ಅಂದು ದರ್ಶನ್​ ಕಪಾಳಕ್ಕೆ ಹೊಡೆದಿದ್ದ ಈಕೆ ಇಂದು ಸ್ಯಾಂಡಲ್​ವುಡ್​ನ ಬೋಲ್ಡ್ ಬ್ಯೂಟಿ! ಯಾರು ಗೊತ್ತಾ ಈ ನಟಿ?

ವಿಜಯವಾಣಿ-2024-08-20T175621.233
Published on

ಬೆಂಗಳೂರು: 'ಮೆಜೆಸ್ಟಿಕ್' ಚಿತ್ರದಿಂದಲೇ ಕನ್ನಡ ಚಿತ್ರೋದ್ಯಮದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿಕೊಂಡ ಚಾಲೆಂಜಿಂಗ್ ಸ್ಟಾರ್​ ನಟ ದರ್ಶನ್​, ತದನಂತರ ನಟಿಸಿದ ಹಲವು ಸಿನಿಮಾಗಳು ಬ್ಯಾಕ್ ಟು ಬ್ಯಾಕ್​ ಬ್ಲಾಕ್​​ಬಸ್ಟರ್​ ಚಿತ್ರಗಳ ಸಾಲಿಗೆ ಸೇರಿಕೊಂಡವು. ಮಾಸ್​ ಲುಕ್​, ಒಳ್ಳೆಯ ಎತ್ತರ, ಖಡಕ್ ಡೈಲಾಗ್​ನಿಂದಲೇ ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಿದ್ದ ದರ್ಶನ್​, ಆ ಶಿಳ್ಳೆ, ಚಪ್ಪಾಳೆಯನ್ನು ಮತ್ತೊಮ್ಮೆ ಪಡೆದಿದ್ದು ಇತ್ತೀಚೆಗಷ್ಟೇ ತೆರೆಕಂಡ ಸೂಪರ್​ ಹಿಟ್​​ 'ಕಾಟೇರ' ಚಿತ್ರದಲ್ಲಿ. 'ಬಾಸ್' ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದ 'ದಾಸ' ಇದೀಗ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಕಳೆದ ಎರಡೂವರೆ ತಿಂಗಳಿನಿಂದ ಜೈಲುಪಾಲಾಗಿರುವ ದರ್ಶನ್​ಗೆ ಅಂದು ನಟಿಯೊಬ್ಬರು ಕಪಾಳಕ್ಕೆ ಹೊಡೆದಿದ್ದರಂತೆ. ಈ ಕುರಿತು ಸ್ವತಃ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

"ಅಂದು ನಟನೆ ಏನೆಂದು ತಿಳಿಯದ ವಯಸ್ಸು. ಆಗ ಕನ್ನಡ ಚಿತ್ರರಂಗದಲ್ಲಿ ದರ್ಶನ್ ಸರ್​ ಹೆಸರು ಸಖತ್ ಫೇಮಸ್​. ಅಂದಿಗೂ ಇಂದಿಗೂ ಅವರು ನೆಚ್ಚಿನ ನಟರೇ. ​ದರ್ಶನ್​ ಅವರು ಅಭಿನಯದ 'ಗಜ' ಚಿತ್ರದಲ್ಲಿ ನಟಿಸುವ ಸುವರ್ಣಾವಕಾಶ ನನಗೆ ಸಿಕ್ಕಿತು. ಅವರೊಂದಿಗೆ ಅಭಿನಯಿಸುವ ಅವಕಾಶ ಯಾರು ಬಿಡ್ತಾರೆ ಹೇಳಿ? ಬಿಟ್ಟುಕೊಡುವ ಮಾತೇ ಇಲ್ಲ. ಗಜ ಸಿನಿಮಾದಲ್ಲಿ ಅವರ ಕಪಾಳಕ್ಕೆ ಹೊಡೆಯುವ ಒಂದು ಸೀನ್​ ಮಾಡಿದ್ದೆ" ಎಂದರು. ಅಸಲಿಗೆ ಹೀಗೆ ಹೇಳಿದ ನಟಿ ಬೇರಾರೂ ಅಲ್ಲ ಇಂದು ಸ್ಯಾಂಡಲ್​ವುಡ್​ನಲ್ಲಿ ತಮ್ಮ ಬೋಲ್ಡ್​ ಲುಕ್​ನಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡ್ತಿರುವ ಹಾಗೂ ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗಕ್ಕೆ ಪರಿಪೂರ್ಣ ನಟಿಯಾಗಿ ಎಂಟ್ರಿ ಕೊಟ್ಟಿರುವ ನಟಿ ಸಾನ್ಯಾ ಅಯ್ಯರ್​.

