ಭಾರತೀಯ ಯೋಧರಿಂದಲೇ ಪಾಕ್​ಗೆ ಮಾಹಿತಿ!; ಸಿಕ್ಕಿಬಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು..

ನವದೆಹಲಿ: ಭಾರತೀಯ ಯೋಧರಿಬ್ಬರು ಪಾಕಿಸ್ತಾನಕ್ಕೆ ಮಹತ್ವದ ಮಾಹಿತಿ ಕೊಡುತ್ತಿದ್ದುದು ಪತ್ತೆಯಾಗಿದ್ದು, ಅಂಥ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹರ್​ಪ್ರೀತ್ ಸಿಂಗ್​ (23), ಗುರ್ಬೇಜ್​ ಸಿಂಗ್ (23) ಬಂಧಿತ ಯೋಧರು. ಇವರಿಬ್ಬರನ್ನು ಪಂಜಾಬ್​ ಪೊಲೀಸರು ವಶಕ್ಕೆ ಪಡೆದಿಕೊಂಡಿರುವುದಾಗಿ ಅಲ್ಲಿನ ಡಿಜಿಪಿ ತಿಳಿಸಿದ್ದಾರೆ. ಅಮೃತಸರದ ಚೀಚ ಮೂಲದ ಹರ್​ಪ್ರೀತ್ ಸಿಂಗ್ 2017ರಲ್ಲಿ ಸೇನೆಗೆ ಸೇರಿದ್ದು, 19 ರಾಷ್ಟ್ರೀಯ ರೈಫಲ್ಸ್​ನಲ್ಲಿದ್ದು, ಅನಂತ್​ನಾಗ್​ನಲ್ಲಿ ಕರ್ತವ್ಯದಲ್ಲಿದ್ದ. 18 ಸಿಖ್​ ಲೈಟ್​ ಇನ್​ಫ್ಯಾಂಟ್ರಿನಲ್ಲಿರುವ ಗುರ್ಬೇಜ್​ ಸಿಂಗ್ ಕಾರ್ಗಿಲ್​ನಲ್ಲಿ ಕ್ಲರ್ಕ್​ ಆಗಿ ಕಾರ್ಯನಿರ್ವಹಿಸುತ್ತಿದ್ದ. ಈತ 2015ರಲ್ಲಿ ಸೇನೆಯನ್ನು ಸೇರಿದ್ದ. … Continue reading ಭಾರತೀಯ ಯೋಧರಿಂದಲೇ ಪಾಕ್​ಗೆ ಮಾಹಿತಿ!; ಸಿಕ್ಕಿಬಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು..