೆ ಹೀಗಿದೆ

Bollywood Stars
Published on

ಮುಂಬೈ: ಕಳೆದ ಕೆಲ ವರ್ಷಗಳಿಂದ ಹಿಂದಿ ಚಿತ್ರರಂಗ ಯಾಕೋ ಮಂಕಾದಂತೆ ಕಾಣುತ್ತಿದ್ದು, ಬಾಕ್ಸ್​ಆಫೀಸ್​ನಲ್ಲಿ ಅಷ್ಟಾಗಿ ಸದ್ದು ಮಾಡಿಲ್ಲ. ಶಾರುಖ್​ ನಟನೆಯ ಪಠಾಣ್​, ಜವಾನ್​, ಸನ್ನಿ ಡಿಯೋಲ್​ ನಟನೆಯ ಗದರ್​-2, ರಣಬೀರ್​ ಕಪೂರ್​ ನಟನೆಯ ಅನಿಮಲ್​ ಚಿತ್ರ ಹೊರತುಪಡಿಸಿದರೆ ಪ್ರಮುಖ ಸ್ಟಾರ್​ ನಟರ ಚಿತ್ರಗಳು ಹೇಳಿಕೊಳ್ಳುವಂತಹ ಯಶಸ್ಸು ಪಡೆದಿಲ್ಲ. ಅದರಲ್ಲಿ ನೋಡುವುದಾದರೆ ಬಾಲಿವುಡ್​ನ ಪ್ರಮುಖ ಸ್ಟಾರ್​ಗಳಾದ ಅಕ್ಷಯ್​ ಕುಮಾರ್​, ಸಲ್ಮಾನ್​ ಖಾನ್​ ಹಾಗೂ ಆಮೀರ್​ ಖಅನ್​ ಚಿತ್ರಗಳು ಸಹ ಮಕಾಡೆ ಮಲಗಿವೆ. ಇದಕ್ಕೆ ಸಂಬಂಧಿಸಿದಂತೆ ಬಾಲಿವುಡ್​ನ ಸ್ಟಾರ್​ ನಟರೊಬ್ಬರು ಉತ್ತರ ಕಂಡು ಹಿಡಿದುಕೊಂಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೆ ತುತ್ತಾಗಿ ಸಾವಿನ ದವಡೆಯಿಂದ ಪಾರಾಗಿದ್ದ ನಟ ಶ್ರೇಯಸ್​​ ತಲ್ಪಡೆ ಈ ಕುರಿತು ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ದೊಡ್ಡ ಸ್ಟಾರ್​ ನಟ ಸಿನಿಮಾಗಳು ಈಗ ಏಕೆ ಸರಿಯಾಗಿ ಬಿಸ್ನೆಸ್ ಮಾಡುತ್ತಿಲ್ಲ ಎನ್ನುವ ಬಗ್ಗೆ ಮಾತನಾಡಿದ್ದಾರೆ.

 ಮೇ 17ರಂದು ಬಿಡುಗಡೆಯಾಗಲಿರುವ ಕರ್ತಂ ಭೂಗ್ತಂ ಚಿತ್ರದ ಪ್ರಮೋಷನ್​ ವೇಳೆ ಮಾತನಾಡಿದ ಶ್ರೇಯಸ್​, ಇತ್ತೀಚಿನ ವರ್ಷಗಳಲ್ಲಿ ಜನರು ಸಿನಿಮಾ ಯಾವ ಜಾನರ್​ನಲ್ಲಿ ಇರಲಿದೆ ಎಂಬುದು ಟ್ರೇಲರ್ ನೋಡಿಯೇ ನಿರ್ಧರಿಸುತ್ತಾರೆ. ನೀವು ನಿಮ್ಮ ಸಿನಿಮಾಗಳನ್ನು ಎಷ್ಟೇ ಪ್ರಚಾರ ಮಾಡಿದರೂ ಸಿನಿಮಾದ ಟ್ರೇಲರ್ ಚೆನ್ನಾಗಿಲ್ಲದಿದ್ದರೆ ವರ್ಕೌಟ್ ಆಗುವುದಿಲ್ಲ. ಕೆಲವೊಮ್ಮೆ ಇದನ್ನು ಬಾಯಿ ಮಾತಿನ ಪ್ರಚಾರವೂ ಸಿನಿಮಾ ಯಶಸ್ಸನ್ನು ನಿರ್ಧರಿಸುತ್ತದೆ. ಸ್ಟಾರ್ ನಟಿಸಿದ ಮಾತ್ರಕ್ಕೆ ಎಲ್ಲಾ ಚಿತ್ರಗಳು ಹಿಟ್​ ಆಗಬೇಕಂತೇನಿಲ್ಲ. ಈ ಹಿಂದೆ ಬಾಲಿವುಡ್​ನ ಅನೇಕ ಸ್ಟಾರ್​ ನಟರ ಚಿತ್ರಗಳು ಫ್ಲಾಪ್​ ಆಗಿರುವುದನ್ನು ನಾವು ನೋಡಿದ್ದೇವೆ.

ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್​ನ ಪ್ರಮುಖ ಸ್ಟಾರ್ ನಟರಾದ ಅಕ್ಷಯ್​ ಕುಮಾರ್​ ಹಾಗೂ ಸಲ್ಮಾನ್​ ಖಾನ್​ ನಟನೆಯ ಚಿತ್ರಗಳು ಅಷ್ಟಾಗಿ ಯಶಸ್ಸು ಪಡೆದಿಲ್ಲ. ಅವರ ನಟನೆಯ ಹಲವು ಸಿನಿಮಾಗಳು ಸತತವಾಗಿ ಫ್ಲಾಪ್ ಎನಿಸಿಕೊಂಡಿವೆ. ಕಥೆ ಆಯ್ಕೆ ಕೂಡ ಸಿನಿಮಾ ಸೋಲಿಗೆ ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ.ಹೀಗಾಗಿ ಕಥೆ ಆಯ್ಕೆ ಸಿನಿಮಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶ್ರೇಯಸ್​ ತಲ್ಪಡೆ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net