ಡ್ರೈ ಫ್ರೂಟ್ಸ್ ಸೇವಿಸುವುದರಿಂದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಪೌಷ್ಟಿಕಾಂಶಗಳು ಎತ್ತೆಚ್ಚವಾಗಿ ಇರುವುದರಿಂದ ದೇಹದ ಎಲ್ಲಾ ಭಾಗಗಳು ಕಾರ್ಯನಿರ್ವಹಿಸಲು ಬಹಳ ಸಹಕಾರಿಯಾಗಿರುತ್ತದೆ. ಉತ್ತಮ ಪೌಷ್ಟಿಕಾಂಶದ ಮೂಲವೆಂದು ಅನೇಕರು ಹೆಚ್ಚಾಗಿ ಬಾದಾಮಿಯನ್ನು ತಿನ್ನಲು ಬಯಸುತ್ತಾರೆ. ಡ್ರೈಫ್ರೂಟ್ಸ್ ಮೂಳೆಗಳನ್ನು ಹಾಗೂ ಸ್ನಾಯುಗಳನ್ನು ಬಲಪಡಿಸುತ್ತವೆ. ಬಾದಾಮಿಯೊಂದಿಗೆ ಇತರ ಡ್ರೈಫ್ರೂಟ್ಸ್ ಅನ್ನು ಮಿಶ್ರಣ ಮಾಡಿ ಸೇವಿಸುವುದರಿಂದ ಹೆಚ್ಚಿನ ವಿಟಮಿನ್ ಹಾಗೂ ಖನಿಜಾಂಶಗಳು ನಮ್ಮ ದೇಹಕ್ಕೆ ಲಭ್ಯವಾಗುತ್ತದೆ. ನೀವು ಗಮನಿಸಿದರೆ ಕೆಲವರು ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನಸಿ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸುತ್ತಾರೆ. ಅದರೊಂದಿಗೆ ಇನ್ನೂ 4 ಪದಾರ್ಥಗಳನ್ನು ಸೇರಿಸಿ ನೋಡಿ.. ಕೆಲವೆ ದಿನಗಳಲ್ಲಿ ಅದರಿಂದಾಗುವ ಪ್ರಯೋಜನ ನಿಮ್ಮ ಗಮನಕ್ಕೆ ಬರುತ್ತದೆ.
ಇದನ್ನು ಓದಿ: ಜೀರಿಗೆ ನೀರು ಕುಡಿಯೋದ್ರಿಂದ ಲಭಿಸುತ್ತೆ ಉತ್ತಮ ಆರೋಗ್ಯ; ಇದಲ್ಲಿರುವ ಅಂಶ ತಿಳಿದ್ರೆ ನೀವು ಬಳಸೋದಂತು ಪಕ್ಕಾ
ಬಾದಾಮಿ: ಬಾದಾಮಿಯಲ್ಲಿ ವಿಟಮಿನ್ ಇ, ಮೆಗ್ನೀಸಿಯಮ್, ಫೈಬರ್ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಮಿದುಳಿನ ಶಕ್ತಿ ಹೆಚ್ಚಿಸುವುದರ ಜತೆಗೆ ಹೃದಯಕ್ಕೂ ಪ್ರಯೋಜನಕಾರಿಯಾಗಿದೆ. ಬಾದಾಮಿಯನ್ನು ನಿಯಮಿತವಾಗಿ ತಿನ್ನುವುದು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕರಿಸುವುದರ ಜತಗೆ ಮೂಳೆಗಳನ್ನು ಬಲಪಡಿಸುತ್ತದೆ.
ವಾಲ್ನಟ್: ವಾಲ್ನಟ್ ಒಮೆಗಾ -3 ಕೊಬ್ಬಿನಾಮ್ಲವನ್ನು ಹೆಚ್ಚಾಗಿ ಹೊಂದಿದೆ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ.
ಗೋಡಂಬಿ: ಕಬ್ಬಿಣಾಂಶ, ಮೆಗ್ನೀಸಿಯಮ್, ಸತು ಮತ್ತು ಸೆಲೆನಿಯಮ್ ಇರುವ ಗೋಡಂಬಿ ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸಲು ಸಹಾಯಕವಾಗಿದೆ. ಇದರ ಸೇವನೆಯಿಂದ ತ್ವಚೆಯ ಹೊಳಪು ಹೆಚ್ಚುತ್ತದೆ ಮತ್ತು ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.
ಒಣದ್ರಾಕ್ಷಿ: ಕಬ್ಬಿಣ ಮತ್ತು ಫೈಬರ್ ಸಮೃದ್ಧವಾಗಿರುವ ಒಣದ್ರಾಕ್ಷಿಯು ರಕ್ತದ ಉತ್ಫಾದನೆಗೆ ಸಹಾಯ ಮಾಡುತ್ತದೆ. ಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಪಿಸ್ತಾ: ಪಿಸ್ತಾವು ಪ್ರೋಟೀನ್, ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು ಅದು ತೂಕವನ್ನು ನಿಯಂತ್ರಿಸಲು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಿತ್ಯ ಬಳಸುವ ಡಿಯೋಡ್ರೆಂಟ್ ಹೃದಯಾಘಾತಕ್ಕೆ ಕಾರಣವಾಗಬಹುದು; ಉಪಯುಕ್ತ ಮಾಹಿತಿ ನಿಮಗಾಗಿ