ಹೌದು, ನಿರ್ದೇಶಕ ಹಾಗೂ ನಿರ್ಮಾಪಕರಾದ ಇಂದ್ರಜಿತ್ ಲಂಕೇಶ್ ನಿರ್ದೇಶಿಸಿರುವ ಹಾಗೂ ಪುತ್ರ ಸಮರ್ಜಿತ್ ಲಂಕೇಶ್ ನಟಿಸಿರುವ 'ಗೌರಿ' ಚಿತ್ರದಲ್ಲಿ ಸಾನ್ಯಾ ಅಯ್ಯರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿನ ಒಂದಷ್ಟು ಅನುಭವ ಹಂಚಿಕೊಳ್ಳುವ ವೇಳೆ ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿದ ಸಾನ್ಯಾ, "ಅಂದು 'ಗಜ' ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದೆ ದೊಡ್ಡ ಖುಷಿ. ನಟನೆ ಬಗ್ಗೆ ತಲೆ-ಬುಡ ಗೊತ್ತಿರಲಿಲ್ಲ. ಡೈಲಾಗ್ ಅಂದ್ರೆ ಏನೂ ಎಂಬುದೇ ಅರ್ಥವಾಗ್ತಿರಲಿಲ್ಲ. ಆದ್ರೆ, ಹೇಳಿಕೊಟ್ಟಿದ್ದನ್ನು ಸರಿಯಾಗಿ ಮಾಡ್ತಿದ್ದೆ" ಎಂದಿದ್ದಾರೆ.

"ಪಾತ್ರಕ್ಕೆ ಭಾವನೆ ತುಂಬುವುದು ಗೊತ್ತಾಗುತ್ತಿರಲಿಲ್ಲ. ಆದ್ರೆ, ನಟನೆ ಅಷ್ಟೇ ಮಾಡುತ್ತಿದ್ದೆ. ದರ್ಶನ್​ ಸರ್​ ಜತೆಗೆ ನಟಿಸುವ ಅವಕಾಶ ಬಂದಾಗ ಒಪ್ಪಿಕೊಂಡಿದ್ದೆ. ಆಗ ಸರ್​ ಕಪಾಳಕ್ಕೆ ಹೊಡೆಯುವ ಸೀನ್ ಇತ್ತು. ಆಟ ಆಡಿಕೊಂಡೆ ಪಾತ್ರ ಮಾಡುತ್ತಿದ್ದ ನಾನು, ಭಯವಿಲ್ಲದೆ ಹೇಗೋ ಮಾಡಿಬಿಟ್ಟೆ. ನಟನೆಯಲ್ಲಿ ಹೆಚ್ಚು ಒಲವು ಇದ್ದ ಕಾರಣ ಹಾಗೂ ಚಿಕ್ಕವಳಾದ ಕಾರಣ ನನಗೆ ಅಷ್ಟು ಭಯ ಇರಲಿಲ್ಲ. ಹಾಗಾಗಿ ಆ ಸೀನ್​ನಲ್ಲಿ ದರ್ಶನ್​ ಸರ್​ಗೆ ಹೊಡೆದೆ. ಆ ಚಿತ್ರ ಸೂಪರ್​ ಸಕ್ಸಸ್​ ಆಯಿತು ಮತ್ತು ನನ್ನ ಪಾತ್ರವು ಕೂಡ ಚೆನ್ನಾಗಿ ಮೂಡಿಬಂದಿತು" ಎಂದು ಸಾನ್ಯಾ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net