More

    ನಾವು ಪದೇ ಪದೇ ತಪ್ಪುಗಳನ್ನು ಮಾಡುತ್ತಿದ್ದೇವೆ; ಗೆಲುವಿನ ಬಳಿಕ ನಾಯಕ ಫಾಫ್​ ಡು ಪ್ಲೆಸಿಸ್​ ಹೀಗಂದಿದ್ಯಾಕೆ

    ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್​ ಅಸೋಸಿಯೇಷನ್​ ಮೈದಾನದಲ್ಲಿ ನಡೆದ 17ನೇ ಆವೃತ್ತಿಯ 58ನೇ ಐಪಿಎಲ್​ ಪಂದ್ಯದಲ್ಲಿ ಅಲ್ರೌಂಡ್​ ಪ್ರದರ್ಶನದ ಫಲವಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಪಂಜಾಬ್​ ಕಿಂಗ್ಸ್​ ಎದುರು 60 ರನ್​ಗಳ ಭರ್ಜರಿ ಜಯ ಗಳಿಸಿದ್ದು, ಪ್ಲೇಆಫ್​ ಹಾದಿಯನ್ನು ಸುಗಮವಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

    ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ ವಿರಾಟ್​ ಕೊಹ್ಲಿ (92 ರನ್, 47 ಎಸೆತ, 7 ಬೌಂಡರಿ, 6 ಸಿಕ್ಸರ್), ರಜತ್​ ಪಾಟೀದಾರ್ (55 ರನ್, 23 ಎಸೆತ, 3 ಬೌಂಡರಿ, 6 ಸಿಕ್ಸರ್), ಕ್ಯಾಮರೂನ್​ ಗ್ರೀನ್​ (46 ರನ್, 27 ಎಸೆತ, 5 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್​ ಫಲವಾಗಿ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 241 ರನ್​ ಗಳಿಸಿತ್ತು.

    ಬೃಹತ್​ ಗುರಿ ಬೆನ್ನತ್ತಿದ್ದ ಪಂಜಾಬ್​ ತಂಡವು ರಿಲೀ ರೋಸ್ಸೌ (61 ರನ್, 27 ಎಸೆತ, 9 ಬೌಂಡರಿ, 3 ಸಿಕ್ಸರ್) ಅರ್ಧತಶತದಕ ಫಲವಾಗಿ 17 ಓವರ್​ಗಳಲ್ಲಿ 181 ರನ್​ಗಳಿಸಿ ಆಲೌಟ್​ ಆಗುವ ಮೂಲಕ ಸೋಲೊಪ್ಪಿಕೊಂಡಿತ್ತು. ಇತ್ತ ಟೂರ್ನಿಯಲ್ಲಿ 4ನೇ ಜಯ ದಾಖಲಿಸಿದ ಆರ್​ಸಿಬಿ ಪ್ಲೇಆಫ್​ ಹಾದಿಯನ್ನು ಸುಗಮವಾಗಿಸಿಕೊಂಡಿದ್ದು, ಈ ಕುರಿತು ನಾಯಕ ಫಾಫ್​ ಡು ಪ್ಲೆಸಿಸ್​ ಮಾತನಾಡಿದ್ದಾರೆ.

    RCB

    ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ; ಯೆಲ್ಲೋ ಅಲರ್ಟ್​ ಘೋಷಣೆ

    ಇದೊಂದು ಉತ್ತಮ ಪಂದ್ಯವಾಗಿದ್ದು, ಕಳೆದ 5-6 ಪಂದ್ಯಗಳಲ್ಲಿ ನಾವು 200ಕ್ಕೂ ಅಧಿಕ ರನ್​ ಗಳಿಸಿದ್ದೇವೆ. ನಾವು ಎಷ್ಟೇ ಮಾತನಾಡಿದರೂ ಪದೇ ಪದೇ ಅದೇ ತಪ್ಪುಗಳನ್ನು ಮಾಡುತ್ತಿದ್ದೇವೆ. ಬ್ಯಾಟ್​ನೊಂದಿಗೆ ಆಕ್ರಮಣಕಾರಿ ಆಟದ ಅಗತ್ಯವಿದ್ದು, ನಾವು ವಿಕೆಟ್​ ತೆಗೆದುಕೊಳ್ಳುವ ಬಗ್ಗೆ ಮಾತನಾಡಿದ್ದೇವೆ. ಬೌಲಿಂಗ್​ನಲ್ಲಿ ನಮಗೆ 6-7 ಆಯ್ಕೆಗಳಿದ್ದು, ಅದೃಷ್ಟ ನಮ್ಮ ಕೈ ಹಿಡಿಯಬೇಕಿದೆ. ಪವರ್‌ಪ್ಲೇನಲ್ಲಿ ನಮಗೆ ಎದುರಾಳಿಯ ವಿಕೆಟ್ ತೆಗೆಯಲು ಸಾಧ್ಯವಾಗುತ್ತಿರಲಿಲ್ಲ. ಬಳಿಕ ಪವರ್‌ಪ್ಲೇನಲ್ಲಿ ಹೇಗೆ ವಿಕೆಟ್‌ಗಳನ್ನು ಪಡೆಯಬಹುದು ಎಂದು ನಾವು ಯೋಚಿಸಿದೆವು. ಈಗ ನಾವು ನಮ್ಮ ವಿಧಾನವನ್ನು ಬದಲಾಯಿಸಿದ್ದೇವೆ ಮತ್ತು ಅದು ಚೆನ್ನಾಗಿ ಕೆಲಸ ಮಾಡುತ್ತಿದೆ.

    ಟೂರ್ನಿಯ ಆರಂಭದಲ್ಲಿ ನಾವು ರನ್​ ಹಾಗೂ ವಿಕೆಟ್​ಗಳಿಗಾಗಿ ಹುಡುಕಾಡುತ್ತಿದ್ದೆವು ಆದರೆ, ಪ್ರಸ್ತುತ ಆಟಗಾರರು ಅದನ್ನು ಬದಲಾಯಿಸಿದ್ದಾರೆ. ಬ್ಯಾಟ್ಸ್​​ಮನ್​ಗಳು ರನ್​ವೇಗ ಹೆಚ್ಚುಸುತ್ತಿದ್ದರೆ ಬೌಲರ್​ಗಳು ಹೆಚ್ಚಿನ ವಿಕೆಟ್​ಗಳನ್ನು ಪಡೆಯುತ್ತಿದ್ದಾರೆ. ನಮಗೆ ನಮ್ಮ ಮೇಲೆ ಕೇಂದ್ರೀಕರಿಸುವುದು ಮುಖ್ಯವಾಗಿದೆ. ನಾವು ಆಡಲು ಬಯಸುವ ಆಟದ ಶೈಲಿಗೆ ಅಂಟಿಕೊಳ್ಳಲು ನಾವು ಬಯಸುತ್ತೇವೆ, ನಾವು ಅದನ್ನು ಮಾಡಿದರೆ ನಿಜವಾಗಿಯೂ ಉತ್ತಮ ತಂಡವೆಂದು ಸಾಬೀತುಪಡಿಸುತ್ತದೆ ಎಂದು ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​ ಪೋಸ್ಟ್​​ ಮ್ಯಾಚ್​ ಪ್ರಸೆಂಟೇಷನ್​ನಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts