ಆರು ದಿನಗಳಲ್ಲಿ ಮೂರನೇ ಜೀವ ಬೆದರಿಕೆ! ಪೊಲೀಸರು ಏನೂ ಮಾಡಲು ಸಾಧ್ಯವಿಲ್ಲ ಎಂದ ಇ-ಮೇಲ್​!

gautamgambhir
Published on

ನವದೆಹಲಿ: ಮಾಜಿ ಕ್ರಿಕೆಟ್​ ಆಟಗಾರ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್​ಗೆ ‘ಐಸಿಸ್​ ಕಾಶ್ಮೀರ್​’ ಉಗ್ರ ಸಂಘಟನೆಯಿಂದ ಆರು ದಿನಗಳಲ್ಲಿ ಮೂರನೇ ಜೀವ ಬೆದರಿಕೆ ಬಂದಿದೆ. ಇ-ಮೇಲ್​ ಮೂಲಕ ಗಂಭೀರ್​ ಮತ್ತು ಅವರ ಕುಟುಂಬಕ್ಕೆ ನೀಡಲಾಗಿರುವ ಇಂದಿನ ಬೆದರಿಕೆಯಲ್ಲಿ "ದೆಹಲಿ ಪೊಲೀಸ್​ ಮತ್ತು (ಡಿಸಿಪಿ) ಶ್ವೇತ ಚೌಹಾನ್​ ಏನೂ ಮಾಡಲು ಸಾಧ್ಯವಿಲ್ಲ" ಎಂದು ಬರೆದಿದೆ ಎನ್ನಲಾಗಿದೆ.

ಪೂರ್ವ ದೆಹಲಿಯ ಲೋಕಸಭಾ ಸದಸ್ಯ ಗೌತಮ್​ ಗಂಭೀರ್​ ನ.23 ರ ರಾತ್ರಿ ಈ ಬಗ್ಗೆ ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಅವರ ದೆಹಲಿಯ ರಾಜೇಂದ್ರ ನಗರದ ನಿವಾಸದ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿತ್ತು. 'ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ತನಿಖೆ ಆರಂಭಿಸಲಾಗಿದೆ' ಎಂದು ಡಿಸಿಪಿ ಶ್ವೇತ ಚೌಹಾನ್​ ತಿಳಿಸಿದ್ದರು.

ಕೆಲವು ದಿನಗಳ ಹಿಂದೆ ಗಂಭೀರ್​ಗೆ ಪಾಕಿಸ್ತಾನಿ ಪುರುಷನೊಬ್ಬನಿಂದಲೂ ಇದೇ ರೀತಿಯ ಬೆದರಿಕೆ ಸಂದೇಶಗಳು ಬಂದಿದ್ದವು ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net