ಪಂಚೇಂದ್ರಿಯಗಳು ಕೆಲಸ ಮಾಡುವ ರೀತಿ ನೋಡಿದರೆ ದೇವರು ನಮಗೆ ನೀಡಿರುವ ಅತ್ಯದ್ಭುತ ವರ ಎನ್ನಬಹುದು. ಅದರಲ್ಲೂ ಮೂಗು ಯಾವುದೇ ವಾಸನೆಯನ್ನೂ ಥಟ್ ಎಂದು ಗುರುತಿಸುತ್ತದೆ. ಹೂವು, ಮಳೆ ಬರುವ ಮೊದಲು ಮಣ್ಣಿನ ಸುವಾಸನೆ, ಸುಗಂಧ ದ್ರವ್ಯ, ನೇಲ್ಪಾಲಿಷ್ ರಿಮೂವರ್, ಪೆಟ್ರೋಲ್, ಸೀಮೆಎಣ್ಣೆ, ರಾಸಾಯನಿಕಗಳು, ಅನಿಲಗಳ ಹೀಗೆ ಎಲ್ಲದರ ವಾಸನೆಯನ್ನು ಗ್ರಹಿಸುವ ಶಕ್ತಿ ನಮ್ಮ ಮೂಗಿಗಿದೆ. ಆದರೆ ಇದರಲ್ಲಿ ಮಾರಕಾವಾಗುವ ವಾಸನೆಗಳು ನಮ್ಮ ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ನಿಮ್ಮಲ್ಲಿ ಎಷ್ಟು ಮಂದಿಗೆ ಗೊತ್ತಿದೆ.
ಇದನ್ನು ಓದಿ: ಜೀರಿಗೆ ನೀರು ಕುಡಿಯೋದ್ರಿಂದ ಲಭಿಸುತ್ತೆ ಉತ್ತಮ ಆರೋಗ್ಯ; ಇದಲ್ಲಿರುವ ಅಂಶ ತಿಳಿದ್ರೆ ನೀವು ಬಳಸೋದಂತು ಪಕ್ಕಾ
ಇತ್ತೀಚೆಗೆ ಡಿಯೋಡ್ರೆಂಟ್ ಬಾಟಲ್ನಿಂದ ನೇರವಾಗಿ ಅದರ ವಾಸನೆ ಗ್ರಹಿಸುವುದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ. ಆಸ್ಟ್ರೇಲಿಯಾದಲ್ಲಿ ಹೆಚ್ಚು ಚಾಲ್ತಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಅದನ್ನು ಕ್ರೋಮಿಂಗ್ ಎಂದು ಕರೆಯಲಾಗುತ್ತಿದೆ. ಕ್ರೋಮಿಂಗ್ ಎಂದರೆ ಮೂಲತಃ ಕ್ರೋಮ್ ಆಧಾರಿತ ಬಣ್ಣವನ್ನು ವಾಸನೆ ಮಾಡುವುದು. ಆದರೆ ಕಾಲಕ್ರಮೇಣ ಅದು ಬದಲಾಗಿ ಅಮಲು ಪಡೆಯಲು ಅಪಾಯಕಾರಿ ವಸ್ತುಗಳ ಬಳಕೆ ಕೂಡ ಸೇರಿಕೊಂಡಿದೆ. ಇದರಲ್ಲಿ ಜನರು ಬಳಸುವ ಸುಗಂಧ ದ್ರವ್ಯವು ವ್ಯಸನವಾಗಿ ಮಾರ್ಪಟ್ಟಿದೆ. ಕ್ರೋಮಿಂಗ್ನಿಂದ ತಲೆನೋವು, ತಲೆತಿರುಗುವಿಕೆ, ಹೃದಯಬಡಿತ ಹೆಚ್ಚಾಗುವುದು, ಟ್ಯಾಕಿಡಿಸ್ರಿಥ್ಮಿಯಾ, ಬುದ್ಧಿಮಾಂದ್ಯತೆ, ಅಟಾಕ್ಸಿಯಾದಂತಹ ಕಾಯಿಲೆ ಉಂಟಾಗಬಹುದು.
