

ದಿನವಿಡಿ ಕೆಲಸದ ಗುಂಗಲ್ಲಿರುವ ನಮಗೆ ಒಂದಿಷ್ಟು ಮನೋರಂಜನೆ ಅಗತ್ಯ ಎಂದಿನ್ನಿಸುವುದು ತಪ್ಪಲ್ಲ. ಇಂದಿನ ಒತ್ತಡದ ಜೀವನದಲ್ಲಿ ರಿಲ್ಯಾಕ್ಸ್ ಮಾಡಲು ಇದು ಒಂದು ಉತ್ತಮ ಮಾರ್ಗ ಎನ್ನಬಹುದು. ಆದರೆ ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಉದ್ಭವವಾಗುತ್ತದೆ ಎಂಬುದು ನಿಮ್ಮಲ್ಲಿ ಎಷ್ಟು ಮಂದಿಗೆ ಗೊತ್ತು. ಇಂದಿನ ಯುವಜನರಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿವೆ. ಇದು ಕರುಳಿನ ಅನಾರೋಗ್ಯಕ್ಕೆ ಕಾರಣವಾಗಬಹುದು ಇದರಿಂದ ಇತರ ಕಾಯಿಲೆಗಳ ಬರುವ ಸಾಧ್ಯತೆಗಳಿರುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ನಿರಂತರವಾಗಿ ಕೆಲಸ ಮಾಡುವುದು ಅಥವಾ ನಮ್ಮ ಮೇಲೆ ಅತಿಯಾದ ಕೆಲಸದ ಒತ್ತಡವನ್ನು ಹಾಕುವುದು ನಮ್ಮ ದೈಹಿಕ ಆರೋಗ್ಯವನ್ನು ಮೊದಲೆ ಹಾಳುಮಾಡಿರುತ್ತದೆ. ಇಂಥಾ ಪರಿಸ್ಥಿತಿಯಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ರಿಲ್ಯಾಕ್ಸ್ ಮಾಡಲು ಹೋಗುತ್ತೇವೆ. ಪಾರ್ಟಿ ಮಾಡುವುದರಿಂದ ಯಾವುದೇ ಹಾನಿಯಾಗುವುದಿಲ್ಲ, ಆದರೆ ಪಾರ್ಟಿ ಮಾಡುವ ಜತಗೆ ಅಲ್ಲಿನ ಆಹಾರ ಅಥವಾ ಜಂಕ್ಫುಡ್ ಸೇವಿಸುವುದು ಸಮಸ್ಯೆಗೆ ಕಾರಣವಾಗುತ್ತದೆ.
ದಿನವಿಡೀ ಕಚೇರಿಯಲ್ಲಿ ಕುಳಿತು ಕೆಲಸ ಮಾಡಿ, ರಾತ್ರಿ ಪಾರ್ಟಿಗೆ ಹೋಗಿ ಸಾಕಷ್ಟು ಆಹಾರ ಸೇವಿಸುವುದು. ಅದು ನಿಮ್ಮ ಕರುಳಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ತಡರಾತ್ರಿ ಪಾರ್ಟಿ ಮಾಡಿ ನಂತರ ಮರುದಿನ ಬೆಳಗ್ಗೆ ಕೆಲಸಕ್ಕೆ ಹೋದರೆ ಆಮ್ಲ ಸಮತೋಲನ ಸಂಭವಿಸದೆ ಸಂಪೂರ್ಣ ಕರುಳಿನ ಸೂಕ್ಷ್ಮಜೀವಿ ಬದಲಾಗುತ್ತದೆ.
ಅತಿಯಾದ ಒತ್ತಡದಿಂದಾಗಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳೂ ಬರಬಹುದು. ಒತ್ತಡದ ಸಮಯದಲ್ಲಿ, ಕಾರ್ಟಿಸೋಲ್, ಅಡ್ರಿನಾಲಿನ್ ಮತ್ತು ನೊರಾಡ್ರಿನಾಲಿನ್ ನಂತಹ ಹಾರ್ಮೋನುಗಳು ದೇಹದಲ್ಲಿ ಉತ್ಪತ್ತಿಯಾಗುತ್ತವೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಒತ್ತಡದಿಂದಾಗಿ ಗ್ಯಾಸ್, ಉಬ್ಬುವುದು, ಮಲಬದ್ಧತೆ ಮೊದಲಾದ ಸಮಸ್ಯೆಗಳೂ ಎದುರಾಗುತ್ತವೆ.
ಆರೋಗ್ಯವಂತ ದೇಹಕ್ಕೆ ಆಹಾರ ಸೇವನೆ ಹೇಗೆ ಅಗತ್ಯವೋ, ಹಾಗೆಯೇ ಅದರ ಜೀರ್ಣಕ್ರಿಯೆಯೂ ಅಗತ್ಯ. ನಾವು ಪ್ರತಿದಿನ ವಿವಿಧ ರೀತಿಯ ವಸ್ತುಗಳನ್ನು ತಿನ್ನುತ್ತೇವೆ, ಆದರೆ ಅದು ಸರಿಯಾಗಿ ಜೀರ್ಣವಾಗದಿದ್ದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಲ್ಲದೆ, ಇತರ ಸಮಸ್ಯೆಗಳು ಸಹ ಸಂಭವಿಸುತ್ತವೆ. ಆಲ್ಕೊಹಾಲ್ ಸೇವನೆಯು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಉತ್ತೇಜಿಸುತ್ತದೆ. ಇದು ಹೊಟ್ಟೆಯ ಕಿರಿಕಿರಿ, ಆಮ್ಲೀಯತೆ, ಅಲ್ಸರ್, ಊತ, ನೋವು ಮತ್ತು ಹೊಟ್ಟೆಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಆಲ್ಕೊಹಾಲ್ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ. ಒತ್ತಡ ಜೀವನದಿಂದ ರಿಲ್ಯಾಕ್ ಬಯಸುವವರು ನೈಟ್ಪಾರ್ಟಿ, ಪಬ್ ಆಯ್ಕೆ ಬದಲಿಗೆ ಟ್ರಕ್ಕಿಂಗ್, ಸ್ವಿಮ್ಮಿಂಗ್, ಆರ್ಟ್ ಗ್ಯಾಲರಿಗೆ ಭೇಟಿ ನೀಡುವುದು ಈ ರೀತಿಯ ಆಯ್ಕೆ ನಿಮ್ಮದಾದರೆ ಸಮಸ್ಯೆ ಸೃಷ್ಟಿಯಾಗುವುದಿಲ್ಲ ಜತೆಗೆ ಆರೋಗ್ಯವು ಉತ್ತಮವಾಗಿರುತ್ತದೆ.