

ಕೊಕ್ಕರ್ಣೆ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಐದು ಮೇಳಗಳ ಈ ಸಾಲಿನ ತಿರುಗಾಟದ ಕೊನೆಯ ಸೇವೆ ಆಟ ಶ್ರೀ ಕ್ಷೇತ್ರದಲ್ಲಿ ಬುಧವಾರ ಜರುಗಿತು.
ಪೇತ್ರಿ ಮಾಧವ ನಾಯ್ಕ ಅವರಿಗೆ ಹಾರಾಡಿ ರಾಮ ಗಾಣಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೇಮಾರು ಸಾಂದೀಪನಿ ಮಠದ ಶ್ರೀ ಈಶವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ದೇವಳದ ಆನುವಂಶಿಕ ಮೊಕ್ತೇಸರ ಎಚ್.ಧನಂಜಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶೇಡಿಕೊಡ್ಲು ವಿಠಲ ಶೆಟ್ಟಿ, ಯಕ್ಷಗಾನ ವಿಮರ್ಶಕ ಪ್ರೊ.ಎಸ್.ವಿ.ಉದಯ್ ಕುಮಾರ್ ಶೆಟ್ಟಿ, ಬಾರಕೂರು ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದ ಸೂರ್ಯನಾರಾಯಣ ಗಾಣಿಗ ಮಟಪಾಡಿ, ದೇವಳ ಕಾರ್ಯನಿರ್ವಹಣಾಕಾರಿ ಗೋವಿಂದರಾಜು ಎಸ್., ಆನುವಂಶಿಕ ಮೊಕ್ತೇಸರಾದ ಎಚ್.ಪ್ರಭಾಕರ ಶೆಟ್ಟಿ, ಎಚ್.ಶಂಭು ಶೆಟ್ಟಿ, ಆರ್.ಶ್ರೀನಿವಾಸ ಶೆಟ್ಟಿ, ಹೆಗ್ಗುಂಜೆ ನಾಲ್ಕು ಮನೆಯವರು, ಯಕ್ಷಾಭಿಮಾನಿಗಳು ಉಪಸ್ಥಿತರಿದ್ದರು.
30 ವರ್ಷ ಮಂದಾರ್ತಿ ಮೇಳದಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಹಾಸ್ಯ ಕಲಾವಿದ ಅಣ್ಣಪ್ಪ ಕುಲಾಲ ಮತ್ತು ಬಣ್ಣದ ವೇಷಧಾರಿ ಮೊಗೆಬೆಟ್ಟು ಶಂಕರ ಮರಕಾಲ ಅವರಿಗೆ ಗೌರವಧನ ನೀಡಿ ಅಭಿನಂದಿಸಲಾಯಿತು. ಪ್ರದೀಪ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಉದಯ ಭಾಸ್ಕರ ಶೆಟ್ಟಿ ನಿರೂಪಿಸಿದರು.