More

    ಬಿಜೆಪಿ ಮುಖಂಡ ಮಣಿಕಂಠ  ರಾಠೋಡ ಜೈಲಿನಿಂದ ಬಿಡುಗಡೆ : ಭರ್ಜರಿ ಸ್ವಾಗತ

    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಬಂಧನಕ್ಕೊಳಗಾಗಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಜಿಲ್ಲೆಯ ಸೇಡಂ ಉಪ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
    ಯುವಕನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಬೂಳ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಇನ್ನಿತರ ದೂರುಗಳಿಗೆಸಂಬಂಧಿಸಿದಂತೆ ಚಿತ್ತಾಪುರ ತಾಲೂಕಿನ ಮಾಡಬೂಳ ಠಾಣೆಯ ಪೊಲೀಸರು ಶುಕ್ರವಾರ ಮಧ್ಯಾಹ್ನ ಬಂಧಿಸಿದ್ದರು. ನ್ಯಾಯಧೀಶರ ಮುಂದೆ ಹಾಜರುಪಡಿಸಿದಾಗ  ನ್ಯಾಯಾಂಗ ವಶಕ್ಕೆ  ಒಪ್ಪಿಸಿದ್ದರು.
    ಮಣಿಕಂಠ ರಾಠೋಡರಿಗೆ ಜಾಮೀನು ನೀಡುವಂತೆ ಕೋರಿ ಅವರ ಪರ ವಕೀಲರು ಚಿತ್ತಾಪುರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು  ಸೋಮವಾರ ಜಾಮೀನು ಮಂಜೂರು ಮಾಡಿದ್ದರು.  ಆದೇಶದ  ಬೆನ್ನಲ್ಲಿಯೇ ವಕೀಲರು ಪ್ರತಿಯನ್ನು ಪಡೆದುಕೊಂಡು ಸೇಡಂಗೆ ತೆರಳಿದರು. ಅಲ್ಲಿನ ಸಬ್ ಜೈಲಿನಲ್ಲಿ ಬಿಡುಗಡೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಸಂಜೆ ಮಣಿಕಂಠರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಅವರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕತರು ಹೂಮಾಲೆ ಹಾಕಿ ಬರ ಮಾಡಿಕೊಂಡರು. ಬಳಿಕ ಅಲ್ಲಿಂದ ಕಲಬುರಗಿಗೆ ಆಗಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts