ಈ ಮೂರು ರಾಶಿಯಲ್ಲಿ ಜನಿಸಿದ ಮಹಿಳೆಯರು ಬೇಗ ಮದುವೆಯಾಗಲು ಬಯಸುತ್ತಾರಂತೆ! Zodiac Signs

Zodiac Signs
Published on

Zodiac Signs : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ. ಹಿಂದು ಧರ್ಮದಲ್ಲಿ ಈ ಜನ್ಮ ದಿನಾಂಕ ಮತ್ತು ಹುಟ್ಟಿದ ಗಳಿಗೆಯು ವ್ಯಕ್ತಿಯ ಜೀವನದ ಮೇಲೆ ಬಹಳ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.

ಹುಟ್ಟಿದ ದಿನ ಮತ್ತು ಗಳಿಗೆಯ ಆಧಾರದ ಮೇಲೆ ವ್ಯಕ್ತಿಯ ರಾಶಿ ಮತ್ತು ನಕ್ಷತ್ರಗಳನ್ನು ನಿರ್ಧರಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ರಾಶಿಚಕ್ರ ಚಿಹ್ನೆ ಮತ್ತು ನಕ್ಷತ್ರವು ಆತನ ಭವಿಷ್ಯ ಜೀವನ ಮತ್ತು ವ್ಯಕ್ತಿತ್ವ ಹಾಗೂ ಹಣಕಾಸಿನ ಸ್ಥಿತಿಯ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.

ಇಡೀ ಜ್ಯೋತಿಷ್ಯ ನಿಂತಿರುವುದು ಗ್ರಹಗಳ ಆಧಾರದ ಮೇಲೆ. ಏಕೆಂದರೆ, ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ. ಏನೇ ಕಹಿ ಘಟನೆ ನಡೆದರೆ ಅದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ ಎಂದು ಅನೇಕ ಮಂದಿ ನಂಬುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಮಹಿಳೆಯರು ಬಹು ಬೇಗನೇ ಮದುವೆಯಾಗಲು ಬಯಸುತ್ತಾರಂತೆ. ಇತರ ಮಹಿಳೆಯರಿಗೆ ಹೋಲಿಸಿದರೆ, ಯಾವ ರಾಶಿಯ ಮಹಿಳೆಯರು ಬೇಗನೆ ಮದುವೆಯಾಗಲು ಬಯಸುತ್ತಾರೆ ಅನ್ನೋದನ್ನು ನಾವೀಗ ತಿಳಿಯೋಣ.

ಕರ್ಕಾಟಕ ರಾಶಿ

ಚಂದ್ರನಿಂದ ಆಳಲ್ಪಡುವ ಕರ್ಕಾಟಕ ರಾಶಿಯ ಮಹಿಳೆಯರು ಸ್ವಾಭಾವಿಕವಾಗಿ ಪ್ರೀತಿ ಮತ್ತು ವಿವಾಹದತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಮನೆ ಮತ್ತು ಕುಟುಂಬದ ಭಾವನಾತ್ಮಕ ಭದ್ರತೆಯನ್ನು ಬಯಸುವ ಕಾರಣ ಅವರು ಶೀಘ್ರದಲ್ಲೇ ಮದುವೆಯಾಗಲು ಬಯಸುತ್ತಾರೆ. ಅವರು ಸ್ವಾಭಾವಿಕವಾಗಿಯೇ ಕಾಳಜಿಯುಳ್ಳವರು ಮತ್ತು ಚಿಕ್ಕ ವಯಸ್ಸಿನಿಂದಲೇ ಪ್ರೀತಿಗಾಗಿ ಹಾತೊರೆಯುತ್ತಾರೆ. ಸಂಬಂಧಗಳ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ.

ವೃಷಭ ರಾಶಿ

ಸೌಂದರ್ಯ ಮತ್ತು ಪ್ರೀತಿಯ ಗ್ರಹವಾದ ಶುಕ್ರನಿಂದ ಆಳಲ್ಪಡುವ ವೃಷಭ ರಾಶಿಯ ಮಹಿಳೆಯರು ಪ್ರೀತಿ ಮತ್ತು ವಿವಾಹದ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿರುತ್ತಾರೆ. ಪ್ರೀತಿಯ ವಿಷಯಕ್ಕೆ ಬಂದಾಗ ಅವರು ತುಂಬಾ ಸತ್ಯವಂತರು ಮತ್ತು ಪ್ರಾಮಾಣಿಕರು. ಅವರು ಸ್ವಾಭಾವಿಕವಾಗಿ ಪ್ರೀತಿಯನ್ನು ಗೌರವಿಸುತ್ತಾರೆ. ಜೀವನ ಸಂಗಾತಿಯನ್ನು ಆಯ್ಕೆ ಮಾಡಿದ ನಂತರ ಅವರು ತಡಮಾಡದೆ ಮದುವೆಯಾಗಲು ದೃಢನಿಶ್ಚಯ ಹೊಂದಿರುತ್ತಾರೆ. ಕಾರಣವೆಂದರೆ, ಈ ರಾಶಿಯವರು ನಿಜವಾದ ಪ್ರೇಮಿಗಳು ಮತ್ತು ತಮ್ಮ ಜೀವನದ ಕೊನೆಯವರೆಗೂ ಒಬ್ಬ ವ್ಯಕ್ತಿಯನ್ನು ಮಾತ್ರ ಪ್ರೀತಿಸಲು ಬಯಸುತ್ತಾರೆ. ಆದ್ದರಿಂದ, ಈ ರಾಶಿಚಕ್ರ ಚಿಹ್ನೆಯ ಮಹಿಳೆಯರು ಬೇಗನೆ ಮದುವೆಯಾಗಬೇಕೆಂಬ ಬಲವಾದ ಬಯಕೆಯನ್ನು ಹೊಂದಿರುತ್ತಾರೆ.

ತುಲಾ ರಾಶಿ

ತುಲಾ ರಾಶಿಯ ಮಹಿಳೆಯರನ್ನು ಲೌಕಿಕ ಸುಖಗಳ ಅಧಿಪತಿ ಶುಕ್ರನು ಆಳುತ್ತಾನೆ. ಆದ್ದರಿಂದ, ಈ ರಾಶಿಯವರು ಸಂಬಂಧಗಳಿಗೆ ಹೆಚ್ಚು ಬದ್ಧರಾಗಿರುತ್ತಾರೆ. ತಮ್ಮ ಜೀವನವನ್ನು ಹಂಚಿಕೊಳ್ಳಲು ಯಾರಾದರೂ ಜತೆಯಲ್ಲಿದ್ದಾಗ ತುಂಬಾ ಸಂತೋಷಪಡುತ್ತಾರೆ. ತಮ್ಮ ಸಂತೋಷ ಮತ್ತು ದುಃಖಗಳನ್ನು ಯಾರೊಂದಿಗಾದರೂ ಹಂಚಿಕೊಳ್ಳುವ ಬಲವಾದ ಬಯಕೆಯನ್ನು ಹೊಂದಿರುತ್ತಾರೆ. ಅವರು ಸ್ವಾಭಾವಿಕವಾಗಿ ತುಂಬಾ ಪ್ರಣಯವಂತರು. ಈ ಪ್ರಮುಖ ಗುಣಗಳಿಂದಾಗಿ, ಈ ರಾಶಿಚಕ್ರ ಚಿಹ್ನೆಯ ಮಹಿಳೆಯರು ಬೇಗನೇ ಮದುವೆಯಾಗಲು ಬಯಸುತ್ತಾರೆ. ತಾವು ಪ್ರೀತಿಸುವ ವ್ಯಕ್ತಿಯೊಂದಿಗೆ ಸುಂದರವಾದ ಮತ್ತು ಸಮತೋಲಿತ ಜೀವನವನ್ನು ರಚಿಸಲು ದೃಢನಿಶ್ಚಯ ಹೊಂದಿರುತ್ತಾರೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net