

ವಿಜಯಪುರ: ರಾಜ್ಯ-ದೇಶದಲ್ಲಿ ಜನರು ಹೃದಯಾಘಾತಕ್ಕೀಡಾಗಿ ಮೃತಪಡುತ್ತಿರುವ ಪ್ರಕರಣ ಮುಂದುವರಿದಿದ್ದು, ಇದೀಗ ಲೋಕಾಯುಕ್ತ ಡಿವೈಎಸ್ಪಿಯೊಬ್ಬರು ಹೃದಯಾಘಾತದಿಂದ ಸಾವಿಗೀಡಾದ ಪ್ರಕರಣ ವರದಿಯಾಗಿದೆ.
ವಿಜಯಪುರ ಜಿಲ್ಲಾ ಲೋಕಾಯುಕ್ತದಲ್ಲಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದ ಅರುಣ್ ನಾಯಕ್ ಸಾವಿಗೀಡಾದವರು. ಇವರು ಇಂದು ವಿಜಯಪುರ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಆಡುವ ವೇಳೆ ಅಸ್ವಸ್ಥರಾಗಿದ್ದರು. ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.
ಅರುಣ್ ನಾಯಕ್ ಪುತ್ರ ಬೆಂಗಳೂರಿನಲ್ಲಿ ವೈದ್ಯರಾಗಿದ್ದು, ಅವರೊಂದಿಗೆ ತಾಯಿಯೂ ನೆಲೆಸಿದ್ದಾರೆ. ಘಟನೆ ಕುರಿತು ತಿಳಿದು ಪತ್ನಿ-ಪುತ್ರ ವಿಜಯನಗರದತ್ತ ಹೊರಟಿದ್ದಾರೆ. ಖಾಸಗಿ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳ ಭೇಟಿ ನೀಡಿದ್ದಾರೆ.