ಸುಖಾಸುಮ್ಮನೆ ಸಿನಿಮಾಗಳಲ್ಲಿ ಕೆಟ್ಟ ಪದಗಳನ್ನು ಬಳಸಬೇಡಿ! ಈ ನಿರ್ದೇಶಕನ ಮಾತಿಗೆ ಸಿನಿಪ್ರೇಕ್ಷಕರು ಫಿದಾ

Untitled design (67)
Published on

ಹೈದರಾಬಾದ್​: ನಟ ಕಾರ್ತಿಕೇಯ ಅಭಿನಯದ ಆ್ಯಕ್ಷನ್, ಥ್ರಿಲ್ಲರ್ 'ಭಜೆ ವಾಯು ವೇಗಂ' ಇದೇ ಮೇ.31ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು, ಸದ್ಯ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ಐಶ್ವರ್ಯ ಮೆನನ್, ರವಿಶಂಕರ್ ಮತ್ತು 'ಹ್ಯಾಪಿ ಡೇಸ್' ಟೈಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದಲೂ ಸಖತ್ ರೆಸ್ಪಾನ್ಸ್ ಲಭಿಸುತ್ತಿದೆ.

ಇನ್ನು ಇತ್ತೀಚೆಗಷ್ಟೇ ನಡೆದ ಸಂದರ್ಶನದಲ್ಲಿ ಮಾತನಾಡಿದ 'ಭಜೆ ವಾಯು ವೇಗಂ' ಚಿತ್ರದ ನಿರ್ದೇಶಕ ಪ್ರಶಾಂತ್ ರೆಡ್ಡಿ, "ಕ್ರಿಕೆಟ್ ಮತ್ತು ರಾಜಕೀಯದ ಸುತ್ತ ಸುತ್ತುವ ಸಿನಿಮಾದ ಕಥೆಯ ಬಗ್ಗೆ ಹಲವಾರು ವಿಷಯಗಳನ್ನು ಹಂಚಿಕೊಳ್ಳುವಾಗ, ಯಾವುದೇ ಚಿತ್ರದಲ್ಲಿ ಉದ್ದೇಶಪೂರ್ವಕವಾಗಿ ಕೆಟ್ಟ ಪದಗಳನ್ನು ಬಳಸಬಾರದು. ಸಿನಿಮಾಗಳಲ್ಲಿ ಅಸಭ್ಯ, ಅವಾಚ್ಯ ಪದಗಳ ಬಳಕೆ ಆದಷ್ಟು ಕಡಿಮೆಯಾಗಬೇಕು" ಎಂದರು.

ಡೈಲಾಗ್​ಗಳಲ್ಲಿ ಕೆಟ್ಟ ಪದಗಳನ್ನು ಸೇರಿಸಬಾರದು ಎಂದು ಅಭಿಪ್ರಾಯಪಟ್ಟ ಪ್ರಶಾಂತ್, "ನಾನು ನನ್ನ ಸಿನಿಮಾಗಳಲ್ಲಿ ಅವಾಚ್ಯ ಅಥವಾ ಆಶ್ಲೀಲ ಪದಗಳನ್ನು ಬಳಸುವುದಿಲ್ಲ. 'ಭಜೆ ವಾಯು ವೇಗಂ' ಚಿತ್ರದಲ್ಲಿ ನಮ್ಮ ನಾಯಕನ ಪಾತ್ರದ ಬಗ್ಗೆ ಯಾರೂ ಸಹ ಕೆಟ್ಟದಾಗಿ ಮಾತನಾಡುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಪಾತ್ರಕ್ಕೆ ಅಗತ್ಯವಿದ್ದರೆ ಮಾತ್ರ ಅವುಗಳನ್ನು ಸೇರಿಸಬೇಕು" ಎಂದು ಅಭಿಪ್ರಾಯಿಸಿದ್ದಾರೆ.

"ಇಲ್ಲಿ ನಾನು ಯಾರನ್ನೂ ಗುರಿಯಾಗಿಸಿಕೊಂಡಿಲ್ಲ. ಆಯಾ ಸಿನಿಮಾಗಳಲ್ಲಿ ಅಶ್ಲೀಲ ಭಾಷೆ ಇರಬಾರದು ಎಂಬುದಷ್ಟೇ ನನ್ನ ಅನಿಸಿಕೆ" ಎಂದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net