ಡಿಯೋಡ್ರೆಂಟ್ ಮತ್ತು ಪರ್ಫ್ಯೂಮ್ ವಾಸನೆಯನ್ನು ನೇರವಾಗಿ ತೆಗೆದುಕೊಂಡು ಪ್ರಾಣ ಬಿಟ್ಟಿರುವ ಉದಾಹರಣೆಗಳು ಇವೆ. ಇತ್ತೀಚೆಗೆ 12 ವರ್ಷದ ಹುಡುಗ ಬೇವರುವಿಕೆ ವಾಸನೆಯನ್ನು ಕಡಿಮೆ ಮಾಡಿಕೊಳ್ಳಲು ಡಿಯೋಡ್ರೆಂಟ್ ಅನ್ನು ನೇರವಾಗಿ ಬಳಸಿದ್ದಾನೆ. ಬಳಿಕ ಉಸಿರುಗಟ್ಟುವಿಕೆ ಸ್ಥಿತಿಯಿಂದ ಬಳಲಿರುವುದು ಕಂಡುಬಂದಿದೆ. ಆತನ ತಾಯಿ ಡಿಯೋಡ್ರೆಂಟ್ ವಾಸನೆ ಕುಡಿದ ಬಳಿಕ ತಮ್ಮ ಮಗ ನೆಲಕ್ಕೆ ಕುಸಿದ. ಕೂಡಲೇ ಅವರಿಗೆ ಸಿಪಿಆರ್ ನೀಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆ ತಲುಪಿದ ಬಳಿಕ ಹೆಚ್ಚು ಮೂರ್ಛೆ ಬಂದು ಕೋಮಾ ಸ್ಥಿತಿಗೆ ತಲುಪಿದ್ದಾನೆ ಎಂದು ವೈದ್ಯರು ತಿಳಿಸಿದಾಗಿ ಹೇಳಿರುವುದು ವರದಿಯಾಗಿದೆ. ಅಲ್ಲದೆ 14 ವರ್ಷ ವಯಸ್ಸಿನ ಜಾರ್ಜಿಯಾ ಗ್ರೀನ್ ಎಂಬ ಹುಡುಗಿ ತನ್ನ ಮಲಗುವ ಕೋಣೆಯಲ್ಲಿ ಡಿಯೋಡ್ರೆಂಟ್ ಅನ್ನು ಸಿಂಪಡಿಸಿದ ನಂತರ ಹೃದಯಾಘಾತವಾಗಿ ಮೃತಪಟ್ಟಿದ್ದಾಗಿ ಆಕೆಯ ತಂದೆಯೇ ಹೇಳಿದ್ದರು.
ಕ್ರೋಮಿಂಗ್ನಿಂದ ಅಭ್ಯಾಸದಿಂದ ಡಿಯೋಡ್ರೆಂಟ್, ನೇಲ್ಪಾಲಿಷ್ ರಿಮೂವರ್, ಪೆಟ್ರೋಲ್, ಸೀಮೆಎಣ್ಣೆಯ ವಾಸನೆಯನ್ನು ನೇರವಾಗಿ ತೆಗೆದುಕೊಳ್ಳುವುದರಿಂದ ಹೃದಯವು ಇದ್ದಕ್ಕಿದ್ದಂತೆ ಬಡಿಯುವುದನ್ನು ನಿಲ್ಲಿಸುತ್ತದೆ. ಈ ಕಾರಣದಿಂದಾ ಮೆದುಳು ತಾಜಾ ಮತ್ತು ಆಮ್ಲಜನಕಯುಕ್ತ ರಕ್ತವನ್ನು ಪಡೆಯುವುದಿಲ್ಲ. ಇದರಿಂದ ಪ್ರಜ್ಞಾಹೀನತೆ ಅಥವಾ ಸಾವು ಸಂಭವಿಸಬಹುದು.
6 ಪತ್ನಿಯರು, 10000 ಮಕ್ಕಳ ತಂದೆ ಹೆನ್ರಿ; ವಿಶ್ವದ ಅತ್ಯಂತ ಹಳೆಯ ಜೀವಂತ ಮೊಸಳೆ ಬಗ್ಗೆ ನಿಮಗೆಷ್ಟು ಗೊತ್ತು?