More

    ಲಸಿಕೀಕರಣದಲ್ಲಿ ಯಾದಗಿರಿಯ ಈ ಗ್ರಾಮ ರಾಜ್ಯಕ್ಕೇ ಮಾದರಿ!; 100% ವ್ಯಾಕ್ಸಿನೇಷನ್ ಘೋಷಣೆ

    ಬೆಂಗಳೂರು: ಕರೊನಾ ಲಸಿಕೀಕರಣ ಬೃಹತ್ ಅಭಿಯಾನ ರೀತಿಯಲ್ಲಿ ನಡೆಯುತ್ತಿದ್ದು, ಅಭಿಯಾನದ ಮೊದಲ ದಿನವೇ ದೇಶದಲ್ಲಿ ಅತಿಹೆಚ್ಚು ಲಸಿಕೆ ಹಾಕಿಸಿದ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿತ್ತು. ಇದೀಗ ರಾಜ್ಯದಲ್ಲೂ ಲಸಿಕೀಕರಣ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಕರ್ನಾಟಕದ ಹಿಂದುಳಿದ ಪ್ರದೇಶದ ಗ್ರಾಮವೊಂದು ಈ ವಿಷಯದಲ್ಲಿ ರಾಜ್ಯಕ್ಕೆ ಮಾದರಿ ಎನಿಸಿಕೊಂಡಿದೆ.

    ಹೌದು… ಯಾದಗಿರಿ ಜಿಲ್ಲೆಯ ತಿಂತಣಿ ಗ್ರಾಮಪಂಚಾಯತ್​ ರಾಜ್ಯದಲ್ಲಿ ಶೇ. 100 ಲಸಿಕೀಕರಣವಾದ ಮೊದಲ ಗ್ರಾಮಪಂಚಾಯತ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾತ್ರವಲ್ಲ, ಆ ಮೂಲಕ ಇತರ ಗ್ರಾಮಗಳಿಗೂ ಮಾದರಿಯಾಗಿದೆ. ಈ ಗ್ರಾಮಪಂಚಾಯ್​ ವ್ಯಾಪ್ತಿಯಲ್ಲಿ ಲಸಿಕೆ ಹಾಕಿಸಿಕೊಳ್ಳಲು 4,200 ಮಂದಿ ಅರ್ಹರಿದ್ದು, ಅಷ್ಟೂ ಜನರಿಗೆ ಲಸಿಕೆ ಹಾಕಲಾಗಿದೆ.

    ಹಿಂದುಳಿದ ಪ್ರದೇಶ ಎನಿಸಿಕೊಂಡಿರುವ ಯಾದಗಿರಿ ಜಿಲ್ಲೆಯಲ್ಲಿ ಇಂಥದ್ದೊಂದು ಸಾಧನೆ ಸಾಧ್ಯವಾಗಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯ ರಾಜಧಾನಿಯ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಾಧ್ಯವಾಗದಿರುವುದು ದೂರದ ಯಾದಗಿರಿ ಜಿಲ್ಲೆಯಲ್ಲಿ ಸಾಧ್ಯವಾಗಿರುವುದು ನಿಜಕ್ಕೂ ಶ್ಲಾಘನೀಯ ಎನ್ನಲಾಗುತ್ತಿದೆ.

    ಬೆರಳೆರಡನ್ನು ಕತ್ತರಿಸಿಕೊಂಡ, ಬಾಯಿಗೆರಡು ಕೋರೆ ಸಿಕ್ಕಿಸಿಕೊಂಡ!; ಮೈಮೇಲಿದೆಂಥ ಆಟ ಈ ಮೈಖೇಲ್​ನದ್ದು!?

    18 ತಿಂಗಳ ಮಗುವಿಗಾಗಿ ಏಳೇ ದಿನಗಳಲ್ಲಿ ಸಂಗ್ರಹವಾಯ್ತು 18 ಕೋಟಿ ರೂ.; ಬೇಡ ಎಂಬಷ್ಟು ಬಂತು ಹಣ!

    ಭಾರತೀಯ ಯೋಧರಿಂದಲೇ ಪಾಕ್​ಗೆ ಮಾಹಿತಿ!; ಸಿಕ್ಕಿಬಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts