

ದೇಹದ ಯಾವುದೇ ಭಾಗದಲ್ಲಿ ಗಡ್ಡೆ ರೂಪುಗೊಂಡರೆ ಎಲ್ಲರ ಮನಸ್ಸಿನಲ್ಲಿ ಮೂಡುವುದು ಒಂದೇ ಭಯ. ಅದು ಕ್ಯಾನ್ಸರ್ ಗಡ್ಡೆ ಇರಬಹುದು ಎಂಬ ಆತಂಕ. ಆದರೆ ಪ್ರತಿ ಗಡ್ಡೆಯನ್ನು ಕ್ಯಾನ್ಸರ್ ಎಂದು ಹೇಳುವ ಅಗತ್ಯವಿಲ್ಲ. ಇದರ ಹಿಂದೆ ಗಾಯ ಅಥವಾ ಸೋಂಕಿನಂತಹ ಹಲವು ಕಾರಣಗಳಿರಬಹುದು. ಮಧುಮೇಹ, ಅಧಿಕ ರಕ್ತದೊತ್ತಡ, ಸ್ಥೂಲಕಾಯತೆ ಇತ್ಯಾದಿಗಳೂ ದೇಹದಲ್ಲಿ ಗಡ್ಡೆಯ ರಚನೆಗೆ ಕಾರಣವಾಗಿರಬಹುದು. ಕೆಲವು ಗಡ್ಡೆಗಳು ತುಂಬಾ ಮೃದುವಾಗಿರುತ್ತವೆ. ಅವುಗಳನ್ನು ಲಿಪೊಮಾಸ್ ಎಂದು ಕರೆಯಲಾಗುತ್ತದೆ.
ಇದನ್ನು ಓದಿ: ಹಾಗಲಕಾಯಿ ಕಹಿಯಿಂದಾಗಿ ಇಷ್ಟಪಡದವರೆ ಹೆಚ್ಚು; ಇದು ಆರೋಗ್ಯಕ್ಕೆ ಮಾತ್ರವಲ್ಲ ತ್ವಚೆಗೂ ಪ್ರಯೋಜನಕಾರಿ ಲಿಪೊಮಾಸ್ ಎಂದರೇನು?: ದೇಹದಲ್ಲಿ ರೂಪುಗೊಳ್ಳುವ ಅನಗತ್ಯ ಗಡ್ಡೆಗಳು ಲಿಪೊಮಾಸ್ಗಳಾಗಿರಬಹುದು. ಇದು ದೇಹದ ಯಾವುದೇ ಭಾಗದಲ್ಲಿಯದರೂ ಉಂಟಾಗಬಹುದು. ಹೆಚ್ಚಾಗಿ ಇದು ಭುಜಗಳು, ಬೆನ್ನು, ಎದೆ, ತೋಳುಗಳು, ಹೊಟ್ಟೆ ಮತ್ತು ಕುತ್ತಿಗೆಯಲ್ಲಿ ಕಂಡುಬರುತ್ತದೆ.ಸಾಮಾನ್ಯವಾಗಿ ಈ ರೀತಿಯ ಗಡ್ಡೆಯು ನೋವನ್ನು ಉಂಟುಮಾಡುವುದಿಲ್ಲ. ಆದರೆ ಅದು ಹೆಚ್ಚಾದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಲಿಪೊಮಾಸ್ ನಿವಾರಣೆಗೆ ಇರುವ ಮನೆಮದ್ದು: