More

  ಕುಡಿದು ಮಲಗಿ ಸಿಕ್ಕಿಬಿದ್ದ ಕಳ್ಳ; ದೂರು ಬಂದ 11 ತಾಸೊಳಗೆ ಆರೋಪಿಯ ಬಂಧನ

  ಬೆಂಗಳೂರು: ಲಾರಿ ಕಳವು ಪ್ರಕರಣ ದಾಖಲಾದ 11 ಗಂಟೆಯಲ್ಲಿ ಕಳ್ಳನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ತುಮಿಳುನಾಡಿನ ವೆಲ್ಲೂರು ಮೂಲದ ದೀನ್ ದಯಾಳನ್ (48) ಬಂಧಿತ. ಈತ ಕಳವು ಮಾಡಿದ್ದ 35 ಲಕ್ಷ ರೂ. ಮೌಲ್ಯದ ಲಾರಿಯನ್ನು ಜಪ್ತಿ ಮಾಡಲಾಗಿದೆ.

  ಬನ್ನೇರುಘಟ್ಟ ನಿವಾಸಿ ಲಾರಿ ಚಾಲಕ ನಾಗೇಂದ್ರ ನಾಯಕ್ ಏ.5ರ ಸಂಜೆ 5 ಗಂಟೆಗೆ ಲಾರಿಯನ್ನು ಬನ್ನೇರುಘಟ್ಟ ಮುಖ್ಯರಸ್ತೆಯ ಗೊಟ್ಟಿಗೆರೆಯ ಖಾಲಿ ಜಾಗದಲ್ಲಿ ನಿಲುಗಡೆ ಮಾಡಿ ಮನೆಗೆ ಹೋಗಿದ್ದರು. ಮಾರನೇ ದಿನ ಬೆಳಗ್ಗೆ ಬಂದು ನೋಡಿದಾಗ ಲಾರಿ ಇರಲಿಲ್ಲ. ಈ ಸಂಬಂಧ ಚಾಲಕ ದೂರು ನೀಡಿದ್ದರು. ಇದರ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

  ಚಾಲಕನಾಗಿದ್ದ ದೀನ್ ದಯಾಳನ್, ತಮಿಳುನಾಡಿನಿಂದ ನಗರಕ್ಕೆ ಬಂದು ಜೆಸಿಬಿ, ತರಕಾರಿ ವಾಹನ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಅದೇ ವಾಹನಗಳಲ್ಲಿ ರಾತ್ರಿ ಮಲಗುತ್ತಿದ್ದ. ಇತ್ತೀಚೆಗೆ ಕೆಲಸ ಮಾಡದೆ ಓಡಾಡುತ್ತಿದ್ದ. ಏ.5ರಂದು ಗೊಟ್ಟಿಗೆರೆಗೆ ಬಂದಿದ್ದು, ಲಾರಿ ನಿಂತಿರುವುದು ಕಂಡು ಹತ್ತಿರ ಹೋಗಿ ನೋಡಿದಾಗ ಚಾಲಕ ಇರಲಿಲ್ಲ. ಡ್ಯಾಶ್ ಬೋರ್ಡ್‌ನಲ್ಲಿ ಇದ್ದ ಕೀ ತೆಗೆದುಕೊಂಡು ತಮಿಳುನಾಡಿನತ್ತ ಲಾರಿ ಚಲಾಯಿಸಿಕೊಂಡು ಹೊರಟ್ಟಿದ್ದಾನೆ.

  ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರಿದ್ದ ಕಾರು ಭೀಕರ ಅಪಘಾತ; ಒಬ್ಬರ ಪರಿಸ್ಥಿತಿ ಗಂಭೀರ, ಇತರ ನಾಲ್ವರಿಗೂ ಗಾಯ

  ರಾತ್ರಿ ಮದ್ಯಪಾನ ಮಾಡಿದ್ದ ಆರೋಪಿಯು ಆನೇಕಲ್‌ನಲ್ಲಿ ಲಾರಿಯನ್ನು ನಿಲ್ಲಿಸಿ ಮಲಗಿದ್ದ. ಅಷ್ಟರಲ್ಲಿ ಲಾರಿ ಪತ್ತೆಗಾಗಿ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು, ಆನೇಕಲ್‌ನಲ್ಲಿ ಲಾರಿ ಇರುವುದನ್ನು ಪತ್ತೆಹಚ್ಚಿ ಕೂಡಲೇ ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಕುಡಿದು ಮಲಗಿ ಸಿಕ್ಕಿಬಿದ್ದ ಕಳ್ಳ; ದೂರು ಬಂದ 11 ತಾಸೊಳಗೆ ಆರೋಪಿಯ ಬಂಧನ

  ನೂರಕ್ಕೂ ಅಧಿಕ ಹೆಂಡಿರ ಗಂಡ; ಈತನಿಗೆ ಜಗತ್ತಿನಾದ್ಯಂತ ಹೆಂಡತಿಯರು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts