ವಾಕ್​ ಮಾಡುವಾಗ ಉಸಿರುಗಟ್ಟುವ ತೊಂದರೆಯೇ; ನಿರ್ಲಕ್ಷಿಸದೆ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

Untitled-design-55
Published on

ವಾಕ್ ಮಾಡುವಾಗ ಉಸಿರುಗಟ್ಟುತ್ತಿದೆಯೇ.. ನಡೆಯುವಾಗ ಉಸಿರಾಟದ ತೊಂದರೆ ಏಕೆ ಉಂಟಾಗುತ್ತಿದೆ ಎಂಬುದನ್ನು ತಿಳಿಯುವುದು ಬಹಳ ಮುಖ್ಯ. ಆಸ್ತಮಾದಂತಹ ಉಸಿರಾಟದ ಕಾಯಿಲೆಗಳು, ಹೃದಯ ಸಮಸ್ಯೆಗಳು ಅಥವಾ ತುಂಬಾ ವೇಗವಾಗಿ ನಡೆಯುವುದು ಸಹ ಕಾರಣಗಳಾಗಿರಬಹುದು. ಕಾರಣವನ್ನು ತಿಳಿದುಕೊಂಡಾಗ ಮಾತ್ರ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಉಸಿರಾಟದ ತೊಂದರೆ ಎಂದರೆ ದೇಹವು ಉಸಿರಾಡಲು ಸಾಕಷ್ಟು ಗಾಳಿಯನ್ನು ಪಡೆಯದಿದ್ದಾಗ, ಗಟ್ಟಿಯಾಗಿ ಮತ್ತು ವೇಗವಾಗಿ ಉಸಿರಾಡಲು ಪ್ರಯತ್ನಿಸುವುದು. ಫಿಟ್​ನೆಸ್​ಗೆ ವಾಕ್​​ ಬಹಳ ಮುಖ್ಯವಾಗಿದೆ. ವಾಕ್​​ ಮಾಡುವಾಗ ಉಸಿರಾಟದ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

  • ವಾಕ್​​ ಮಾಡುವಾಗ ದೇಹದ ಮೇಲೆ ಹಠಾತ್ ಒತ್ತಡ ಉಂಟಾಗದಂತೆ ನೋಡಿಕೊಳ್ಳಿ. ಆರಂಭದಲ್ಲಿ ನಿಧಾನವಾಗಿ ನಡೆಯಲು ಪ್ರಾರಂಭಿಸಿ, ಕ್ರಮೇಣ ನಿಮ್ಮ ಫಿಟ್​ನೆಸ್​​​ ಸುಧಾರಿಸುತ್ತಿದ್ದಂತೆ ನಡಿಗೆಯ ಸಮಯ ಮತ್ತು ವೇಗವನ್ನು ಹೆಚ್ಚಿಸಿ.
  • ದೀರ್ಘ ಅಥವಾ ಡಯಾಫ್ರಾಗ್ಮ್ಯಾಟಿಕ್ ಉಸಿರಾಟವನ್ನು ಅಭ್ಯಾಸ ಮಾಡಿ. ದೀರ್ಘ ಉಸಿರಾಟದ ವೇಳೆ ಎದೆಯ ಭಾಗದಿಂದ ಉಸಿರಾಡುವ ಬದಲು ನಿಮ್ಮ ಹೊಟ್ಟೆಯ ಭಾಗದಿಂದ ಉಸಿರಾಡಿ. ಈ ರೀತಿಯ ಉಸಿರಾಟವು ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸಿ ಉಸಿರಾಟದ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
  • ನಡೆಯುವಾಗ ಸರಿಯಾದ ಭಂಗಿಯನ್ನು ಅನುಸರಿಸುವುದು ಉಸಿರಾಟದ ಸಾಮರ್ಥ್ಯವನ್ನು ಸುಧಾರಿಸುತ್ತದೆ. ನಿಮ್ಮ ಬೆನ್ನನ್ನು ನೇರವಾಗಿಸಿ, ಭುಜಗಳು ಹಿಂದಕ್ಕಿರುವಂತೆ ಹಾಗೂ ತಲೆಯು ಬಾಗದಂತೆ ನಡೆಯಬೇಕು. ಇದು ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಿಗಿಗೊಳಿಸುವುದರ ಜತೆಗೆ ತಲೆಯನ್ನು ಸ್ಥಿರವಾಗಿಸಿ, ಶ್ವಾಸಕೋಶದ ಕಾರ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
  • ವಾಕ್​ ಮಾಡುವಾಗ ಮಧ್ಯದಲ್ಲಿ ಬ್ರೇಕ್​​ ತಗೆದುಕೊಳ್ಳಿ, ಆಗಾಗ್ಗೆ ನೀರನ್ನು ಕುಡಿಯಿರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net