

ಅಡುಗೆಮನೆಯಲ್ಲಿನ ಎಷ್ಟೋ ಪದಾರ್ಥಗಳು ನಮ್ಮ ಉತ್ತಮ ಆರೋಗ್ಯಕ್ಕಾಗಿ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತವೆ.ಯಾವುದೇ ಸೈಡ್ಎಫೆಕ್ಟ್ ಕೂಡ ಆಗುವುದಿಲ್ಲ. ಇಂದು ನಾವು ತಿಳಿಸುತ್ತಿರುವುದು ಜೀರಿಗೆ ಬಗ್ಗೆ. ಸಾಂಬಾರಿಗೆ ಜೀರಿಗೆ ಒಗ್ಗರಣೆ ಹಾಕಿದ ತಕ್ಷಣ ಎಂಥಾ ಸುವಾಸನೆ ಬರುತ್ತದೆ, ಅಷ್ಟೇ ರುಚಿಕರವಾಗಿರುತ್ತದೆ. ಆದರೆ ಇದು ಆರೋಗ್ಯದ ದೃಷ್ಟಿಯಿಂದ ಎಷ್ಟೋ ಪ್ರಯೋಜನಕಾರಿ ಎಂಬುದು ನಿಮಗೆ ಗೊತ್ತೆ?
ಪ್ರಸ್ತುತ ಜೀವನಶೈಲಿಯಲ್ಲಿ ಬಹುಪಾಲು ಜನರನ್ನು ಕಾಡುತ್ತಿರುವುದು ಬೊಜ್ಜಿನ ಸಮಸ್ಯೆ. ಇದಕ್ಕೆ ರಾಮಬಾಣ ಈ ಜೀರಿಗೆ ಎಂದರೆ ತಪ್ಪಗಲಾರದು. ತೂಕ ಇಳಿಸಲು ಮತ್ತು ಜೀರ್ಣಾಂಗ ವ್ಯವಸ್ಥೆ ಸುಧಾರಿಸಲು ಜೀರಿಗೆ ಸೇವನೆ ಮಾಡಬಹುದು. ಎಷ್ಟೋ ಮಂದಿ ಜೀರಿಗೆ ಚಹಾ ಕುಡಿಯಲು ಇಷ್ಟ ಪಡುತ್ತಾರೆ. ಜೀರಿಗೆಯಲ್ಲಿ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಇರುವುದದರಿಂದ ಜೀರಿಗೆ ನೀರನ್ನು ಕುಡಿಯುವುದು ಪ್ರಯೋಜನಕಾರಿ. ಹಾಗಾದ್ರೆ ಜೀರಿಗೆ ಹಾಕಿ ಕುದಿಸಿದ ನೀರನ್ನು ಕುಡಿಯುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನವಿದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ನೀವು ಇದನ್ನು ಯಾವ ಸಮಯದಲ್ಲಾದರೂ ಸೇವಿಸಬಹುದು. ಆದರೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿದರೆ ಅದರ ಪರಿಣಾಮಕಾರಿ ರಿಸಲ್ಟ್ ಬಹುಬೇಗನೆ ನಿಮಗೆ ತಿಳಿಯುತ್ತದೆ.