

ಕೇರಳ: ಮನೆ ಮಂದಿಯೆಲ್ಲ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ವೇಳೆ, ಇದನ್ನೆ ಅವಕಾಶವಾಗಿ ಮಾಡಿಕೊಂಡ ಕಳ್ಳರ ತಂಡ ಉದ್ಯಮಿ ಮನೆಯೊಂದರಲ್ಲಿ ಬರೊಬ್ಬರಿ 1 ಕೋಟಿ ರೂ. ನಗದು ಮತ್ತು 300 ಗ್ರಾಂ ಚಿನ್ನಾಭರಣ(Gold Jewellery ) ಕದ್ದಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ.
ಭಾನುವಾರ ರಾತ್ರಿ ಮನೆಗೆ ಕುಟುಂಬದ ಸದಸ್ಯರು ಹಿಂತಿರುಗಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಕುಟುಂಬಸ್ಥರು ವಲಪಟ್ಟಣಂ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಕುಟುಂಬಸ್ಥರು ಇದೇ ನ.19 ರಂದು ಮಧುರೈಗೆ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದಾಗ ಈ ಕೃತ್ಯ ನಡೆದಿದೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿಂದೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಪ್ರಾಥಮಿಕ ತನಿಖೆ ಪ್ರಕಾರ, ಬೀಗ ಹಾಕಿ ಕಬೋರ್ಡ್ನಲ್ಲಿಟ್ಟದ್ದ ನಗದು ಮತ್ತು ಚಿನ್ನಾಭರಣ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಇದೇ ಕಬೋರ್ಡ್ನ ಕೀ ಮತ್ತೊಂದು ರೂಮ್ನಲ್ಲಿ ಪತ್ತೆಯಾಗಿದೆ. ಅಡುಗೆ ಮನೆ ಕಿಟಕಿಯ ಗ್ರೀಲ್ಸ್(ಕಬ್ಬಿಣದ ರಾಡು) ಮುರಿದು ಕಳ್ಳರು ಮನೆಯೊಳಗೆ ನುಗ್ಗಿದ್ದಾರೆ. ಅಲ್ಲದೆ, ಕೆಲವರು ಮನೆಯ ಕಾಂಪೌಂಡ್ ಪ್ರವೇಶ ಮಾಡಿರು ಸಿಸಿಟಿವಿ ದೃಶ್ಯಗಳು ಪತ್ತೆಯಾಗಿವೆ. ಬೆರಳಚ್ಚು ತಜ್ಞರು ಸೇರಿದಂತೆ ಪೊಲೀಸ್ ತಂಡಗಳು ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸಿವೆ ಎಂದು ಮೂಲಗಳು ತಿಳಿಸಿವೆ, (ಏಜೆನ್ಸೀಸ್).