ಕರೊನಾ ವಿಷಯದಲ್ಲಿ ಸದ್ಯ ಇವರೇ ಆತಂಕಕಾರಿ: ಆರೋಗ್ಯ ಪರಿಣತರು ಹೀಗಂದಿದ್ದೇಕೆ?

Corona
Published on

ನವದೆಹಲಿ: ಕರೊನಾ ಪ್ರಕರಣಗಳು ತಗ್ಗಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಬಹುತೇಕ ಎಲ್ಲವನ್ನೂ ಅನ್​ಲಾಕ್​ ಮಾಡಲಾಗಿದ್ದು, ಜನರೂ ಏನೋ ಬಿಡುಗಡೆ ಸಿಕ್ಕಂತೆ ನಿರಾಳರಾಗಿ ಓಡಾಡುತ್ತಿದ್ದಾರೆ. ಈ ನಡುವೆ ಆರೋಗ್ಯ ಪರಿಣತರು ಆತಂಕಗೊಂಡಿದ್ದು, ಎಚ್ಚರಿಕೆಯೊಂದನ್ನು ನೀಡಿದ್ದಾರೆ.

ಇನ್​ಸ್ಟಿಟ್ಯೂಟ್​ ಆಫ್​ ಲಿವರ್​ ಆ್ಯಂಡ್ ಬಿಲಿಯರಿ ಸೈನ್ಸಸ್ ಡೈರೆಕ್ಟರ್​ ಡಾ.ಎಸ್​.ಕೆ. ಸರಿನ್ ಅವರು ಇಂಥದ್ದೊಂದು ಎಚ್ಚರಿಕೆ ನೀಡಿದ್ದಾರೆ. ಸದ್ಯ ಕರೊನಾ ಎರಡನೇ ಅಲೆ ಇನ್ನೂ ಪೂರ್ತಿಯಾಗಿ ಮುಗಿದಿಲ್ಲ. ಮತ್ತೊಂದೆಡೆ ಜನರು ದಂಡಿಯಾಗಿ ಪ್ರವಾಸಕ್ಕೆ ತೆರಳುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ.

ದೇಶದ ನಾನಾ ಭಾಗದ ಜನರು ಗುಂಪಾಗಿ ಪರ್ವತ ಪ್ರದೇಶಗಳಿಗೆ ಪ್ರವಾಸ ಬರುತ್ತಿರುವುದಲ್ಲದೆ, ಕೋವಿಡ್​ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ನಡೆದುಕೊಳ್ಳುತ್ತಿದ್ದಾರೆ. ಇದರಿಂದ ಸೋಂಕು ಮತ್ತೆ ವ್ಯಾಪಕವಾಗಿ ಹರಡಿ, ಮಾರಕವಾಗಿ ಪರಿಣಮಿಸುವ ಸಾಧ್ಯತೆಗಳಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net