ಈ ಟೇಸ್ಟಿ ಟಿಫನ್​ ಸೇವಿಸಿದರೆ ಸುಲಭವಾಗಿ ಕರಗಿಸಬಹುದು ಬೊಜ್ಜು; ಹೆಲ್ತಿ​ ಟಿಪ್ಸ್​​ ನಿಮಗಾಗಿ

Untitled-design-76
Published on

ದೇಹದ ತೂಕ ಹೆಚ್ಚಾಗಿದೆ ಎಂಬ ಚಿಂತೆಯೇ. ಹೊಟ್ಟೆಯ ಭಾಗದಲ್ಲಿರುವ ಬೊಜ್ಜು ಕರಗಿಸುವುದು ಹೇಗೆ ಎಂದು ಆಲೋಚಿಸುತ್ತಿದ್ದೀರ. ಊಟ ಬಿಟ್ಟು ಡಯಟ್​ ಮಾಡಿ ತೂಕ ಇಳಿಸುತ್ತಿದ್ದೀರಾ. ಇಷ್ಟೆಲ್ಲಾ ಕಷ್ಟ ಪಡುವ ಬದಲು ಕಡಿಮೆ ಕ್ಯಾಲೊರಿ ಇರುವ ಪ್ರೋಟೀನ್​ ಮತ್ತು ಫೈಬರ್​ ಅಂಶವಿರುವ ಆಹಾರಪದ್ಧತಿಯನ್ನು ರೂಢಸಿಕೊಂಡರೆ ಸಾಕು. ಬೆಳಗ್ಗೆ ಸಮಯದಲ್ಲಿ ಟೇಸ್ಟಿ ಟಿಫನ್​ ತಿನ್ನುವುದರ ಮೂಲಕವು ನಮ್ಮ ತೂಕವನ್ನು ಇಳಿಸಿಕೊಳ್ಳಬಹುದು. ರುಚಿಕರವಾದ ಆಹಾರದ ಜತೆಗೆ ಬೊಜ್ಜು ಕರಗಿಸಲು ಹಾಗೂ ತೂಕ ಇಳಿಸಲು ಇರುವ ಸಿಂಪಲ್​ ಮಾರ್ಗ.ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮತ್ತು ರುಚಿಯಲ್ಲೂ ಅತ್ಯುತ್ತಮವಾಗಿರುವ ಟಿಫನ್​ಗಳ ಮಾಹಿತಿಯನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ.

ಓಟ್ಸ್ ಉಪ್ಪಿಟ್ಟು: ತರಕಾರಿಗಳಿಂದ ಮಾಡಿದ ಓಟ್ಸ್​ ಉಪ್ಪಿಟ್ಟಿನಲ್ಲಿ ಫೈಬರ್​ ಜತೆಗೆ ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿರುತ್ತವೆ. ಟೇಸ್ಟಿ ಫುಡ್ ಜತೆಗೆ ದಿನವನ್ನು ಆರಂಭಿಸುತ್ತೀರಿ. ಇದು ನಿಮ್ಮ ತೂಕ ಇಳಿಕೆಗೂ ಸಹಕಾರಿಯಾಗಲಿದೆ.

ರಾಗಿ ಇಡ್ಲಿ: ಪೌಷ್ಟಿಕಾಂಶ ಭರಿತ ರಾಗಿ ಇಡ್ಲಿಯನ್ನು ಸೇವಿಸಬಹುದು. ರಾಗಿ ಇಡ್ಲಿಯಲ್ಲಿ ಫೈಬರ್ ಕಂಡುಬರುತ್ತದೆ. ಇದು ತೂಕ ಇಳಿಸುವುದರ ಜತೆಗೆ ಬೊಜ್ಜು ಕರಗಿಸಲು ಸಹಾಯವಾಗುತ್ತದೆ.

ಹೆಸರು ಕಾಳಿನ ಪರೋಟ: ಹೆಸರು ಕಾಳಿನ ಪರೋಟಾ ರುಚಿಕರವಾಗಿರುತ್ತದೆ. ಅಲ್ಲದೆ ಅದರಲ್ಲಿ ಕ್ಯಾಲೋರಿಯು ಕಡಿಮೆ ಇರುತ್ತದೆ. ಇದರ ಸೇವನೆಯು ನಿಮ್ಮ ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡುತ್ತದೆ.

ರವಾ ಉಪ್ಪಿಟ್ಟು: ತರಕಾರಿ, ನಿಂಬೆರಸ, ಕಡಿಲೆಕಾಯಿ ಸೇರಿಸಿ ಮಾಡುವ ರವಾ ಉಪ್ಪಿಟ್ಟು ಹೆಚ್ಚು ಪೌಷ್ಟಿಕವಾಗಿರುತ್ತದೆ ಜತೆಗೆ ತೂಕ ಇಳಿಕೆಗೂ ಸಹಾಯ ಮಾಡುತ್ತದೆ.

ಅಕ್ಕಿ ಮತ್ತು ಉದ್ದಿನಬೇಳೆ ದೋಸೆ: ಈ ದೋಸೆ ಬೆಳಗ್ಗಿನ ಟಿಫನ್​​ನಲ್ಲಿ ರಾಯಲ್​ ಟೇಸ್ಟ್​ ಕೊಡುತ್ತದೆ. ಇದು ಕಡಿಮೆ ಕ್ಯಾಲೋರಿ ಹೊಂದಿದ್ದು ತೂಕ ಇಳಿಕೆಗೆ ಸಹಕಾರಿಯಾಗಿದೆ.

ರವಾ ದೋಸೆ: ರವಾ ದೋಸೆಯಲ್ಲಿ ಪ್ರೋಟೀನ್​ ಮತ್ತು ಕಡಿಮೆ ಕ್ಯಾಲೋರಿ ಇರುವುದರಿಂದ ಆರೋಗ್ಯಕ್ಕೂ ಉತ್ತಮ ಆಹಾರ ಜತೆಗೆ ತೂಕ ಇಳಿಕೆಗೂ ಸಹಾಯ ಮಾಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net