ಮುಂಬೈ: ಬಾಲಿವುಡ್ ನಟಿ ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಬ್ರೇಕಪ್ ಸುದ್ದಿ ಗೊತ್ತೆ ಇದೆ. ಇತ್ತೀಚೆಗೆ ನಟಿ ಅನನ್ಯಾ ಪಾಂಡೆ ವೃತ್ತಿಜೀವನಕ್ಕಿಂತ ಹೆಚ್ಚಾಗಿ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಈಗ ಮತ್ತೊಮ್ಮೆ ಅನನ್ಯಾ ಅವರು ತಮ್ಮ ವೈಯಕ್ತಿಕ ವಿಚಾರವಾಗಿಯೇ ಮುನ್ನೆಲೆಗೆ ಬಂದಿದ್ದು, ಅವರ ನ್ಯೂ ಬಾಯ್ಫ್ರೆಂಡ್ ವಿಚಾರ ಬಿಟೌನ್ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ ಈ ಬಾರಿ ಯಾವುದೇ ಭಾರತೀಯನೊಂದಿಗೆ ಅಲ್ಲ, ವಿದೇಶಿಯ ಮಾಜಿ ಮಾಡೆಲ್ನೊಂದಿಗೆ ಅನನ್ಯಾ ಹೆಸರು ತಳುಕು ಹಾಕಿಹೊಂಡಿದೆ.
ಇದನ್ನು ಓದಿ: ಮನು ಭಾಕರ್ ಜತೆಗಿನ ಜಾನ್ ಅಬ್ರಾಹಂ ಫೋಟೋ ವೈರಲ್; ನಟನ ಈ ನಡೆಗೆ ನೆಟ್ಟಿಗರ ಆಕ್ರೋಶ
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ಅನನ್ಯಾ ಪಾಂಡೆ ಕೂಡ ಭಾಗಿಯಾಗಿದ್ದರು. ಸಮಾರಂಭದಲ್ಲಿ ಅನನ್ಯಾ ವಾಕರ್‌ನೊಂದಿಗೆ ಒಟ್ಟಿಗೆ ನೃತ್ಯ ಮಾಡುತ್ತಿರುವ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆಗಿದ್ದವು. ಫೋಟೋಗಲು ನೆಟ್ಟಿಗರ ಗಮನ ಸೆಳೆದಿದ್ದವು. ಫೋಟೋದಲ್ಲಿರುವ ವ್ಯಕ್ತಿ ಯಾರು? ಅನನ್ಯಾ ಅವರ ಭಾಯ್ಫ್ರೆಂಡ್ ಇರಬಹುದೇ ಎಂದೆಲ್ಲಾ ಊಹಾಪೋಹಾಗಳು ನಡೆಯುತ್ತಿದ್ದವು.
ಅಲ್ಲದೆ ಅನನ್ಯಾ ಮದುವೆಯಲ್ಲಿ ಎಲ್ಲರಿಗೂ ವಾಕರ್ ಪರಿಚಯ ಮಾಡಿದ್ದಳು ಎನ್ನಲಾಗಿದೆ. ಅಂಬಾನಿ ಕುಟುಂಬದ ಪ್ರೀವೆಡ್ಡಿಗಂಗ್ ಸಮಾರಂಭದಲ್ಲಿ ಅನನ್ಯಾ ಮತ್ತು ವಾಕರ್ ಭೇಟಿಯಾಗಿದ್ದಾರೆ ಎಂದು ಕೆಲವು ವರದಿಗಳು ಹೇಳುತ್ತಿವೆ. ಸದ್ಯ ಅನನ್ಯ ಮತ್ತು ವಾಕರ್ ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ವಾಕರ್ ಬ್ಲಾಂಕೋ ಇಲಿನಾಯ್ಸ್‌ನ ಚಿಕಾಗೋದವರಾಗಿದ್ದು, ಮಾಜಿ ಮಾಡೆಲ್. ಪ್ರಸ್ತುತ ಅವರು ಅನಂತ್ ಅವರ ಪೆಟ್ ಪ್ರಾಜೆಕ್ಟ್ ಆಗಿರುವ ವಂತರಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಕೆಲಸ ಏನು ಅಥವಾ ಅವರು ಕೆಲಸಕ್ಕಾಗಿ ಭಾರತದಲ್ಲಿ ಉಳಿದಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಅವರ ಇನ್ಸ್ಟಾಗ್ರಾಮ್ ಖಾತೆ ನೋಡಿದರೆ ವಾಕರ್ ಪ್ರಾಣಿಪ್ರಿಯ ಎಂದು ಸ್ಪಷ್ಟವಾಗುತ್ತದೆ.
ಇತ್ತೀಚೆಗೆ ಅನನ್ಯಾ ಅವರ ಒಂದು ಫೋಟೋ ಕೂಡ ವೈರಲ್ ಆಗಿದ್ದು, ಅದರಲ್ಲಿ ಅನನ್ಯಾ AW ಎಂದು ಬರೆದಿರುವ ಪೆಂಡೆಂಟ್ ಧರಿಸಿದ್ದಾರೆ. ಅನನ್ಯಾ ಅವರ ಈ ಫೋಟೋ ನೋಡಿದ ಅಭಿಮಾನಿಗಳು AW ಎಂದರೇನು ಎಂದು ಪ್ರಶ್ನೆ ಹಾಕಿಕೊಳ್ಳುತ್ತಿದ್ದರು. ಈಗ ವಾಕರ್ ಜತೆ ಅನನ್ಯಾ ಡೇಟಿಂಗ್ ಸುದ್ದಿ ಬರುತ್ತಿದ್ದು, ಅಭಿಮಾನಿಗಳು ಇದಕ್ಕೆ ಪೆಂಡೆಂಟ್ ಲಿಂಕ್ ಮಾಡಿ ಮಾತನಾಡುತ್ತಿದ್ದಾರೆ. A ಎಂದರೆ ಅನನ್ಯಾ ಎಂದು W ಎಂದರೆ ವಾಕರ್ ಎಂದು ಹೇಳುತ್ತಿದ್ದಾರೆ.
ಅನನ್ಯಾ ಪಾಂಡೆ ಕೊನೆಯದಾಗಿ ‘ಡ್ರೀಮ್ ಗರ್ಲ್ 2’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆಕೆಯ ಮುಂದಿನ ಪ್ರಾಜೆಕ್ಟ್ ‘ಕಾಲ್ ಮಿ ಬೇ’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.(ಏಜೆನ್ಸೀಸ್)
ವಿನೇಶ್ ಫೋಗಟ್ ಅನರ್ಹ; ಸೂಕ್ತ ಕ್ರಮಕ್ಕೆ ಪ್ರಧಾನಿ ಮೋದಿ ಸೂಚನೆ.. ಮನ್ಸುಖ್ ಮಾಂಡವಿಯಾ ಹೇಳಿದಿಷ್ಟು..