ಎಸ್​ಐ ಹುದ್ದೆ ಸಿಕ್ಕರೂ ಕಾನ್ಸ್​ಟೆಬಲ್ ಆಗಿರೋದೆ ವಾಸಿ ಅನ್ನೋ ನಿರ್ಧಾರಕ್ಕೇ ಅಂಟಿಕೊಂಡ್ರು!

police
Published on

ಬೆಂಗಳೂರು: ಕಾನ್​ಸ್ಟೆಬಲ್ ಹುದ್ದೆಗೆ ಮರಳಲು ಮನವಿ ಮಾಡಿದ ಪ್ರೊಬೆಷನರಿ ಪಿಎಸ್​ಐಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅನುಮತಿ ನೀಡಿದ್ದಾರೆ. ಎಸ್.ಜೆ. ಪಾರ್ಕ್ ಪೊಲೀಸ್ ಠಾಣೆಯ ಎಸ್​ಐ ವಿ. ರಮೇಶ್ ಹೆಡ್ ಕಾನ್ಸ್​ಟೆಬಲ್​ ಹುದ್ದೆಗೆ ವಾಪಸ್ ಆಗಿದ್ದಾರೆ.

ಮುಂಬಡ್ತಿ ಪಡೆದು ಮೈಸೂರಿನಲ್ಲಿ ಮುಖ್ಯಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದು, 2017ರಲ್ಲಿ ಸಿವಿಲ್ ಪಿಎಸ್​ಐ ಹುದ್ದೆಗೆ ಆಯ್ಕೆಯಾಗಿದ್ದರು. 2017ರ ಡಿಸೆಂಬರ್​ನಿಂದ ಬನಶಂಕರಿ ಸಂಚಾರ ಠಾಣೆಯಲ್ಲಿ ಪ್ರೊಬೆಷನರಿ ಅವಧಿ ಆರಂಭಿಸಿದರು. ಪ್ರಸ್ತುತ ಎಸ್.ಜೆ. ಪಾರ್ಕ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಮೈಸೂರು ನಗರ ಹೆಡ್​ಕಾನ್​ಸ್ಟೆಬಲ್​ ಹುದ್ದೆಗೆ ವಾಪಸ್ ಕಳುಹಿಸುವಂತೆ ಆಯುಕ್ತರಿಗೆ ಹಲವು ಬಾರಿ ಪತ್ರ ಬರೆದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಮೇಶ್​ರನ್ನು ಎಸ್​ಐ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಆಯುಕ್ತರು ಕಳುಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net