ಚಿತ್ರರಂಗದಲ್ಲಿ ಒಂದು ಬಾರಿ ಗುರುತಿಸಿಕೊಂಡರೆ ಸಾಕು, ಮುಂದಿನ ಕೆಲಸಗಳೆಲ್ಲವೂ ಸರಳ, ಸುಂದರ, ಸುಗಮ. ಅದಕ್ಕೆ ಕಾರಣ, ಜನರಿಂದ ಸಿಗುವ ಅಪಾರ ಮನ್ನಣೆ. ಸಿನಿಮಾಗಳ ಮೂಲಕ ಪ್ರೇಕ್ಷಕರ ಮನದಲ್ಲಿ ನೆಲೆಸುವ ಅದೆಷ್ಟೋ ಕಲಾವಿದರು, ತದನಂತರ ಇಲ್ಲ-ಸಲ್ಲದ ವಿಚಾರಗಳಿಂದ ಅಥವಾ ವದಂತಿಗಳಿಂದ ವ್ಯಾಪಕ ಟೀಕೆಗೆ ಗುರಿಯಾಗುತ್ತಾರೆ. ಈ ಮೂಲಕ ಸಿನಿಪ್ರೇಕ್ಷಕರಲ್ಲಿ ತಮ್ಮ ಮೇಲಿದ್ದ ಪಾಸಿಟಿವ್ ಓಪಿನಿಯನ್ ಅನ್ನು ನೆಗೆಟಿವ್ ಆಗುವಂತೆ ಮಾಡಿಕೊಳ್ಳುತ್ತಾರೆ. ಆ ಪೈಕಿ ಈ ತಮಿಳಿನ ನಟ ಕೂಡ ಒಬ್ಬರು.
ಇದನ್ನೂ ಓದಿ: ಮಂಟೂರ ರಸ್ತೆ ಇಂದಿರಾ ಕ್ಯಾಂಟಿನ್ ಪ್ರಕರಣ, 26ರಂದು ಶ್ರೀರಾಮಸೇನೆಯಿಂದ ಸ್ಮಶಾನ ಚಲೋಹ
ತಂದೆಯ ನಿರ್ದೇಶನದಲ್ಲಿ ಮೂಡಿಬಂದ ಹಲವಾರು ಸಿನಿಮಾಗಳಲ್ಲಿ ಬಾಲನಟನಾಗಿ ಮಿಂಚಿದ ನಟ ಸಿಲಂಬರಸನ್ ಟಿ.ಆರ್. ಅಲಿಯಾಸ್ ಸಿಂಬು, ತದನಂತರ ಅಭಿನಯಿಸಿದ ಚಿತ್ರಗಳಲ್ಲಿ ಮಾಸ್ ನಟನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಸಾಮಾನ್ಯ ಪಾತ್ರಗಳನ್ನು ಮಾಡದ ಸಿಂಬು, ವಿಭಿನ್ನ ರೋಲ್ಗಳಲ್ಲಿ ನಟಿಸಿ, ತಮಿಳು ಸಿನಿಪ್ರೇಕ್ಷಕರಿಂದ ಸೈಎನಿಸಿಕೊಂಡರು. ಇಷ್ಟೆಲ್ಲಾ ಹೆಸರು ಗಳಿಸಿದರು ಸಹ ವದಂತಿಗಳಿಂದ ಮಾತ್ರ ದೂರ ಉಳಿಯಲಿಲ್ಲ.
ಅಂದು ಉತ್ತುಂಗದಲ್ಲಿದ್ದ ಸ್ಟಾರ್ ನಟ ಸಿಂಬು, ತದನಂತರ ಮಾಡಿಕೊಂಡಿದ್ದೆಲ್ಲಾ ಎಡವಟ್ಟು. ತಮ್ಮ ಚಿತ್ರರಂಗದ ಸ್ಟಾರ್ ನಟರೊಂದಿಗೆ ವಿವಾದಕ್ಕೀಡಾದ ಸಿಂಬು, ಕೆಲವು ಸಮಯ ತಮಿಳು ನಟ ಧನುಷ್ ಅವರೊಂದಿಗೆ ಭಾರೀ ಜಿದ್ದಾಜಿದ್ದಿ ಇಟ್ಟುಕೊಂಡಿದ್ದರು. ಇದು ಅಂದಿನ ಕಾಲಕ್ಕೆ ದೊಡ್ಡ ಸ್ಟಾರ್ ವಾರ್ಗೂ ಕಾರಣವಾಗಿತ್ತು. ಇದಿಷ್ಟು ಒಂದಾದರೆ, ಮತ್ತೊಂದೆಡೆ ಸಿಂಬು ತಮಿಳು-ತೆಲುಗು ಇಂಡಸ್ಟ್ರಿಯ ಲೇಡಿ ಸೂಪರ್ಸ್ಟಾರ್ ಜತೆಗೆ ಲವ್ವಿ-ಡವ್ವಿ ನಡೆಸುತ್ತಿದ್ದಾರೆ ಎಂಬ ವದಂತಿ ವ್ಯಾಪಕವಾಗಿ ಹರಿದಾಡಿತ್ತು.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಒಮ್ಮೆಯೂ ಔಟಾಗದ ಟೀಮ್ ಇಂಡಿಯಾ ಆಟಗಾರ ಈತ!
ಈ ಸುದ್ದಿ ಭಾರೀ ವಿವಾದಕ್ಕೂ ಕಾರಣವಾಗಿತ್ತು. ಯಾವುದೋ ಒಂದು ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪ ಮೂಡಿದ ಕಾರಣ, ನಟ-ನಟಿ ಪರಸ್ಪರ ದೂರವಾದರು ಎಂದು ಹೇಳಲಾಗಿದೆ. ಇದಾದ ಬಳಿಕ ಸಿಂಬು ತಮ್ಮ ಚಿತ್ರರಂಗದ ಸಹ ನಟಿಯರಾದ ತ್ರಿಶಾ ಕೃಷ್ಣನ್ ಮತ್ತು ಹನ್ಸಿಕಾ ಮೋಟ್ವಾನಿ ಜತೆಗೂ ಡೇಟಿಂಗ್ ಮಾಡುತ್ತಿದ್ದರು ಎಂಬ ವದಂತಿಗಳು ಕೇಳಿಬಂದಿತ್ತು. ಆದರೆ, ಈ ವಿವಾದ ಭುಗಿಲೇಳುತ್ತಿದ್ದಂತೆ ಎಚ್ಚೆತ್ತುಕೊಂಡ ನಟ, ಅವರೆಲ್ಲರೂ ನನ್ನ ಆತ್ಮೀಯ ಸ್ನೇಹಿತೆಯರು ಎಂದು ತಮ್ಮ ಮೇಲಿದ್ದ ಕಾಂಟ್ರೊವರ್ಸಿಗಳಿಗೆ ತೆರೆ ಎಳೆದರು,(ಏಜೆನ್ಸೀಸ್).
57ನೇ ವಯಸ್ಸಿಗೆ ಮತ್ತೆ ಮದುವೆ! ವಿಲನ್ ಪಾತ್ರಗಳಿಂದಲೇ ಸಖತ್ ಸದ್ದು ಮಾಡಿದ ಈ ನಟ ಯಾರು ಗೊತ್ತೇ?