ಗ್ರಾಹಕರೇ ಎಚ್ಚರ, ಮಾ.16ರ ನಂತರ ನಿಮ್ಮ ಡೆಬಿಟ್​, ಕ್ರೆಡಿಟ್​ ಕಾರ್ಡ್​ ನಿಷ್ಕ್ರಿಯಗೊಳ್ಳಬಹುದು!

Credit Card vvani
Published on

ಬೆಂಗಳೂರು: ಆನ್​ಲೈನ್​ ವಹಿವಾಟಿಗೆ ಬಳಸದ ಡೆಬಿಟ್​ ಹಾಗೂ ಕ್ರೆಡಿಟ್​ ಕಾರ್ಡ್​ಗಳನ್ನು ಮಾ.16ರ ನಂತರ ಶಾಶ್ವತವಾಗಿ ನಿಷ್ಕ್ರಿಯಗೊಳಿಸುವುದಾಗಿ ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ತಿಳಿಸಿದೆ.

ಆನ್​ಲೈನ್​ ವಹಿವಾಟಿಗೆ ಒಮ್ಮೆಯೂ ಬಳಸದ ಕ್ರೆಡಿಟ್​ ಹಾಗೂ ಡೆಬಿಟ್​ ಕಾರ್ಡ್​ಗಳನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು ಆರ್​ಬಿಐ ಅಧಿಸೂಚನೆಯಲ್ಲಿ ತಿಳಿಸಿದೆ.

ಜನವರಿ 15ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಆರ್​ಬಿಐ ಡಿಜಿಟಲ್​ ವಹಿವಾಟು ಸುರಕ್ಷತೆಯನ್ನು ಹೆಚ್ಚಿಸಲು ಹಲವು ನಿರ್ಧಾರಗಳನ್ನು ಕೈಗೊಂಡಿದೆ. ಇದರಲ್ಲಿ ಆನ್​ಲೈನ್​ನಲ್ಲಿ ವಹಿವಾಟು ನಡೆಸದ ಕಾರ್ಡ್​ಗಳನ್ನು ನಿಷ್ಕ್ರಿಯಗೊಳಿಸುವ ನಿಯಮ ಕೂಡ ಇದೆ ಎಂದು ತಿಳಿಸಿದೆ. ನಿಷ್ಕ್ರಿಯಗೊಳಿಸಿದ ಕಾರ್ಡ್​ಗಳ ಹಣ ಪಾವತಿಗೆ ಅವಕಾಶ ಕಲ್ಪಿಲಾಗುವುದು ಎಂದು ಆರ್​ಬಿಐ ತಿಳಿಸಿದೆ.

ಆನ್​ಲೈನ್​ ವಹಿವಾಟು ನಡೆಸದ ಗ್ರಾಹಕರು ಬ್ಯಾಂಕ್​ಗೆ ತೆರಳಿ ಮಾಹಿತಿ ಪಡೆಯಬಹುದಾಗಿದೆ. ಕಾರ್ಡ್​ಗಳ ಬಗ್ಗೆ ಬ್ಯಾಂಕುಗಳು ಗ್ರಾಹಕರಿಗೆ ಮಾಹಿತಿ ನೀಡಬೇಕು ಎಂದು ಕೂಡ ಸೂಚಿಸಿದೆ. ನಿಷ್ಕ್ರಿಯಗೊಳಿಸುವ ಕಾರ್ಡ್​ಗಳ ಬಗ್ಗೆ ಗ್ರಾಹಕರಿಗೆ ಬ್ಯಾಂಕ್​ಗಳು ಮಾಹಿತಿ ನೀಡಬೇಕು. ನಿಷ್ಕ್ರಿಯಗೊಂಡ ಕಾರ್ಡ್​ಗಳನ್ನು ಮತ್ತೆ ಪಡೆಯಬೇಕಾದರೆ ಬ್ಯಾಂಕ್​ಗೆ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಆರ್​ಬಿಐ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net