ಮಧುಮೇಹವನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ. ಮಧುಮೇಹದಿಂದ ದೇಹವು ಇನ್ಸುಲಿನ್‌ಗೆ ಸಂವೇದನಾಶೀಲವಾಗುವುದರಿಂದ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುತ್ತದೆ. ಇದು ದೀರ್ಘಕಾಲದ ಕಾಯಿಲೆಯಾಗಿರುವುದರಿಂದ ಇಡೀ ಜೀವನ ಪ್ರಿಸ್ಕ್ರಿಪ್ಷನ್ ಔಷಧಿಗಳ ಮೇಲೆ ಅವಲಂಬಿತವಾಗಿರಬೇಕು. ಆದರೆ ನಮ್ಮ ದೈನಂದಿನ ಆಹಾರಕ್ರಮದಲ್ಲಿ ಈ ಪದಾರ್ಥಗಳನ್ನು ರೂಢಿಸಿಕೊಂಡರೆ ಸಕ್ಕರೆ ಅಂಶವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೆ. ಯಾವೆಲ್ಲಾ ಆಹಾರ ಪದಾರ್ಥಗಳು ನಮ್ಮಲ್ಲಿನ ಸೈಲೆಂಟ್ ಕಿಲ್ಲರ್ಗೆ ರಾಮಬಾಣವಾಗಿದೆ ಎಂಬುದರ ಮಾಹಿತಿ ಇಲ್ಲಿದೆ.
ಇದನ್ನು ಓದಿ: ವಾಕ್ ಮಾಡುವಾಗ ಉಸಿರುಗಟ್ಟುವ ತೊಂದರೆಯೇ; ನಿರ್ಲಕ್ಷಿಸದೆ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ
- ಹಾಗಲಕಾಯಿ: ಇದು ಪ್ರಬಲ ಹೈಪೊಗ್ಲಿಸಿಮಿಕ್ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಚರಂಟಿನ್, ಪಾಲಿಪೆಪ್ಟೈಡ್-ಪಿ ಮತ್ತು ವಿಸಿನ್ ನಂತಹ ಸಂಯುಕ್ತಗಳಿಂದ ಸಮೃದ್ಧವಾಗಿರುವ ಹಾಗಲಕಾಯಿ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
- ಮೆಂತ್ಯ: ಮೆಂತ್ಯ ಕರಗುವ ಫೈಬರ್ ಅನ್ನು ಹೊಂದಿದೆ. ರಾತ್ರಿಯಿಡೀ ನೀರಿನಲ್ಲಿ ನೆನೆಸಿದ ಮೆಂತ್ಯ ಬೀಜಗಳನ್ನು ಸೇವಿಸುವುದು ಅಥವಾ ಅವುಗಳನ್ನು ನಿಮ್ಮ ಊಟದಲ್ಲಿ ಸೇರಿಸುವುದು ಮಧುಮೇಹ ನಿರ್ವಹಣೆಗೆ ಗಮನಾರ್ಹವಾದ ಪರಿಹಾರವಾಗಿದೆ.
- ನೆಲ್ಲಿಕಾಯಿ: ಭಾರತೀಯ ನೆಲ್ಲಿಕಾಯಿ ವಿಟಮಿನ್ ಸಿ ಅನ್ನು ಹೊಂದಿದೆ. ಇದು ಮೇದೋಜ್ಜೀರಕ ಗ್ರಂಥಿಯ ಕಾರ್ಯವನ್ನು ವರ್ಧಿಸಲು, ಇನ್ಸುಲಿನ್ ಸ್ರವಿಸುವಿಕೆಯನ್ನು ಉತ್ತೇಜಿಸಲು ಮತ್ತು ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹೀಗಾಗಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
- ಅರಿಶಿನ: ಅರಿಸಿನದಲ್ಲಿನ ಕರ್ಕ್ಯುಮಿನ್, ಅದರ ಸಕ್ರಿಯ ಸಂಯುಕ್ತವು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
- ತುಳಸಿ: ತುಳಸಿಯಲ್ಲಿ ಅಡಾಪ್ಟೋಜೆನಿಕ್ ಮತ್ತು ಹೈಪೊಗ್ಲಿಸಿಮಿಕ್ ಲಕ್ಷಣಗಳಿವೆ. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುವ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವೈದ್ಯರನ್ನು ಸಂಪರ್ಕಿಸಿ ಬಳಿಕ ಈ ಕ್ರಮವನ್ನು ಅನುಸರಿಸಿ.
ದೇಹದಲ್ಲಿರುವ ಲಿಪೊಮಾ ಗಡ್ಡೆ ಹೋಗಲಾಡಿಸುವುದು ಹೇಗೆ ಎಂಬ ಚಿಂತೆಯೇ; ಇಲ್ಲಿದೆ ಸಿಂಪಲ್ ಮನೆಮದ್ದು