ನಟಿ ರಮ್ಯಾ ಕೋಪ.. ಸಂಕಷ್ಟಕ್ಕೆ ಸಿಲುಕಿದ 'ಹಾಸ್ಟೆಲ್ ಹುಡುಗರು.. '; ಕಾನೂನು ಸಲಹೆ ಕೇಳಲು ತೆರಳಿದ ಚಿತ್ರತಂಡ

Hostel Hudugaru
Published on

ramya legal action: Hostel hudugaru bekagiddare film team is in tension

ಬೆಂಗಳೂರು: ನಟಿ ರಮ್ಯಾ ಕೋಪದಿಂದಾಗಿ ಹಾಸ್ಟೆಲ್ ಹುಡುಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅರ್ಥಾತ್, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ ನಟಿ ರಮ್ಯಾ ಕೈಗೊಂಡ ಕಾನೂನುಕ್ರಮದಿಂದಾಗಿ ಚಿಂತೆಗೀಡಾಗಿದ್ದಾರೆ. ಮಾತ್ರವಲ್ಲ, ಮುಂದೇನು ಎಂದು ತೋಚದ ಚಿತ್ರತಂಡ ಈಗ ನ್ಯಾಯಾಧೀಶರ ಬಳಿಗೆ ತೆರಳಿದೆ.

ಚಿತ್ರದ ಪ್ರೋಮೋಗೆ ಎಂದು ತಮ್ಮನ್ನು ಚಿತ್ರೀಕರಿಸಿಕೊಂಡಿದ್ದ ದೃಶ್ಯಗಳನ್ನು ಸಿನಿಮಾದಲ್ಲೂ ಬಳಸಿಕೊಳ್ಳಲಾಗಿದೆ ಎಂದು ಕೋಪಗೊಂಡಿರುವ ನಟಿ ರಮ್ಯಾ, ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಜಾರಿ ಮಾಡಿ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.

ಇನ್ನೇನು ಸಿನಿಮಾ ಬಿಡುಗಡೆ ಮಾಡಬೇಕು ಎಂದುಕೊಂಡಿರುವಾಗ ಹೀಗಾಗಿರುವುದರಿಂದ ಚಿತ್ರತಂಡ ಸಂಕಷ್ಟಕ್ಕೆ ಒಳಗಾಗಿದೆ. ಹೀಗಾಗಿ ನಿರ್ಮಾಪಕ ವರುಣ್ ಗೌಡ ಹಾಗೂ ಚಿತ್ರತಂಡ ನ್ಯಾಯಾಧೀಶರ ಬಳಿಗೆ ತೆರಳಿದೆ. ಸಿನಿಮಾ ಬಿಡುಗಡೆ ಮಾಡಬೇಕೋ ಬೇಡವೋ ಎಂದು ಅವರ ಬಳಿ ಸಲಹೆ ಕೇಳಿ, ಬಳಿಕ ಅದರಂತೆ ಚಿತ್ರತಂಡ ನಡೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಜಡ್ಜ್ ಭೇಟಿ ಬಳಿಕ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಳ್ಳಲಿದೆ ಎಂದೂ ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net