More

    ಇಲ್ಲೊಂದು ವಿಚಿತ್ರ ಮದುವೆ: ವರನಿಗೆ ಹೊಡೆದು ಬಡಿದು ಮಾಂಗಲ್ಯ ಕಟ್ಟಿಸಿಕೊಂಡ ವಧು: ಅಷ್ಟಕ್ಕೂ ಯಾಕೆ ಇದೆಲ್ಲ..?

    ಚಿಕ್ಕಬಳ್ಳಾಫುರ: ಇಲ್ಲೊಂದು ಮದುವೆ ವಿಚಿತ್ರ ರೀತಿಯಲ್ಲಿ ಆಗಿದ್ದು, ವರನ ಪಾಲಿಗೆ ಈ ಮದುವೆ ಒಂದು ಸಿಹಿ ನೆನಪಲ್ಲ. ಏಕೆಂದರೆ ಇಲ್ಲಿ ಈತ ಮದುವೆಗೂ ಮುನ್ನ ಪತ್ನಿಯಿಂದ ಹೊಡೆತ ತಿನ್ನುವಂತಾಗಿದೆ. ಹೀಗೆ ವಧುವಿನಿಂದ ವರನಿಗೆ ಥಳಿಸಿಯೇ ಕುಟುಂಬಸ್ಥರು ಈ ಮದುವೆಯನ್ನು ಮಾಡಿಸಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ಸಿನಿಮೀಯ ರೀತಿಯಲ್ಲಿ ಈ ಮದುವೆ ನಡೆದಿದೆ. ಚಿಕ್ಕಬಳ್ಳಾಫುರ ತಾಲೂಕಿನ ಚಿಕ್ಕಕಿರುಗುಂಬಿ ಯುವಕ ಚೇತನ್ ಹಾಗೂ ಅದೇ ತಾಲೂಕಿನ ಇಟಪನಹಳ್ಳಿ ನಿವಾಸಿ ಯುವತಿಯ ಮಧ್ಯೆ ಈ ಮದುವೆ ನಡೆದಿದೆ.

    ಇದನ್ನೂ ಓದಿ: ಲೋಕಾಯುಕ್ತ ಡಿವೈಎಸ್​ಪಿ ಹೃದಯಾಘಾತದಿಂದ ಸಾವು!; ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಅಸ್ವಸ್ಥರಾಗಿ ನಿಧನ

    ಯುವತಿಯ ಮನೆಯವರು ಹಾಗೂ ಕೆಲವು ಸಂಘ-ಸಂಘಟನೆಗಳವರು ಜೊತೆಯಾಗಿ ಬಲವಂತವಾಗಿ ಈ ಮದುವೆ ಮಾಡಿಸಿದ್ದು, ಮದುವೆಗೂ ಮುನ್ನ ವರನಿಗೆ ವಧುವಿನಿಂದ ಹೊಡೆಸಿದ್ದಾರೆ. ಇಬ್ಬರ ಮಧ್ಯೆ ಪ್ರೀತಿಯಿದ್ದು, ವಧು ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದು, ಆಗ ಯುವಕ ಮದುವೆಗೆ ನಿರಾಕರಿಸಿದ್ದರಿಂದ ಈ ರೀತಿಯಲ್ಲಿ ಮದುವೆ ಮಾಡಿಸಲಾಗಿದೆ. ಹೀಗೆ ಹೊಡೆದು ಬಡಿದು ಮದುವೆ ಮಾಡಿಸಿ, ಬಳಿಕ ಅವೆಲ್ಲವನ್ನೂ ವಿಡಿಯೋ ಮಾಡಿ ಆಶೀರ್ವಾದವನ್ನೂ ಮಾಡಲಾಗಿದೆ.

    ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts