ವರ್ಷದಲ್ಲಿ 39 ಬಾರಿ ಆ್ಯಂಬುಲೆನ್ಸ್​​​ ಕರೆಸಿಕೊಂಡ! ಕಾರಣ ತಿಳಿದು ದಂಗಾದರು

abmulance
Published on

ಟೈವಾನ್​​: ವೈದ್ಯಕೀಯ ಸೇವೆಯ ತುರ್ತು ಅಗತ್ಯ ಹೊಂದಿರುವವರಿಗೆ ಟೈವಾನ್​ ದೇಶದಲ್ಲಿ ಉಚಿತ ಆ್ಯಂಬುಲೆನ್ಸ್​ ಸೇವೆ ಒದಗಿಸಲಾಗುತ್ತದೆ. ಆದರೆ ಇದನ್ನೇ 39 ಬಾರಿ 'ಫ್ರೀ ಟ್ಯಾಕ್ಸಿ'ಯಂತೆ ಬಳಸಿಕೊಂಡಿರುವ ನಾಗರೀಕನೊಬ್ಬ ಆಸ್ಪತ್ರೆ ಸಿಬ್ಬಂದಿ ಹಾಗೂ ಪೊಲೀಸ್​ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.

ವಾಂಗ್​ ಎಂಬಾತ ಸೂಪರ್​ಮಾರ್ಕೆಟ್​ನಿಂದ ನಗರದ ಆಸ್ಪತ್ರೆಯ ಸಮೀಪವಿರುವ ತನ್ನ ಮನೆಗೆ ಹೋಗಲು ಈ ರೀತಿ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ. ಸೂಪರ್​ಮಾರ್ಕೆಟ್​ನಿಂದ ಕೇವಲ 200 ಮೀಟರ್​ ದೂರದಲ್ಲಿದ್ದ ತನ್ನ ಮನೆಗೆ ನಡೆದುಕೊಂಡು ಹೋಗುವುದನ್ನು ತಪ್ಪಿಸಲು ಈ ರೀತಿ ಮಾಡುತ್ತಿದ್ದ ಎನ್ನಲಾಗಿದೆ.

ಆಸ್ಪತ್ರೆ ತಲುಪಿದ ಪ್ರತಿ ಬಾರಿ ಚೆಕ್​ಅಪ್​ ಮಾಡಿಸಿಕೊಳ್ಳದೇ ತಾನಾಗೇ ಎದ್ದು ಹೊರಡುತ್ತಿದ್ದುದನ್ನು ಗಮನಿಸಿದ ವೈದ್ಯಕೀಯ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದರು. ಪೊಲೀಸರು ವಿಚಾರಣೆ ನಡೆಸಿದಾಗ ಅವರನ್ನು ನಿಂದಿಸಲು ಆರಂಭಿಸಿದ ವಾಂಗ್​​ಗೆ, ಮತ್ತೊಮ್ಮೆ ಸಾರ್ವಜನಿಕ ಸೇವೆಯಾದ ಆ್ಯಂಬುಲೆನ್ಸ್​​ಅನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟು ಕಳುಹಿಸಿದರು ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net