ಈ 'ಗೋಲ್ಡ್ ಕರಕ್' ಚಹಾದ ಬೆಲೆ ಬರೊಬ್ಬರಿ 1 ಲಕ್ಷ ರೂ.! ಅಂತಹ ವಿಶೇಷತೆ ಏನಿದೆ ಇದರಲ್ಲಿ? ಇಲ್ಲಿದ ಮಾಹಿತಿ

by (32)
Published on

ದುಬೈ: ಭಾರತೀಯ ಮೂಲದ ಉದ್ಯಮಿ ಸುಚೇತಾ ಶರ್ಮಾ ಅವರ ಮಾಲೀಕತ್ವದ ದುಬೈ ಮೂಲದ ಕೆಫೆಯು ತನ್ನ ಅತಿರಂಜಿತ "ಗೋಲ್ಡ್ ಕರಕ್"(Gold Karak) ಎಂಬ ಹೆಸರಿನ ಚಹಾ ದುಬೈನಲ್ಲಿ ಹೊಸ ಸಂಚಲ ಮೂಡಿಸಿದೆ.

ಹೌದು, ಇಲ್ಲಿನ ಎಮಿರೇಟ್ಸ್ ಫೈನಾನ್ಶಿಯಲ್ ಟವರ್ಸ್‌ನಲ್ಲಿರುವ ಬೋಹೋ ಎಂಬ ಕೆಫೆಯಲ್ಲಿ ಈ ಗೋಲ್ಡ್ ಕರಕ್ ಚಹಾ ಸವಿಯಬಹುದು. ಆದರೆ, ಈ ಚಹಾದ ಬೆಲೆ ಕೇಳಿದರೆ ನೀವು ಶಾಕ್​ ಆಗುವುದು ಗ್ಯಾರಂಟಿ, ದುಬೈನಲ್ಲಿ ಬರೊಬ್ಬರಿ 5,000 AED ಬೆಲೆ ಹೊಂದಿದೆ. ಅಂದರೆ ಭಾರತೀಯ ರೂಪಾಯಿಗಳ ಪ್ರಕಾರ ಸುಮಾರು 1.14 ಲಕ್ಷ ರೂ. ಬೆಲೆ ಹೊಂದಿದೆ. ಈ ಬೆಲೆಯ ಹಿನ್ನೆಲೆ ಇದೀಗ ಈ ಗೋಲ್ಡ್ ಕರಕ್ ಚಹಾ ದುಬೈ ಮತ್ತು ಸಾಮಾಜಿಕ ಜಾಲತಾಣಲ್ಲಿ ಸದ್ದು ಮಾಡುತ್ತಿದೆ.

ಯಾಕೀಷ್ಟು ಗೋಲ್ಡ್ ಕರಕ್ ಚಹಾದ ರೇಟು?

ಈ ಐಷಾರಾಮಿ ಚಹಾವನ್ನು 24-ಕ್ಯಾರೆಟ್ ಚಿನ್ನದ ಎಲೆಗಳಿಂದ ಮಾಡಲ್ಪಟ್ಟ ಶುದ್ಧ ಬೆಳ್ಳಿಯ ಕಪ್‌ಗಳಲ್ಲಿ ಬಡಿಸುವ ಮೂಲಕ ಸಂಪೂರ್ಣ ಹೊಸನತಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಲಾಗುತ್ತಿದೆ. ಚಹಾದ ಮೇಲೆ ಬಂಗಾರದ ಪದರು ಹೊಂದಿದೆ. ಹೀಗಾಗಿ ಇದಕ್ಕೆ 1.14 ಲಕ್ಷ ರೂ. ಬೆಲೆ ಎಂದು ವರದಿಯಾಗಿದೆ.

ಈ ಕೆಫೆಯಲ್ಲಿ ಐಷಾರಾಮಿ ಮೆನು(ಖಾದ್ಯಗಳ ಪಟ್ಟಿ) ಹೊಂದಿದೆ. ಅದರಲ್ಲಿ ಗೋಲ್ಡ್​ ಸವೇನರ್ ಕಾಫಿ ಕೂಡ ಇದ್ದು ಇದರ ಬೆಲೆ ಕೂಡ 1.09 ಲಕ್ಷ ರೂ. ಆಗಿದೆ. ಅಲ್ಲದೆ, ಈ ಕೆಫೆಯಲ್ಲಿ ಐಸ್​ಕ್ರೀಮ್​ ಮತ್ತು ಪಾನಿಗಳ ಕೂಡ ದುಬಾರಿ ಬೆಲೆಯಲ್ಲಿ ಇದೆ. ಈ ಖಾದ್ಯಗಳನ್ನು ಶುದ್ಧ ಬೆಳ್ಳಿ ಮತ್ತು ಬಂಗಾರದ ಸಾಮಾನುಗಳಲ್ಲಿ(ಪಾತ್ರೆ) ಉಣಬಡಿಸುತ್ತಾರೆ. ಹೀಗಾಗಿ, ಈ ಕೆಫೆ ಮತ್ತು ಇಲ್ಲಿನ ಚಹಾ ಇದೀಗ ವೈರಲ್​ ಆಗುತ್ತಿದೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net