ಗ್ಲೋಯಿಂಗ್​ ಸ್ಕಿನ್​​ಗೆ ಸಹಕಾರಿ ಸಬ್ಜಾ ಸೀಡ್ಸ್​ ಫೇಸ್​ಪ್ಯಾಕ್​; ನೀವು ಒಮ್ಮೆ ಟ್ರೈ ಮಾಡಿ

Untitled-design-51
Published on

ಗ್ಲೋಯಿಂಗ್​​ ಸ್ಕಿನ್​ ಯಾರಿಗೆ ಬೇಡ ಹೇಳಿ. ತ್ವಚೆಯ ಸೌಂದರ್ಯ ಕಾಪಾಡಲು ಹಲವು ಪ್ರಯತ್ನ ಮಾಡುತ್ತಲೇ ಇರುತ್ತೇವೆ. ಯಾರು ಏನೇ ಹೇಳಿದರೂ ಮಾಡುವ ನಾವು ಸೈಡ್ ಎಫೆಕ್ಟ್​ ಆಗುವ ಬಗ್ಗೆ ಚಿಂತಿಸುವುದು ಕಡಿಮೆ. ಆದರೆ ನಿಮಗಿಲ್ಲಿ ಹೆಲ್ತಿ ಫೇಸ್​ಪ್ಯಾಕ್​​ ಮಾಡುವುದು ಹೇಗೆ ಎಂಬ ಮಾಹಿತಿ ನೀಡಲಾಗಿದೆ. ಸಬ್ಜಾ ಸೀಡ್ಸ್​​ಗಳನ್ನು ತುಳಸಿ ಬೀಜಗಳು ಎಂದೂ ಕರೆಯುತ್ತಾರೆ. ಇತ್ತೀಚೆಗೆ ಸಬ್ಜಾ ಸೀಡ್ಸ್​​​​ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ನೀರಿನಲ್ಲಿ ರಾತ್ರಿಯಿಡಿ ನೆನೆಹಾಕಿ ಬೆಳಗ್ಗೆ ಎದ್ದ ತಕ್ಷಣ ಕುಡಿಯುತ್ತಾರೆ. ಜ್ಯೂಸ್​ ಜತೆಗೂ ಇದನ್ನು ಬಳಸುತ್ತಾರೆ. ಆದರೆ ಅದು ತ್ವಜೆ ಕಾಂತಿ ಹೆಚ್ಚಿಸುತ್ತದೆ ಎಂಬುದು ನಿಮಗೆ ಗೊತ್ತೆ? ಇದರಿಂದ ಚರ್ಮಕ್ಕೆ ಆಗುವ ಲಾಭದ ಬಗ್ಗೆಯೂ ನಿಮಗೆ ತಿಳಿಸುತ್ತೇವೆ.

ಇದನ್ನು ಓದಿ: ಇಷ್ಟದ ತಿನಿಸು ಸೇವಿಸುತ್ತಾ ತೂಕ ಇಳಿಸುವುದೇಗೆ?; ಫುಡಿಗಳಿಗಾಗಿ ಈ ಟಿಪ್ಸ್​​​.. ಸಬ್ಜಾ ಬೀಜದಿಂದ ಚರ್ಮಕ್ಕೆ ಆಗುವ ಉಪಯೋಗ:

  • ಸಬ್ಜಾ ಬೀಜಗಳಲ್ಲಿ ಅನೇಕ ಪೋಷಕಾಂಶಗಳಿದ್ದು, ಇದು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಕರಿಸುತ್ತದೆ.
  • ಹೆಚ್ಚಿನ ಪ್ರಮಾಣದ ನೀರನ್ನು ಹೊಂದಿರುವುದರಿಂದ ಚರ್ಮವನ್ನು ಆಳವಾಗಿ ಹೈಡ್ರೇಟ್ ಮಾಡುತ್ತದೆ. ಇದರಿಂದ ಚರ್ಮದ ಶುಷ್ಕತೆ ನಿವಾರಣೆಯಾಗುತ್ತದೆ.
  • ಆಂಟಿ-ಆಕ್ಸಿಡೆಂಟ್‌ಗಳನ್ನು ಹೊಂದಿರುತ್ತವೆ, ಇದು ಚರ್ಮವನ್ನು ಬಿಗಿಗೊಳಿಸಲು ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಮೊಡವೆಗಳನ್ನು ಕಡಿಮೆ ಮಾಡಲು ಬಹಳ ಪ್ರಯೋಜನಕಾರಿ. ಇದರಲ್ಲಿರುವ ಜೀವಸತ್ವಗಳು ಮತ್ತು ಖನಿಜಾಂಶಗಳು ಚರ್ಮವನ್ನು ಕಾಂತಿಯುತಗೊಳಿಸುತ್ತವೆ.

ಸಬ್ಜಾ ಫೇಸ್​​ಪ್ಯಾಕ್​ ಮಾಡುವ ವಿಧಾನ:

ಒಂದು ಬೌಲ್ ಅನ್ನು ತೆಗೆದುಕೊಂಡು 1 ಗ್ಲಾಸ್ ಹಾಲಿಗೆ 2 ಚಮಚ ಸಬ್ಜಾ ಬೀಜಗಳನ್ನು ಮಿಶ್ರಣ ಮಾಡಿ. ಅವುಗಳನ್ನು 15 ನಿಮಿಷಗಳ ಕಾಲ ನೆನೆಸಿಡಿ. ಬಳಿಕ ಅದನ್ನು ಮುಖದ ಮೇಲೆ ಅಪ್ಲೈ ಮಾಡಿ. 20 ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಮುಖ ತೊಳೆಯಿರಿ. ವಾರಕ್ಕೆ ಎರಡರಿಂದ ಮೂರು ಬಾರಿ ಈ ರೀತಿ ಮಾಡಿ ಬಳಿಕ ಬದಲಾವಣೆಯನ್ನು ನೀವೆ ನೋಡಿ. ಸೆನ್ಸಿಟಿವ್​ ಸ್ಕಿನ್​ ಆಗಿದ್ದರೆ ವೈದ್ಯರ ಸಲಹೆ ಪಡೆದು ಬಳಿಕ ಬಳಸಿ. ಚರ್ಮದ ಆರೈಕೆ ಉತ್ತಮ ಮನೆಮದ್ದು ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net