

ಹೆಬ್ರಿ: ನಮ್ಮ ನಾಡ ಒಕ್ಕೂಟ ಕುಂದಾಪುರ ತಾಲೂಕು ಸಮಿತಿ ವತಿಯಿಂದ ಸಹಕಾರ - ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ಹಾಗೂ ಎನ್‌ಎನ್‌ಒ ಪರ್ಯವರಣ ಸಂರಕ್ಷಣಾ ಸಮಿತಿ ಉಡುಪಿ ಘಟಕದ ಸಹಕಾರದೊಂದಿಗೆ ಸಮಾಜ ಸೇವಕ ಫಜಲ್ ನೇರಳಕಟ್ಟೆ, ಅಬ್ದುಲ್ ಶುಕುರ್ ಬೆಳ್ವೆ, ಸಮಿಉಲ್ಲ ಇವರ ನೇತೃತ್ವದಲ್ಲಿ ಕುಂದಾಪುರ ತಾಲೂಕಿನ ಮಾವಿನಕಟ್ಟೆಯಲ್ಲಿ ಅರ್ಪೂರ್ಣಗೊಂಡ ಮನೆಯ ಶೌಚಗೃಹ ನಿರ್ಮಾಣಕ್ಕೆ ಸಹಾಯಹಸ್ತ ನೀಡಲಾಯಿತು.
ದಾನಿ ಹಂಝ ಉಚ್ಚಿಲ ಸಹಾಯಧನದ ಚೆಕ್ ಹಸ್ತಾಂತರಿಸಿದರು. ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಅಧ್ಯಕ್ಷ ಮುಸ್ತಾಕ್ ಅಹಮ್ಮದ್ ಬೆಳ್ವೆ ಅಧ್ಯಕ್ಷತೆ ವಹಿಸಿದ್ದರು.
ಎನ್‌ಎನ್‌ಒ ಪರ್ಯವರಣ ಸಂರಕ್ಷಣಾ ಸಮಿತಿ ಅಧ್ಯಕ್ಷ ಶೈಖ್ ಅಬ್ದುಲ್ ವಾಹಿದ್ ಉಡುಪಿ, ಎನ್‌ಎನ್‌ಒ ಟ್ರಸ್ಟಿ ಪೀರು ಸಾಹೇಬ್, ಎನ್‌ಎನ್‌ಒ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಹೀರ್ ನಾಕುದಾ ಗಂಗೊಳ್ಳಿ, ಜಿಲ್ಲಾ ಸಮಿತಿ ಸದಸ್ಯರಾದ ಮೊಹಮ್ಮದ್ ನಿಹಾರ ಕುಂದಾಪುರ, ಪಳ್ಳಿ ಉಸ್ಮಾನ್ ಗುಲ್ವಾಡಿ, ಕುಂದಾಪುರ ಯುವ ಸಂಯೋಜಕ ಸಮಿವುಲ್ಲ ಉಪಸ್ಥಿತರಿದ್ದರು. ಹುಸೈನ್ ಹೈಕಾಡಿ ಪ್ರಾಸ್ತಾವಿಕ ಮಾತನಾಡಿದರು. ಫಜಲ್ ನಿರೂಪಿಸಿದರು. ಅಬ್ದುಲ್ ಶುಕುರ್ ಬೆಳ್ವೆ ಸ್ವಾಗತಿಸಿದರು.