More

    ಬೆಂಗಳೂರಿಗರ ಗಮನಕ್ಕೆ- ಜುಲೈನಿಂದ ತ್ಯಾಜ್ಯ ನಿರ್ವಹಣಾ ಕರ ಜಾರಿ

    ಬೆಂಗಳೂರು: ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ಉಪನಿಯಮ-2020ಕ್ಕೆ ಸರ್ಕಾರ ಅಂಕಿತ ಹಾಕಿದ್ದು, ಮಾಸಿಕ ಕರ ವಸೂಲಿಯನ್ನು ಜುಲೈನಿಂದ ಜಾರಿಗೊಳಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್​ಕುಮಾರ್ ತಿಳಿಸಿದ್ದಾರೆ.

    ವಾಸದ ಮನೆಗಳು, ವಾಣಿಜ್ಯ ಕಟ್ಟಡಗಳು, ಹೆಚ್ಚು ತ್ಯಾಜ್ಯ ಉತ್ಪಾದಿಸುವ ಕೇಂದ್ರಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಘನತ್ಯಾಜ್ಯ ನಿರ್ವಹಣಾ ಉಪನಿಯಮಕ್ಕೆ ಅಂಕಿತ ಹಾಕಿದೆ. ತ್ಯಾಜ್ಯದ ಕರವನ್ನು ಮಾಸಿಕ ಅಥವಾ ವಾರ್ಷಿಕ ವಸೂಲಿ ಮಾಡುವ ಕುರಿತು ಗೊಂದಲಗಳಿದ್ದು, ಈ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು. ಜುಲೈ ಆರಂಭದಿಂದ ತ್ಯಾಜ್ಯ ಕರ ವಸೂಲಿ ಹಾಗೂ ದಂಡ ನಿಯಮಗಳನ್ನು ಜಾರಿಗೊಳಿಸಲಾಗುವುದು ಎಂದು ಬುಧವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.

    ಇದನ್ನೂ ಓದಿ: ನ್ಯಾಯಾಲಯಗಳ ವಿರುದ್ಧ ವೃಥಾ ಟೀಕೆ ಅಕ್ಷಮ್ಯ

    1.08 ಲಕ್ಷ ರೂ. ದಂಡ ವಸೂಲಿ: ಬಿಬಿಎಂಪಿ ಮಾರ್ಷಲ್​ಗಳು ನಗರದಲ್ಲಿ ಮಾಸ್ಕ್ ಹಾಕದ ಸಾರ್ವಜನಿಕರಿಂದ ತಲಾ 200 ರೂ. ದಂಡ ವಿಧಿಸುವ ಕಾರ್ಯವನ್ನು ಮಂಗಳವಾರ ಆರಂಭಿಸಿದ್ದಾರೆ. ಕಳೆದ ಎರಡು ದಿನದಲ್ಲಿ ಮಾಸ್ಕ್ ಹಾಕದೆ ಸಂಚಾರ ಮಾಡುತ್ತಿದ್ದ 544 ಜನರಿಗೆ 1,08,800 ರೂ. ದಂಡ ವಿಧಿಸಿದ್ದಾರೆ.

    ಬಿಡದಿಯ ಎಂಎಸ್​ಐಎಲ್​ ಯಾರ್ಡ್​ನಲ್ಲಿ ವ್ಯರ್ಥವಾಗ್ತಿದೆ ಮಲೇಷ್ಯಾ ಮರಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts