More

    ಧನುಷ್​ ನಟನೆಯ ‘D 51’ ಚಿತ್ರಕ್ಕೆ ಮತ್ತೊಬ್ಬ ಸ್ಟಾರ್​ ಹೀರೋ ಎಂಟ್ರಿ!

    ತಮಿಳುನಾಡು: ತಮಿಳು ಚಿತ್ರರಂಗದ ಸ್ಟಾರ್​ ನಟ ಧನುಷ್​ ಅಭಿನಯಿಸುತ್ತಿರುವ ಬಹುನಿರೀಕ್ಷಿತ ‘ಡಿ 51’ ಚಿತ್ರ ಇದೀಗ ಕಾಲಿವುಡ್​ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿದೆ. ಶೇಖರ್ ಕಮ್ಮುಲ ನಿರ್ದೇಶನದ ಈ ಚಿತ್ರಕ್ಕೆ ‘ಡಿ 51’ ಎಂಬ ತಾತ್ಕಾಲಿಕ ಟೈಟಲ್​ ಘೋಷಣೆ ಮಾಡಲಾಗಿದ್ದು, ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಲು ಖ್ಯಾತ ನಟರೊಬ್ಬರು ಎಂಟ್ರಿ ದೃಢವಾಗಿದೆ.

    ಇದನ್ನೂ ಓದಿ: ಅಪರೂಪದ ದುಬಾರಿ ಬೆಲೆಯ ಚೈನೀಸ್ ಪಿಂಗಾಣಿ; ಚಿಕ್ಕದಾಗಿ ಕಾಣುತ್ತೆ.. ಆದರೆ ಬೆಲೆ ಗೊತ್ತಾದ್ರೆ ಶಾಕ್ ಆಗುತ್ತೆ..!

    ‘ಸರ್’ ಚಿತ್ರದ ಯಶಸ್ಸಿನ ಬೆನ್ನಲ್ಲೇ ಧನುಷ್ ಇದೀಗ​ ನಿರ್ದೇಶಕ ಶೇಖರ್ ಕಮ್ಮುಲ ಅವರೊಂದಿಗೆ ‘ಡಿ 51’ ಚಿತ್ರದ ಮುಖೇನ ಮತ್ತೊಮ್ಮೆ ತೆರೆ ಮೇಲೆ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಸದ್ಯ ಚಿತ್ರದ ಬಗ್ಗೆ ಧನುಷ್​ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ವ್ಯಕ್ತವಾಗಿದ್ದು, ಸಿನಿಮಾದ ಪ್ರಮುಖ ಪಾತ್ರದಲ್ಲಿ ಟಾಲಿವುಡ್​ನ ಕಿಂಗ್ ನಾಗಾರ್ಜುನ್ ನಟಿಸಲಿದ್ದಾರೆ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.

    ಇದನ್ನೂ ಓದಿ:  ಬಿಜೆಪಿ ಮುಖಂಡ ಮಣಿಕಂಠ  ರಾಠೋಡ ಜೈಲಿನಿಂದ ಬಿಡುಗಡೆ : ಭರ್ಜರಿ ಸ್ವಾಗತ

    ಈ ಸಂಗತಿಯನ್ನು ಚಿತ್ರತಂಡ ನಾಗಾರ್ಜುನ್ ಅವರ ಜನ್ಮದಿನಕ್ಕೆ ಶುಭಕೋರುವ ಮುಖೇನ ಅಭಿಮಾನಿಗಳ ಮುಂದೆ ಅಧಿಕೃತವಾಗಿ ತಿಳಿಸಿದೆ. ಪ್ಯಾನ್ ಇಂಡಿಯಾ ಎಂದು ಹೇಳಲಾದ ‘ಡಿ 51’ ಚಿತ್ರದಲ್ಲಿ ಧನುಷ್​ಗೆ ನಾಯಕಿಯಾಗಿ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಲಿದ್ದಾರೆ. ಸಾಯಿ ಪಲ್ಲವಿ, ಪ್ರಿಯಾಂಶು ಚಟರ್ಜಿ ಸೇರಿದಂತೆ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ,(ಏಜೆನ್ಸೀಸ್).

    ಪತ್ನಿಯ ಖಾಸಗಿ ಕ್ಷಣ ವಿಡಿಯೋ ರೆಕಾರ್ಡ್ ಮಾಡಿ, ಶೇರ್ ಮಾಡಿದ ಪತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts