More

  ಚಿನ್ನದ ಸರ ಕಸಿದು ಕಳ್ಳ ಪರಾರಿ

  ಕಾಸರಗೋಡು: ಪೆರ್ಲ-ಪೂವನಡ್ಕ ರಸ್ತೆಯ ಎಣ್ಮಕಜೆ ಪಂಚಾಯಿತಿ ಕಚೇರಿ ಸನಿಹ ದ್ವಿಚಕ್ರ ವಾಹನದಲ್ಲಿ ಆಗಮಿಸಿ ಪಾದಚಾರಿ ಮಹಿಳೆಯ ಒಂದೂಕಾಲು ಪವನ್‌ನ ಚಿನ್ನದ ಸರ ಕಸಿದು ಕಳ್ಳನೊಬ್ಬ ಪರಾರಿಯಾಗಿದ್ದಾನೆ.

  ಶೇಣಿ ನಿವಾಸಿ ಸುಲೋಚನಾ ಸರ ಕಳೆದುಕೊಂಡವರು. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಔಷಧ ಖರೀದಿಸಿ ಪೆರ್ಲ ಭಾಗಕ್ಕೆ ನಡೆದುಹೋಗುವ ಮಧ್ಯೆ ಬಜಕೂಡ್ಲು ಭಾಗದಿಂದ ಬೈಕಲ್ಲಿ ಆಗಮಿಸಿದ ವ್ಯಕ್ತಿ ಸುಲೋಚನಾ ಅವರ ಕತ್ತಿನಿಂದ ಸರ ಕಸಿದು, ನಂತರ ಅವರನ್ನು ದೂಡಿಹಾಕಿ ಪರಾರಿಯಾಗಿದ್ದಾನೆ. ಮಹಿಳೆ ನೀಡಿದ ದೂರಿನನ್ವಯ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

  ಜಿಲ್ಲೆಯ ನಾನಾ ಕಡೆ ಆಯಕಟ್ಟಿನ ಪ್ರದೇಶ ಹಾಗೂ ರಸ್ತೆಬದಿ ಒಂಟಿಯಾಗಿ ನಡೆದುಹೋಗುತ್ತಿರುವ ಮಹಿಳೆಯರನ್ನು ಕೇಂದ್ರೀಕರಿಸಿ ಕತ್ತಿನಿಂದ ಸರ ಕಸಿಯುವ ತಂಡವೊಂದು ಸಕ್ರಿಯವಾಗಿದ್ದರೂ, ಈ ಜಾಲ ಭೇದಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿರುವುದಾಗಿ ನಾಗರಿಕರು ಆರೋಪಿಸಿದ್ದಾರೆ.

  See also  ಬೆಳಗಾವಿಯಲ್ಲಿ ರಾಷ್ಟ್ರೀಯ ಲಿಂಗಾಯತ ಮಹಿಳಾ ಸಮಾವೇಶ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts