ಮುಂಬೈ: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಪಿಸ್ತೂಲ್ ಶೂಟರ್ ಮನು ಭಾಕರ್ ಅದ್ಭುತ ಪ್ರದರ್ಶನ ನೀಡಿದರು. ಒಲಿಂಪಿಕ್ಸ್ನಲ್ಲಿ ಎರಡು ಕಂಚಿನ ಪದಕ ಗೆಲ್ಲುವ ಮೂಲಕ ವಿಶ್ವದಾದ್ಯಂತ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಭಾರತಕ್ಕೆ ಮರಳಿದ ಮನು ಭಾಕರ್ ಅವರಿಗೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.
ಇದನ್ನು ಓದಿ: ವಿನೇಶ್ ಫೋಗಟ್ ಅನರ್ಹ; ಸೂಕ್ತ ಕ್ರಮಕ್ಕೆ ಪ್ರಧಾನಿ ಮೋದಿ ಸೂಚನೆ.. ಮನ್ಸುಖ್ ಮಾಂಡವಿಯಾ ಹೇಳಿದಿಷ್ಟು..
ದೇಶದ ಅನೇಕ ಗಣ್ಯರು ಮನು ಭಾಕರ್ ಅವರನ್ನು ಅಭಿನಂದಿಸಿದ್ದಾರೆ. ನಟ ಜಾನ್ ಅಬ್ರಾಹಂ ಕೂಡ ಒಲಿಂಪಿಕ್ಸ್ನಲ್ಲಿ ಡಬಲ್ ಪದಕ ಗೆದ್ದ ಮನು ಭಾಕರ್ ಅವರನ್ನು ಭೇಟಿಯಾಗಿ ಅವರೊಂದಿಗೆ ಫೋಟೋ ತೆಗಿಸಿಕೊಂಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ನಟ ಜಾನ್ ಅಬ್ರಾಹಂ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಬ್ರಹಾಂ ಫೋಟೋವನ್ನು ಹಂಚಿಕೊಳ್ಳುವಾಗ, ಮನು ಭಾಕರ್ ಮತ್ತು ಅವರ ಕುಟುಂಬವನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು, ಅವರು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಮನು ಭಾಕರ್ ಮತ್ತು ಜಾನ್ ಅಬ್ರಾಹಂ ಇಬ್ಬರು ಒಂದೊಂದು ಪದಕ ಹಿಡಿದು ಫೋಟೋಗೆ ಫೋಸ್ ಕೊಟ್ಟಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಮತ್ತು ನೆಟ್ಟಿಗರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಫೋಟೊದಲ್ಲಿ ಅಬ್ರಾಹಂ ಪದಕ ಹಿಡಿದುಕೊಂಡಿರುವುದು ವಿರೋಧಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಮನ ಭಾಕರ್ ಅವರಿಗೆ ಕೆಲವರು ಅಭಿನಂದಿಸಿದರೆ, ಹಲವರು ಜಾನ್ ಅಬ್ರಹಾಂ ಪದಕ ಹಿಡಿದುಕೊಂಡಿರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಜಾನ್ ಅಬ್ರಾಹಂ ನಿಮಗೆ ಅಥವ ಬೇರೆ ಯಾರಿಗೆ ಆದರೂ ಪದಕವನ್ನು ಮುಟ್ಟುವ ಹಕ್ಕಿಲ್ಲ, ನೀವು ಆ ಪದಕವನ್ನು ಮನುಗೆ ಹಿಂತಿರುಗಿಸಿ, ಆ ಗೆಲುವು ನಿಮ್ಮದ್ದಲ್ಲ ಮನು ಗೆದ್ದಿರುವುದು, ಮನು ಭಾಕರ್ ಪದಕವನ್ನು ಯಾರಿಗೂ ನೀಡಬೇಡಿ ಅದು ನಿಮ್ಮ ಕಠಿಣ ಪರಿಶ್ರಮದ ಫಲ ಎಂದು ಕಾಮೆಂಟ್ ಮಾಡಿದ್ದಾರೆ.
ಸದ್ಯ ಜಾನ್ ಅಬ್ರಾಹಂ ವೇದಾ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ನಿಖಿಲ್ ಅಡ್ವಾಣಿ ನಿರ್ದೇಶನದ ಆ್ಯಕ್ಷನ್-ಥ್ರಿಲ್ಲರ್ ಸಿನಿಮಾದಲ್ಲಿ ಅಭಿಷೇಕ್ ಬ್ಯಾನರ್ಜಿ, ತಮನ್ನಾ ಭಾಟಿಯಾ, ಮೌನಿ ರಾಯ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ.(ಏಜೆನ್ಸೀಸ್)
ಸನಾತನ ಧರ್ಮದ ಉಳಿವಿಗೆ ಒಗ್ಗಟ್ಟಿನಿಂದ ಹೋರಾಡಬೇಕು; ಯೋಗಿ ಆದಿತ್ಯನಾಥ್