

ಗಂಗೊಳ್ಳಿ: ಕುಂದಾಪುರದ ಭಾಗ್ಯವಂತೆ ರೋಜರಿ ಮಾತಾ ಚರ್ಚ್ ಪ್ರಧಾನ ಧರ್ಮಗುರು ಸ್ಟಾನಿ ತಾವ್ರೊ ಹಾಗೂ ಸಹಾಯಕ ಧರ್ಮಗುರು ಅಶ್ವಿನ್ ಆರಾನ್ನ ಅವರಿಗೆ ಧರ್ಮಕೇಂದ್ರ ವತಿಯಿಂದ ಭಾನುವಾರ ಬೀಳ್ಕೊಡುಗೆ ನಡೆಯಿತು.
ಧರ್ಮಗುರು ಸ್ಟಾೃನಿ ತಾವ್ರೊ ಹಾಗೂ ಸಹಾಯಕ ಧರ್ಮಗುರು ಅಶ್ವಿನ್ ಆರಾನ್ನ ಅವರನ್ನು ಧರ್ಮ ಕೇಂದ್ರದ ಪರವಾಗಿ ಸಂತ ಜೋಸೆಫ್ ಕಾನ್ವೆಂಟ್ ಮುಖ್ಯಸ್ಥೆ ಸುಪ್ರಿಯಾ, ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ಗೌರವಿಸಿದರು.
ಕೊಂಕಣಿ ಗಾಯಕ ವಿಲ್ಸನ್ ಒಲಿವೆರಾ ರಚಿಸಿದ ವಿದಾಯ ಗೀತೆಯನ್ನು ಚರ್ಚ್ ಗಾಯನ ಮಂಡಳಿ ಮತ್ತು ವಿಲ್ಸನ್ ಒಲಿವೆರಾ ಹಾಡಿದರು. ಧರ್ಮಕೇಂದ್ರದ ರೋಜಾರಿಯುಂ ಪತ್ರದ ಈ ಸಲ ಧರ್ಮಗುರುಗಳ ನಿರ್ಗಮನ ನಿಮಿತ್ತ ವಿಶೇಷ ಸಂಚಿಕೆಯನ್ನು ಸ್ಟಾೃನಿ ತಾವ್ರೊ, ಸಂಪಾದಕ ಬರ್ನಾಡ್ ಡಿಕೋಸ್ತಾ, ಸಹಸಂಪಾದಕ ಒಸ್ವಾಲ್ಡ್ ಕರ್ವಾಲ್ಲೊ ಬಿಡುಗಡೆಗೊಳಿಸಿದರು.
ಧರ್ಮಭಗಿನಿಯರು, ವಾಳೆಯ ಗುರಿಕಾರರು, ಪಾಲನಾ ಮಂಡಳಿ ಸದಸ್ಯರು, ಹಣಕಾಸು ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಡಾ.ಸೋನಿ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿದರು. ಪಾಲನಾ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಮತ್ತು ಕಾರ್ಯದರ್ಶಿ ಆಶಾ ಕರ್ವಾಲ್ಲೊ ಸನ್ಮಾನ ಪತ್ರ ವಾಚಿಸಿದರು. ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ವಂದಿಸಿದರು.