ದರೋಡೆ ಮಾಡಲು ಬಂದ ಕಳ್ಳರಿಂದ ಗುಂಡಿನ ದಾಳಿ, ಓರ್ವ ಸಾರ್ವಜನಿಕ ಬಲಿ

fire pic
Published on

ಮೈಸೂರು: ಚಿನ್ನಾಭರಣದ ಅಂಗಡಿಯಲ್ಲಿ ದರೋಡೆ ಮಾಡಲು ಯತ್ನಿಸಿ, ತಪ್ಪಿಸಿಕೊಳ್ಳುವ ವೇಳೆ ಕಳ್ಳರು ಗುಂಡಿನ ದಾಳಿ ನಡೆಸಿರುವ ಘಟನೆ ವಿದ್ಯಾರಣ್ಯಪುರಂನಲ್ಲಿ ನಡೆದಿದೆ.

ನಗರದ ಮುಖ್ಯರಸ್ತೆಯಲ್ಲಿರುವ ಅಮೃತ್ ಗೋಲ್ಡ್ ಆ್ಯಂಡ್ ಸಿಲ್ವರ್ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ನುಗ್ಗಿದ ಮೂವರು ಕಳ್ಳರು ಚಿನ್ನಾಭರಣ ಕದಿಯಲು ಯತ್ನಿಸಿದ್ದಾರೆ. ಅಡ್ಡ ಬಂದ ಮಾಲೀಕನ ಕೈ-ಕಾಲು ಕಟ್ಟಿ ಹಾಕಿ ಚೆನ್ನಾಗಿ ಥಳಿಸಿದ್ದಾರೆ.

ಈ ವೇಳೆ ಕಳ್ಳರ ತಂಡ ತಪ್ಪಿಸಿಕೊಳ್ಳುವ ಭರದಲ್ಲಿ ಅಲ್ಲೇ ಇದ್ದ ಓರ್ವ ಸಾರ್ವಜನಿಕನ ಮೇಲೆ ಗುಂಡು ಹಾರಿಸಿದ್ದಾರೆ. ತಲೆಗೆ ಗುಂಡು ಬಿದ್ದು ಪರಿಣಾಮ ದಡದಹಳ್ಳಿ‌ ನಿವಾಸಿ ಚಂದ್ರು (23) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಚಿನ್ನಾಭರಣ ವ್ಯಾಪಾರಿ ಧರ್ಮೇಂದ್ರ ಎಂಬುವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿನ್ನದ ಆಭರಣಗಳನ್ನು ಕದ್ದಿರುವ ಕಳ್ಳರು ಬೆಳ್ಳಿಯನ್ನು ಬಿಟ್ಟು ಹೋಗಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net