More

    ಸಿಇಟಿ, ನೀಟ್ ಆಕಾಂಕ್ಷಿಗಳ ಗಮನಕ್ಕೆ – ದಯಾನಂದ ಸಾಗರ್ ವಿವಿಯಲ್ಲಿ ಇಂದಿನಿಂದ ಉಚಿತ ಆನ್​ಲೈನ್ ಕೋಚಿಂಗ್

    ಬೆಂಗಳೂರು: ಕರೊನಾ ಭೀತಿ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದಯಾನಂದ ಸಾಗರ್ ವಿಶ್ವವಿದ್ಯಾಲಯವು ಸಿಇಟಿ, ನೀಟ್ ಪರೀಕ್ಷೆಗಳಿಗೆ ಆನ್​ಲೈನ್ ಮೂಲಕ ಉಚಿತವಾಗಿ ಕೋಚಿಂಗ್ ನೀಡಲು ಮುಂದಾಗಿದೆ.

    ವೆಬಿನಾರ್​ಗಳು

    ದಯಾನಂದ ಸಾಗರ್ ವಿವಿ ಆಯೋಜಿಸುತ್ತಿರುವ ವೆಬಿನಾರ್​ಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಮತ್ತು ಅವರ ಪಾಲಕರಿಗೆ ಆಹ್ವಾನಿಸಲಾಗಿದೆ. ಪ್ರತಿ ಭಾನುವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 12ರ ವರೆಗೆ ತಜ್ಞರು ವೆಬಿನಾರ್​ನಲ್ಲಿ ವೃತ್ತಿ ಆಯ್ಕೆಗಳ ಕುರಿತು ಮಾತನಾಡಲಿದ್ದಾರೆ. 3,150 ವಿದ್ಯಾರ್ಥಿಗಳು ಈಗಾಗಲೇ ವೆಬಿನಾರ್​ಗಳಲ್ಲಿ ಭಾಗವಹಿಸಲು ಆಸಕ್ತಿ ತೋರಿಸಿದ್ದಾರೆ.

    ಸದ್ಯ ಕರೊನಾ ಭೀತಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸಿಇಟಿ ತರಬೇತಿ ಪಡೆಯಲು ಸಮಸ್ಯೆ ಎದುರಾಗುತ್ತಿದೆ. ಆರ್ಥಿಕ ಸಮಸ್ಯೆ ಇರುವ ಕೆಲ ವಿದ್ಯಾರ್ಥಿಗಳ ಪಾಲಕರು ದುಬಾರಿ ಶುಲ್ಕ ಪಾವತಿಸಿ ಸಿಇಟಿ ಕೋಚಿಂಗ್ ಕೊಡಲು ಸಾಧ್ಯವಾಗುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ದಯಾನಂದ ಸಾಗರ್ ವಿಶ್ವವಿದ್ಯಾಲಯವು (ಡಿಎಸ್​ಯು ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್, ದಯಾನಂದ ಸಾಗರ್ ಕಾಲೇಜ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್​ವೆುಂಟ್ (ಡಿಎಸ್​ಎಟಿಎಂ) ಸಹಯೋಗದಲ್ಲಿ ಪ್ರತಿವರ್ಷ ಉಚಿತ ಸಿಇಟಿ ತರಬೇತಿ ಕಾರ್ಯಕ್ರಮಗಳನ್ನು ನೀಡುತ್ತಿದೆ. ಇದರಿಂದ ಕೆಲ ವಿದ್ಯಾರ್ಥಿಗಳಿಗೆ ಮಾತ್ರ ಅನುಕೂಲವಾಗುತ್ತಿತ್ತು. ಇದೀಗ ಕರೊನಾ ಭೀತಿ ಹಿನ್ನೆಲೆಯಲ್ಲಿ ಆನ್​ಲೈನ್​ನಲ್ಲಿ ಉಚಿತವಾಗಿ ಸಿಇಟಿಗೆ ಕೋಚಿಂಗ್ ಕೊಡಲು ಮುಂದಾಗಿದ್ದು, ಇದರಿಂದ ಹೆಚ್ಚಿನ ವಿದ್ಯಾಥಿಗಳಿಗೆ ಅನುಕೂಲವಾಗಲಿದೆ. ಪ್ರತಿದಿನ ಎಲ್ಲ ವಿಷಯಗಳಿಗೆ 90 ನಿಮಿಷಗಳ ಕಾಲ ಆನ್​ಲೈನ್​ನಲ್ಲಿ ತರಗತಿಗಳನ್ನು ನಡೆಸಲಾಗುತ್ತದೆ.

    ಇದನ್ನೂ ಓದಿ: ನ್ಯಾಯಾಲಯಗಳ ವಿರುದ್ಧ ವೃಥಾ ಟೀಕೆ ಅಕ್ಷಮ್ಯ

    ಈ ತರಗತಿಗಳಿಗೆ ಸಂಬಂಧಿಸಿದಂತೆ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಮತ್ತು ಜೀವಶಾಸ್ತ್ರವನ್ನು ಒಳಗೊಂಡಿ ರುತ್ತದೆ) ಪ್ರತಿ ವಾರ ಪರೀಕ್ಷೆಗಳು ಹಾಗೂ ಈ ತರಗತಿಗಳು ಮುಕ್ತಾಯಗೊಂಡ ಬಳಿಕ ಪರೀಕ್ಷೆಗಳು ನಡೆಯಲಿವೆ. ಕೋಚಿಂಗ್ ತೆಗೆದುಕೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳು ಡೆಸ್ಕ್​ಟಾಪ್, ಲ್ಯಾಪ್​ಟಾಪ್, ಟ್ಯಾಬ್ ಅಥವಾ ಸ್ಮಾರ್ಟ್​ಫೋನ್​ನಂತಹ ಸಾಧನ ಹೊಂದಿರಬೇಕು.

    ವೇಳಾಪಟ್ಟಿ: ಜೂ.12 ರಂದು ಕ್ರ್ಯಾಶ್​ಕೋರ್ಸ್ ಪ್ರಾರಂಭವಾಗಲಿದ್ದು, ಜು.27ರಂದು ಮುಕ್ತಾಯಗೊಳ್ಳಲಿದೆ. ಜು.15 ರಿಂದ ಜು.18 ರವರೆಗೆ ಇಂಗ್ಲಿಷ್ ಪರೀಕ್ಷೆ ಕಾರಣ ತರಗತಿ ಇರುವುದಿಲ್ಲ. ಡಿಎಸ್​ಯು ವೆಬ್​ಸೈಟ್​ನಲ್ಲಿ ವಿವರವಾದ ವೇಳಾಪಟ್ಟಿ ಪ್ರಕಟಿಸಲಾಗಿದೆ.

    ಬೆಂಗಳೂರಿಗರ ಗಮನಕ್ಕೆ- ಜುಲೈನಿಂದ ತ್ಯಾಜ್ಯ ನಿರ್ವಹಣಾ ಕರ ಜಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts