

ಕೋಟ: ಇಲ್ಲಿನ ಸೇವಾಸಂಗಮ ಶಿಶುಮಂದಿರದ ಪ್ರಾರಂಭೋತ್ಸವ ಇತ್ತೀಚೆಗೆ ಜರುಗಿತು. ಪಾಲಕರು ಮಕ್ಕಳನ್ನು ಶಿಶುಮಂದಿರಕ್ಕೆ ಕರೆತಂದಿದ್ದು, ಈ ವೇಳೆ ಆರತಿ ಬೆಳಗಿ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು.
ಶಿಶುಮಂದಿರ ಸಮಿತಿ ಅಧ್ಯಕ್ಷೆ ನಾಗಲಕ್ಷ್ಮೀ ಹೆಗ್ಡೆ ಶುಭಹಾರೈಸಿದರು. ಸಮಿತಿಯ ಪದಾಧಿಕಾರಿಗಳಾದ ಸುಷ್ಮಾ ದಯಾನಂದ್ ಹೊಳ್ಳ, ಸುಶೀಲಾ ಸೋಮಶೇಖರ್, ವಸುಧಾ ಪ್ರಭು, ವ್ಯವಸ್ಥಾಪಕಿ ಭಾಗ್ಯ ವಾದಿರಾಜ್, ಅಮೃತ್ ಜೋಗಿ, ಮಾತಾಜಿ, ಸಹಾಯಕಿ ಇದ್ದರು.