ಅಡುಗೆಗೆ ಆಲಿವ್ ಆಯಿಲ್​​ ಬಳಸುವುದು ಸೇಫಾ​​​?; ಒಂದು ದಿನಕ್ಕೆ ಎಷ್ಟು ಬಳಸಬೇಕು.. ಸಂಪೂರ್ಣ ಮಾಹಿತಿ ಇಲ್ಲಿದೆ

Untitled-design-89
Published on

ನಮ್ಮ ಅಡುಗೆಮನೆಯಲ್ಲಿ ಅಡುಗೆಎಣ್ಣೆ ಬಳಸುವುದನ್ನು ನಾವು ನೋಡುತ್ತೇವೆ. ಅಡುಗೆ ಎಣ್ಣೆ ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ ಬಹಳಷ್ಟು ಕ್ಯಾಲೋರಿಯನ್ನು ಹೊಂದಿರುತ್ತದೆ ಎಂಬುದು ನಿಮಗೆ ಗೊತ್ತೆ? ಇದು ಹೃದಯ ಕಾಯಿಲೆಯಿಂದ ಬೊಜ್ಜು ಹೆಚ್ಚಾಗುವವರೆಗೂ ಬಹಳ ಪ್ರಮುಖ ಪಾತ್ರವನ್ನು ಹೊಂದಿದೆ.

ಆರೋಗ್ಯಕರ ಜೀವನವನ್ನು ನಡೆಸಲು ದೇಹಕ್ಕೆ ಆಹಾರದಿಂದ ಲಭಿಸುವ ಕೊಬ್ಬಿನ ಅಗತ್ಯವಿದೆ. ಇದು ಅಂಗಾಂಗಳನ್ನು ರಕ್ಷಿಸುವುದರ ಜತೆಗೆ ದೇಹಕ್ಕೆ ಅವಶ್ಯಕವಾದ ಶಕ್ತಿಯನ್ನು ಒದಗಿಸಲು ಮತ್ತು ಪೋಷಕಾಂಶ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾದ್ರೆ ಅಡುಗೆ ಎಣ್ಣೆಗೆ ಜತೆಗೆ ಬೇರೆ ಯಾವ ಎಣ್ಣೆಗಳನ್ನು ಬಳಸಬಹುದು ಎಂದು ಆಲೋಚಿಸುತ್ತಿದ್ದೀರಾ..? ನಿಮಗಾಗಿಯೇ ಈ ಮಾಹಿತಿ. ಆಲಿವ್ ಆಯಿಲ್​​ ಅನ್ನು ಅಡುಗೆಯಲ್ಲಿ ಬಳಸಬಹುದು. ಈ ಮೇಲೆ ತಿಳಿಸಲಾದ ಎಲ್ಲ ಅಗತ್ಯತೆಗಳನ್ನು ಆಲಿವ್​ ಎಣ್ಣೆ ಪೂರೈಸುತ್ತದೆ. ಆದರೆ ಆಲಿವ್ ಎಣ್ಣೆಯು ಅಡುಗೆಗೆ ನಿಜವಾಗಿಯೂ ಆರೋಗ್ಯಕರವೇ? ಆಲಿವ್ ಎಣ್ಣೆಯ ಪ್ರಯೋಜನಗಳೇನು ಎಂಬುದರ ವಿವರಣೆಯನ್ನುಇಲ್ಲಿ ತಿಳಿಸಲಾಗಿದೆ.

ಆಲಿವ್​ ಎಣ್ಣೆಯನ್ನು ದೀರ್ಘಾಯುಷ್ಯಕ್ಕಾಗಿ ಅಮೃತವೆಂದು ಪರಿಗಣಿಸಲಾಗುತ್ತದೆ. ಉತ್ಕರ್ಷಣ ನಿರೋಧಕರಗಳು ಹಾಗೂ ವಿಟಮಿನ್​ಗಳು ಸಮೃದ್ಧವಾಗಿರುವ ಆಲಿವ್ ಎಣ್ಣೆ ಅಡುಗೆಗೆ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಪ್ರತಿ ಎಣ್ಣೆಯಂತೆ ಆಲಿವ್ ಎಣ್ಣೆಯು ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗಬಹುದು. ನೀವು ಅದನ್ನು ನಿಮ್ಮ ಆಹಾರದಲ್ಲಿ ಆರೋಗ್ಯ ಮತ್ತು ರುಚಿಗಾಗಿ ಮಿತವಾಗಿ ಬಳಸಬೇಕು. ಒಬ್ಬ ವ್ಯಕ್ತಿಯು ಪ್ರತಿದಿನ 1 ರಿಂದ 2 ಟೇಬಲ್​ ಸ್ಪೂನ್​​ ಆಲಿವ್ ಎಣ್ಣೆಯನ್ನು ಸೇವಿಸಬಹುದು.

ಆಲಿವ್ ಎಣ್ಣೆಯಲ್ಲಿ ಎಲ್ಲಾ ಕೊಬ್ಬಿನಾಮ್ಲಗಳಿಲ್ಲ. ಆಲಿವ್ ಎಣ್ಣೆಯ ಹೊರತಾಗಿ ಆವಕಾಡೊ ಎಣ್ಣೆಯು ನಮ್ಮನ್ನು ಆರೋಗ್ಯವಾಗಿಡುವ ಗುಣಗಳನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಾರೆ. ಇದು ಉತ್ಕರ್ಷಣ ನಿರೋಧಕವಾಗಿ ನಿಮ್ಮ ದೈನಂದಿನ ವಿಟಮಿನ್ ಡಿಯ 50 ಪ್ರತಿಶತವನ್ನು ಹೊಂದಿರುತ್ತದೆ. ಇದು ನಿಮ್ಮ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net