ಬಂದೂಕು ಸ್ವಚ್ಛ ಮಾಡುವಾಗ ಮಿಸ್ ಫೈರಿಂಗ್: ಓರ್ವ ಪೊಲೀಸ್ ಸಾವು

pic police
Published on

ದಾವಣಗೆರೆ: ಬಂದೂಕು ಸ್ವಚ್ಛ ಮಾಡುವಾಗ ಮಿಸ್ ಫೈರಿಂಗ್ ಆಗಿ ಓರ್ವ ಪೊಲೀಸ್ ಸಾವನ್ನಪ್ಪಿರುವ ಘಟನೆ ನಗರದ ಡಿಎಆರ್ ಶಸ್ತ್ರಾಸ್ತ್ರಗಾರದಲ್ಲಿ ನಡೆದಿದೆ.

ಆರ್. ಚೇತನ್ (28) ಸಾವನ್ನಪ್ಪಿರುವ ಡಿಎಆರ್ ಪೊಲೀಸ್‌. ಚನ್ನಗಿರಿ ತಾಲೂಕಿನ ಮಲಹಾಳ್ ಗ್ರಾಮದ ನಿವಾಸಿಯಾಗಿದ್ದು, 2012 ಬ್ಯಾಚ್‌ನಲ್ಲಿ ಪೊಲೀಸ್ ಇಲಾಖೆಗೆ ಆಯ್ಕೆಯಾಗಿದ್ದರು.

ಇಂದು ಪೊಲೀಸ್ ಬಂದೂಕು ಸ್ವಚ್ಛ ಮಾಡುವಾಗ ಮಿಸ್ ಫೈರಿಂಗ್ ಆಗಿ ಚೇತನ್ ಕುತ್ತಿಗೆ ಭಾಗಕ್ಕೆ ಬುಲೆಟ್ ಬಿದ್ದಿದೆ. ತಕ್ಷಣ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೂರ್ವ ವಲಯ ಐಜಿಪಿ ಎಸ್. ರವಿ ಭೇಟಿ ನೀಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net