

ರಾಂಚಿ: ಈಗಾಗಲೇ ಟಿಕ್ಟಾಕ್ನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಜಾರ್ಖಂಡ್ ಮೂಲದ ಅಣ್ಣ-ತಂಗಿ ತಮ್ಮ ಬಹುಮುಖ ಪ್ರತಿಭೆಯ ಮೂಲಕ ಸೋಶಿಯಲ್ ಮಿಡಿಯಾ ಸ್ಟಾರ್ಸ್ ಆಗಿದ್ದಾರೆ. ಟಿಕ್ಟಾಕ್ ಮಾತ್ರವಲ್ಲದೇ ಇದೀಗ ಟ್ವಿಟರ್ನಲ್ಲೂ ಅಣ್ಣ-ತಂಗಿಯ ಡ್ಯಾನ್ಸ್ ಮೋಡಿ ಮಾಡಿದ್ದು, ಬಹುತೇಕರು ಫಿದಾ ಆಗಿದ್ದಾರೆ.
ಸಾಮಾಜಿಕ ಜಾಲತಾಣ ವೇದಿಕೆ ಸಿಕ್ಕಮೇಲೆ ಅಸಂಖ್ಯಾತ ಪ್ರತಿಭೆಗಳು ಹೊರಜಗತ್ತಿಗೆ ತೆರದುಕೊಳ್ಳುತ್ತಿವೆ. ಅವರಲ್ಲಿ ಜಾರ್ಖಂಡ್ನ ಸನಾತನ್ ಕುಮಾರ್ ಮಹತೊ ಮತ್ತು ಆತನ ತಂಗಿ ಸಹ ಒಬ್ಬರು. ಟಿಕ್ಟಾಕ್ ವಿಡಿಯೋ ಮೂಲಕ ಲಕ್ಷಾಂತರ ಮಂದಿಯನ್ನು ರಂಜಿಸುತ್ತಿದ್ದಾರೆ.
ಪುಟ್ಟದಾದ ಮನೆಯ ಮುಂದೆ ನಿಂತು ಯಾವ ಸ್ಟಾರ್ಗಳಿಗೂ ಕಮ್ಮಿ ಇಲ್ಲವೆಂಬಂತೆ ಡ್ಯಾನ್ಸ್ ಮಾಡುವ ಅಣ್ಣ-ತಂಗಿಯ ಪ್ರತಿಭೆಗೆ ಎಲ್ಲರು ಮರುಳಾಗಿದ್ದಾರೆ. ಮೇಕಪ್, ಫ್ಯಾನ್ಸಿ ಹಾಗೂ ವಿಡಿಯೋ ಎಫೆಕ್ಟ್ಸ್ನ ಅರಿವೇ ಇಲ್ಲದೇ ಸಹಜ ಸೌಂದರ್ಯದಿಂದಲೇ ಎಲ್ಲರನ್ನು ರಂಜಿಸುವ ಅಣ್ಣ-ತಂಗಿಯ ಮುಗ್ಧತೆಯನ್ನು ಎಚ್ಚರು ಮೆಚ್ಚಿಕೊಂಡಿದ್ದಾರೆ.
ಅನೇಕ ಸೆಲಿಬ್ರಿಟಿಗಳು ಸಹ ಅಣ್ಣ-ತಂಗಿಯ ವಿಡಿಯೋಗೆ ಫಿದಾ ಆಗಿದ್ದು, ಸನಾತನ್ ಕುಮಾರ್ ಮಹತೊ ಅವರ ನೃತ್ಯದ ಪರಿಗೆ ತಲೆಬಾಗಿದ್ದರೆ, ಹಲವರು ಬಡತನದಲ್ಲಿ ಅರಳಿದ ಪ್ರತಿಭೆ ಎಂದು ಕೊಂಡಾಡಿದ್ದಾರೆ. ಭಾರತೀಯ ಅರಣ್ಯಾಧಿಕಾರಿ ಸುಸಾಂತ್ ನಂದಾ ಅವರು ಸಹ ಮೆಚ್ಚುಗೆ ಸೂಚಿಸಿದ್ದಾರೆ. ಮಹತೊ ಅವರ ಒಂದೊಂದು ವಿಡಿಯೋ ಲಕ್ಷಾಂತರ ವೀವ್ಸ್ಗಳ ಬಾಚಿಕೊಳ್ಳುತ್ತಿರುವುದು ಅವರ ಪ್ರಖ್ಯಾತಿಗೆ ಕಾರಣವಾಗಿದೆ.
ಟಿಕ್ಟಾಕ್ ಪ್ರೊಫೈಲ್ ಪ್ರಕಾರ ಮಹತೊ ಮತ್ತು ಆತನ ತಂಗಿ ಜಾರ್ಖಂಡ್ನ ಧನಬಾದ್ ಜಿಲ್ಲೆಯವರು. ಡ್ಯಾನ್ಸ್ ಜತೆಗೆ ಅನೇಕ ಕಾಮಿಡಿ ವಿಡಿಯೋಗಳನ್ನು ಸಹ ಶೇರ್ ಮಾಡಿದ್ದು, ಈವರೆಗೆ ಟಿಕ್ಟಾಕ್ನಲ್ಲಿ 24 ಮಿಲಿಯನ್ಸ್ ಲೈಕ್ಸ್ಗಳನ್ನು ಮಹತೊ ಪಡೆದುಕೊಂಡಿದ್ದಾರೆ. (ಏಜೆನ್ಸೀಸ್)