More

    ಪಂಜಾಬ್​ ಆಟಗಾರರ ಚಳಿ ಬಿಡಿಸಿದ ಕಿಂಗ್​ ಕೊಹ್ಲಿ; ವಿಡಿಯೋ ವೈರಲ್

    ಧರ್ಮಶಾಲಾ: ಮೇ 09ರಂದು ನಡೆದ ಐಪಿಎಲ್​ನ 58ನೇ ಪಂದ್ಯದಲ್ಲಿ ಫಾಫ್​ ಡು ಪ್ಲೆಸಿಸ್​ ನೇತೃತ್ವದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಪಂಜಾಬ್​ ಕಿಂಗ್ಸ್​ ವಿರುದ್ಧ 60 ರನ್​ಗಳ ಭರ್ಜರಿ ಜಯ ಸಾಧಿಸಿದ್ದು, ಆರ್​ಸಿಬಿ ತನ್ನ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಇತ್ತ ಪಂದ್ಯದ ವೇಳೆ ಹಲವು ಸ್ವಾರಸ್ಯಕರ ಘಟನೆಗಳು ನಡೆದಿದ್ದು, ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ ವಿರಾಟ್​ ಕೊಹ್ಲಿ (92 ರನ್, 47 ಎಸೆತ, 7 ಬೌಂಡರಿ, 6 ಸಿಕ್ಸರ್), ರಜತ್​ ಪಾಟೀದಾರ್ (55 ರನ್, 23 ಎಸೆತ, 3 ಬೌಂಡರಿ, 6 ಸಿಕ್ಸರ್), ಕ್ಯಾಮರೂನ್​ ಗ್ರೀನ್​ (46 ರನ್, 27 ಎಸೆತ, 5 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್​ ಫಲವಾಗಿ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 241 ರನ್​ ಗಳಿಸಿತ್ತು. ಬೃಹತ್​ ಗುರಿ ಬೆನ್ನತ್ತಿದ್ದ ಪಂಜಾಬ್​ ತಂಡವು ರಿಲೀ ರೋಸ್ಸೌ (61 ರನ್, 27 ಎಸೆತ, 9 ಬೌಂಡರಿ, 3 ಸಿಕ್ಸರ್) ಅರ್ಧತಶತದಕ ಫಲವಾಗಿ 17 ಓವರ್​ಗಳಲ್ಲಿ 181 ರನ್​ಗಳಿಸಿ ಆಲೌಟ್​ ಆಗುವ ಮೂಲಕ ಸೋಲೊಪ್ಪಿಕೊಂಡಿತ್ತು.

    ಪಂಜಾಬ್​ ಪರ ಕೆಲಕಾಲ ಸ್ಫೋಟಕ ಬ್ಯಾಟಿಂಗ್​ ನಡೆಸಿದ ರಿಲೀ ರೋಸ್ಸೌ 21 ಎಸೆತಗಳಲ್ಲಿ 225 ಸ್ಟ್ರೈಕ್ ರೇಟ್‌ನಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು, ರೋಸ್ಸೌ ಅವರ 27 ಎಸೆತಗಳ ಇನ್ನಿಂಗ್ಸ್‌ನಲ್ಲಿ 61 ರನ್ ಗಳಿಸಿದರು. ಈ ಅವಧಿಯಲ್ಲಿ ಅವರ ಬ್ಯಾಟ್‌ನಿಂದ 9 ಬೌಂಡರಿ ಮತ್ತು 3 ಸಿಕ್ಸರ್‌ಗಳು ಕಾಣಿಸಿಕೊಂಡವು. ಆದರೆ, ಅವರು ಔಟಾದಾಗ ವಿರಾಟ್ ಕೊಹ್ಲಿ ಮಾಡಿದ ಸೆಲೆಬ್ರೇಷನ್ ಸಖತ್ ವೈರಲ್ ಆಗುತ್ತಿದೆ.

    ಇದನ್ನೂ ಓದಿ: ವಿರಾಟ್​ ಸಿಡಿಲಬ್ಬರದ ಬ್ಯಾಟಿಂಗ್​ಗೆ ರೆಕಾರ್ಡ್​ಗಳು ಉಡೀಸ್​; ಐಪಿಎಲ್​ನಲ್ಲಿ ಐತಿಹಾಸಿಕ ದಾಖಲೆ ಬರೆದ ಕಿಂಗ್​ ಕೊಹ್ಲಿ

    ಪಂಜಾಬ್​ ಪರ ರಿಲೀ ರೋಸ್ಸೌ ಅರ್ಧಶತಕ ಸಿಡಿಸಿದಾಗ ಗನ್ ಸೆಲೆಬ್ರೇಷನ್ ಮಾಡಿದರು. ಬಳಿಕ 9 ನೇ ಓವರ್​ನ ಕರ್ಣ್ ಶರ್ಮಾ ಬೌಲಿಂಗ್​ನಲ್ಲಿ ವಿಲ್ ಜ್ಯಾಕಸ್​ಗೆ ಬೌಂಡರಿ ಲೈನ್‌ ಬಳಿ ಕ್ಯಾಚ್ ನೀಡಿ ರಿಲೀ ಔಟಾದರು. ಈ ಸಂದರ್ಭ ವಿರಾಟ್ ಕೊಹ್ಲಿ ಸೇಡು ತೀರಿಸಿಕೊಂಡರು. ರುಸ್ಸೋ ಔಟಾದ ನಂತರ ವಿರಾಟ್ ಕೂಡ ಗನ್ ಸೆಲೆಬ್ರೇಷನ್ ಮಾಡುವ ಮೂಲಕ ಅವರನ್ನು ಟ್ರೋಲ್ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

    ಇನ್ನೂ ಪಂದ್ಯದ 14ನೇ ಓವರ್​ ವೇಳೆ ರೋಚಕ ರನ್ ಔಟ್ ಘಟನೆ ನಡೆದಿದೆ. ಲಾಕಿ ಫರ್ಗುಸನ್ ಅವರ ನಾಲ್ಕನೇ ಎಸೆತದಲ್ಲಿ, ಸ್ಯಾಮ್ ಕರ್ರಾನ್ ಮಿಡ್-ವಿಕೆಟ್ ಕಡೆಗೆ ಚೆಂಡನ್ನು ಅಟ್ಟಿ ಎರಡು ರನ್ ಗಳಿಸಲು ಬಯಸಿದರು. ಬೌಂಡರಿಯಲ್ಲಿ ಬಾಲ್​ಗಾಗಿ ಕಾದುಕುಳಿತಿದ್ದ ವಿರಾಟ್ ಚಿರತೆಯ ವೇಗದಲ್ಲಿ 30 ಯಾರ್ಡ್ ವೃತ್ತದವರೆಗೆ ಓಡಿ ಬಂದರು. ಚೆಂಡನ್ನು ಕೈಗೆತ್ತಿಕೊಂಡು ನೇರವಾಗಿ ನಾನ್ ಸ್ಟ್ರೈಕರ್​ನ ತುದಿಗೆ ಗುರಿಯಿಟ್ಟರು. ಚೆಂಡು ನೇರವಾಗಿ ವಿಕೆಟ್​ಗೆ ಬಡಿದಿದೆ. ಸಮಯಕ್ಕೆ ಕ್ರೀಸ್ ತಲುಪಲು ಸಾಧ್ಯವಾಗದ ಶಶಾಂಕ್ ಸಿಂಗ್ ರನ್​ ಔಟ್​ಗೆ ಬಲಿಯಾದರು. ರ್​ಸಿಬಿ ಗೆಲುವಿನ ಹಾದಿ ಮತ್ತಷ್ಟು ಸುಗಮವಾಯಿತು. ಇದೀಗ ಕೊಹ್ಲಿಯ ಅದ್ಭುತ ರನ್ ಔಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts