ನ್ಯಾಯಾಲಯದ ಮಾತು ಕೇಳಿ ಕಂಗನಾ ಕಣ್ಣಲ್ಲಿ ನೀರು ಬಂತಂತೆ ...

Kangana Ranaut - Final
Published on

ಮುಂಬೈ: 'ಮನೆಯನ್ನು ಅರ್ಧ ಒಡೆಯಲಾಗಿದೆ. ಮಳೆಗಾಲದಲ್ಲಿ ಹೀಗೆ ಅರ್ಧಂಬರ್ಧ ಒಡೆದ ಮನೆಯನ್ನು ಹಾಗೆಯೇ ಬಿಡುವುದಕ್ಕೆ ಸಾಧ್ಯವಿಲ್ಲ. ಬೇರೆ ವಿಷಯದಲ್ಲಿ ನೀವು ಬಹಳ ಬೇಗ ಕೆಲಸ ಮಾಡುತ್ತೀರಿ. ಈ ವಿಷಯದಲ್ಲಿ ಇನ್ನಷ್ಟು ಸಮಯ ಬೇಕು ಎಂದರೆ ಹೇಗೆ? ...'

ಹಾಗಂತ ಇತ್ತೀಚೆಗೆ ಮುಂಬೈ ಹೈಕೋರ್ಟ್​, ಬೃಹನ್​ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿತ್ತು. ಅದಕ್ಕೆ ಕಾರಣ, ಕೆಲವು ದಿನಗಳ ಹಿಂದೆ, ಅತಿಕ್ರಮ ನಿರ್ಮಾಣ ಎಂಬ ನೆಪವೊಡ್ಡಿ ಪಾಲಿಕೆ ಅಧಿಕಾರಿಗಳು, ಕಂಗನಾ ಅವರ ಮನೆಯನ್ನು ಒಡೆದು ಹಾಕಿದ್ದರು.

ಈ ವಿಷಯದಲ್ಲಿ ತಮಗೆ ಅನ್ಯಾಯವಾಗಿರುವುದರಿಂದ, ಪಾಲಿಕೆಯು ನಷ್ಟ ತುಂಬಿಕೊಡಬೇಕು ಎಂದು ಕೋರ್ಟ್​ ಮೆಟ್ಟಿಲೇರಿದ್ದರು. ಮಹಾನಗರ ಪಾಲಿಕೆ ಅಧಿಕಾರಿಗಳು ತಮ್ಮ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಮತ್ತು ಇದರಿಂದಾಗಿ ತನಗೆ ಸಾಕಷ್ಟು ನಷ್ಟವಾಗಿರುವುದರಿಂದ ಎರಡು ಕೋಟಿ ನಷ್ಟ ಕಟ್ಟಿಕೊಡಬೇಕು ಎಂದು ಅವರು ಹೇಳಿದ್ದರು. ಅದಕ್ಕೆ ಪ್ರತಿಯಾಗಿ ನ್ಯಾಯಾಲಯವು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು.

ನ್ಯಾಯಾಲಯವು ಮನೆಯ ಬಗ್ಗೆ ಮಾತನಾಡಿರುವುದನ್ನು ಕೇಳಿ ಕಂಗನಾ ಕಣ್ಣಲ್ಲಿ ನೀರು ಬಂದಿದೆಯಂತೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, 'ಗೌರವಾನ್ವಿತ ನ್ಯಾಯಾಲಯದ ಮಾತು ಕೇಳಿ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತಿದೆ. ಮುಂಬೈನಲ್ಲಿ ಮಳೆ ಹೆಚ್ಚಾಗಿದ್ದು, ಇದರಿಂದ ನನ್ನ ಮನೆ ಹಾಳಾಗುತ್ತಿದೆ. ಇಂತಹ ಸಮಯದಲ್ಲಿ ನನ್ನ ಮನೆಯ ಬಗ್ಗೆ ಯೋಚನೆ ಮಾಡಿದ್ದಿಕ್ಕೆ ಮತ್ತು ಈ ವಿಷಯದಲ್ಲಿ ಕಾಳಜಿ ವಹಿಸಿದ್ದಿಕ್ಕೆ ಧನ್ಯವಾದಗಳು. ಮನೆ ಒಡೆದಿದ್ದರಿಂದ ಬಹಳ ನೊಂದಿದ್ದೆ. ನ್ಯಾಯಾಲಯದ ಮಾತು ಕೇಳಿ ಸ್ವಲ್ಪ ನಂಬಿಕೆ ಬಂತು' ಎಂಬ ಅರ್ಥದಲ್ಲಿ ಕಂಗನಾ ಟ್ವೀಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net